ಸೂಪರ್ ಮಾರ್ಕೆಟ್ ಒಂದರಲ್ಲಿ ಹೆಬ್ಬಾವು ಸೇರಿಕೊಂಡು ಜನರನ್ನು ಭಯಬೀಳಿಸಿದ ಮೂರು ಮೀಟರ್ ಉದ್ದದ ಹೆಬ್ಬಾವು ಅಂಗಡಿಯಲ್ಲಿ ಸಾಂಬಾರ ಪದಾರ್ಥಗಳನ್ನು ಜೋಡಿಸಿಟ್ಟಿದ್ದ ಶೆಲ್ಫಿನಲ್ಲಿ ಸೇರಿಕೊಂಡಿದೆ
ಬಹಳಷ್ಟು ಜನರು ಮನೆಯ ದಿನಸಿ ಖಾಲಿ ಆದರೆ ಶಾಪಿಂಗ್ ಮಾಲ್‌ಗಳಿಗೆ ಹೋಗಿ ದಿನಪೂರ್ತಿ ಅರಾಮವಾಗಿ ಕಾಲ ಕಳೆಯುತ್ತಾರೆ.
ದಿನ ಕೆಲಸದಿಂದ ಬೇಸತ್ತ ಜನರಿಗೆ ಶಾಪಿಂಗ್ ಒಂದು ನೆಮ್ಮದಿಯನ್ನು ತಂದುಕೊಡುತ್ತದೆ. ಆದರೆ ಆಸ್ಪ್ರೇಲಿಯಾದ ಸೂಪರ್ ಮಾರ್ಕೆಟ್ ಒಂದರಲ್ಲಿ ಹೆಬ್ಬಾವು ಸೇರಿಕೊಂಡು ಜನರನ್ನು ಭಯಬೀಳಿಸಿದ ಘಟನೆ ನಡೆದಿದೆ.
ಒಂದು ಹೆಣ್ಣಿನೊಂದಿಗೆ ಸರತಿಯಲ್ಲಿ ಕೂಡುವ 6 ಗಂಡು ಹಾವು : ಹೆಬ್ಬಾವಿನ ಕುತೂಹಲದ ಸಂತಾನೋತ್ಪತ್ತಿ ಕ್ರಿಯೆ
ಮೂರು ಮೀಟರ್ ಉದ್ದದ ಹೆಬ್ಬಾವು ಅಂಗಡಿಯಲ್ಲಿ ಸಾಂಬಾರ ಪದಾರ್ಥಗಳನ್ನು ಜೋಡಿಸಿಟ್ಟಿದ್ದ ಶೆಲ್ಫಿನಲ್ಲಿ ಸೇರಿಕೊಂಡಿದೆ. ಜನರು ಆ ಶೆಲ್ಫನಲ್ಲಿ ಹುಡುಕುವಾಗ ಹಾವು ಕಾಣಿಸಿಕೊಂಡು ಅಲ್ಲಿದ್ದವರಿಗೆ ಹೆದರಿಕೆ ಹುಟ್ಟಿಸಿದೆ.
ಅಂಗಡಿಯೊಳಗೆ ಹಾವು ಹರಿದಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಅಟ್ಲಿ ಎನ್ನುವ ವ್ಯಕ್ತಿ ಆಸ್ಪ್ರೇಲಿಯಾದಲ್ಲಿ ಹೊಸ ಸಾಂಬಾರ ಪದಾರ್ಥ ಸಿಕ್ಕಿದೆ ಎಂಬ ಉಕ್ಕಣೆಯೊಡನೆ ವಿಡಿಯೋ ಪೋಸ್ಟ್ ಮಾಡಿದ್ದಾನೆ.
