ಲಂಡನ್, ಪ್ಯಾರಿಸ್ ಮೇಲೆ ಪರಮಾಣು ಬಾಂಬ್ ದಾಳಿ: ಉಕ್ರೇನ್‌ಗೆ ಸೇನೆ ಕಳಿಸದಂತೆ ರಷ್ಯಾ ಎಚ್ಚರಿಕೆ
ಉಕ್ರೇನ್‌ಗೆ ಅಮೆರಿಕ ನೇತೃತ್ವದ ನ್ಯಾಟೋ ದೇಶಗಳ ಬೆಂಬಲ ಮುಂದುವರೆದಿರುವ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಷ್ಯಾ, ಒಂದು ವೇಳೆ ಉಕ್ರೇನ್‌ಗೆ ನ್ಯಾಟೋ ತನ್ನ ಸೇನೆಯನ್ನು ಕಳುಹಿಸಿದರೆ ಪರಿಸ್ಥಿತಿ ಗಂಭೀರವಾಗಲಿದೆ.
ಮಾಸ್ಕೋ (ಮೇ.10): ಉಕ್ರೇನ್‌ಗೆ ಅಮೆರಿಕ ನೇತೃತ್ವದ ನ್ಯಾಟೋ ದೇಶಗಳ ಬೆಂಬಲ ಮುಂದುವರೆದಿರುವ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಷ್ಯಾ, ಒಂದು ವೇಳೆ ಉಕ್ರೇನ್‌ಗೆ ನ್ಯಾಟೋ ತನ್ನ ಸೇನೆಯನ್ನು ಕಳುಹಿಸಿದರೆ ಪರಿಸ್ಥಿತಿ ಗಂಭೀರವಾಗಲಿದೆ. ನಾವು ನ್ಯಾಟೋ ದೇಶಗಳಾದ ಬ್ರಿಟನ್ ರಾಜಧಾನಿ ಲಂಡನ್ ಮತ್ತು ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಮೇಲೆ ಪರಮಾಣು ಬಾಂಬ್ ದಾಳಿ ನಡೆಸಬೇಕಾಗುತ್ತದೆ ಎಂದು ರಷ್ಯಾ ಎಚ್ಚರಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಷ್ಯಾದ ಮಾಜಿ ಅಧ್ಯಕ್ಷ ಮತ್ತು ಹಾಲಿ ಅಧ್ಯಕ್ಷ ಪುಟಿನ್ ಅತ್ಯಾಪ್ತ ಡಿಮಿಟ್ರಿ ಮೆದ್ವದೇವ್, 'ಕೆಲವು ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಸೇನೆಯನ್ನು ಕಳುಹಿಸುತ್ತಿವೆ. ನ್ಯಾಟೋ ಪಡೆಗಳು ನೇರವಾಗಿ ಯುದ್ಧದಲ್ಲಿ ನಿರತವಾಗಿದೆ. ರಷ್ಯಾ ಇದಕ್ಕೆ ಪ್ರತಿಕ್ರಿಯಿಸುತ್ತದೆ. ಆದರೆ ಉಕ್ರೇನ್ ಗಡಿಯಲ್ಲಿ ಅಲ್ಲ ಎನ್ನುವ ಮೂಲಕ ನ್ಯಾಟೋ ಸದಸ್ಯತ್ವ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಅಮೆರಿಕ, ಬ್ರಿಟನ್, ಫ್ರಾನ್ಸ್, ಪೋಲೆಂಡ್ ಮತ್ತು ಬಾಲ್ಟಿಕ್ ದೇಶಗಳು ಉಕ್ರೇನ್‌ಗೆ ತಮ್ಮ ಯೋಧರನ್ನು ಕಳುಹಿಸುವ ಪ್ರಸ್ತಾಪ ಮಾಡಿದ್ದವು.
ಮಾಸ್ಕೋ ದಾಳಿಯ ವಿಡಿಯೋ ಬಿಡುಗಡೆ ಮಾಡಿದ ಐಸಿಸ್: 133 ಜನರನ್ನು ಬಲಿ ಪಡೆದ ಶುಕ್ರವಾರ ರಾತ್ರಿಯ ಮಾಸ್ಕೋ ಮಾಲ್‌ನ ಉಗ್ರ ದಾಳಿಯ ಕುರಿತ ವಿಡಿಯೋವೊಂದನ್ನು ಸ್ವತಃ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಸಂಘಟನೆ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ನಾಲ್ವರು ಉಗ್ರರು ಕೈಯಲ್ಲಿ ಗನ್ ಹಿಡಿದು ಮಾಸ್ಕೋ ನಗರದ ಕ್ರೋಕಸ್ ಸಿಟಿ ಹಾಲ್‌ನೊಳಗೆ ಪ್ರವೇಶ ಮಾಡುತ್ತಿರುವ, ಆಗಾಗ್ಗೆ ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯಗಳಿವೆ. ಜೊತೆಗೆ ಉಗ್ರರು ಮಾತನಾಡುತ್ತಿರುವ ಅಸ್ಪಷ್ಟ ಧ್ವನಿ ಕೂಡಾ ವಿಡಿಯೋದಲ್ಲಿ ದಾಖಲಾಗಿದೆ.
ನೆಹರು ಮೀಸಲು ವಿರೋಧಿ: ಹಳೆ ಸುದ್ದಿ ತುಣಕು ಉಲ್ಲೇಖಿಸಿ ಕಾಂಗ್ರೆಸ್‌ಗೆ ಬಿಜೆಪಿ ನಾಯಕರ ಟಾಂಗ್
ಇದಲ್ಲದೆ ಉಗ್ರರು ಹಾಲ್‌ನೊಳಗಿದ್ದ ಜನರನ್ನು ಗುಂಡಿನ ದಾಳಿ ನಡೆಸುತ್ತಿರುವ, ಗುಂಡೇಟು ತಿಂದು ನೆಲಕ್ಕೆ ಉರುಳಿರುವ ಜನರು ವಿಡಿಯೋದಲ್ಲಿ ಕಾಣಸಿಕ್ಕಿದ್ದಾರೆ. ದಾಳಿಕೋರರೇ ದೃಶ್ಯ ಸೆರೆ ಹಿಡಿದು ತಮ್ಮ ನಾಯಕರಿಗೆ ಶೇರ್ ಮಾಡಿದ್ದರು. ಐಸಿಸ್‌ನ ಸುದ್ದಿ ವಿಭಾಗವಾದ ಅಮಕ್ ಎಂಬ ಟೆಲಿಗ್ರಾಂ ತಾಣದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಶುಕ್ರವಾರ ರಾತ್ರಿ ಉಗ್ರರು ದಾಳಿ ನಡೆಸುತ್ತಲೇ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶೌಚಾಲಯವೊಂದರಲ್ಲಿ ಅಡಗಿಕೊಂಡಿದ್ದ 28 ಜನರನ್ನು ಉಗ್ರರು ಅಲ್ಲೇ ಹತ್ಯೆ ಮಾಡಿದ್ದಾರೆ. ಈ ಎಲ್ಲಾ ಶವಗಳು ಶನಿವಾರ ಪತ್ತೆಯಾಗಿವೆ. ಇನ್ನು ತುರ್ತು ನಿರ್ಗಮನಕ್ಕೆ ಇರುವ ಮೆಟ್ಟಿಲುಗಳ ಮೇಲೂ 14 ಶವಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.