Asianet Suvarna News Asianet Suvarna News

ಚೀನಾದಲ್ಲಿ ಈಗ ಒಬ್ಬ ಬಡವನೂ ಇಲ್ಲವಂತೆ!

ಚೀನಾದಲ್ಲಿ ಬ​ಡ​ತನ ನಿರ್ಮೂ​ಲ​ನೆ​ಯಂತೆ!| 10 ವರ್ಷ ಮೊದಲೇ ಬಡತನ ನಿರ್ಮೂ​ಲ​ನೆ ಗುರಿ ತಲುಪಿದ ಚೀನಾ

President Xi Jinping declares complete victory in eradicating poverty in China pod
Author
Bangalore, First Published Feb 26, 2021, 9:24 AM IST

ಬೀಜಿಂಗ್(ಫೆ.26): ವಿಶ್ವಾ​ದ್ಯಂತ ಬಡ​ತನ ನಿರ್ಮೂ​ಲ​ನೆಗೆ ವಿಶ್ವ​ಸಂಸ್ಥೆಯೇ 2030ರ ಗುರಿ ಹಾಕಿ​ಕೊಂಡಿದೆ. ಆದರೆ ಅದಕ್ಕೂ 10 ವರ್ಷ​ಗಳ ಮುಂಚಿ​ತ​ವಾ​ಗಿಯೇ ನಾವು ನಮ್ಮ ದೇಶ​ದಲ್ಲಿ​ರುವ 77 ಕೋಟಿ ಜನ​ರನ್ನು ಬಡ​ತ​ನ​ದಿಂದ ಮೇಲೆ​ತ್ತಿ​ದ್ದೇವೆ. ತನ್ಮೂ​ಲಕ ಕೇವಲ ನಾಲ್ಕು ದಶ​ಕ​ಗ​ಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ರಾಷ್ಟ್ರ ನಮ್ಮದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌​ಪಿಂಗ್‌ ಘೋಷಣೆ ಮಾಡಿ​ದ್ದಾರೆ. ತನ್ಮೂ​ಲಕ ಜಾಗ​ತಿಕ ಬಡ​ತನ ನಿರ್ಮೂ​ಲ​ನೆಗೆ ಚೀನಾ ಸರ್ಕಾರ ಶೇ.70ರಷ್ಟುಕೊಡುಗೆ ನೀಡಿ​ದಂತಾ​ಗಿದೆ.

ಚೀನಾದಲ್ಲಿ ವಾರ್ಷಿಕ ತಲಾ​ದಾಯ 620 ಡಾಲ​ರ್‌​(45,100 ರು.)ಗಿಂತ ಕಡಿಮೆ ಇರುವ ಗ್ರಾಮೀಣ ಜನ​ರನ್ನು ಬಡ​ವರು ಎಂದು ಗುರು​ತಿ​ಸ​ಲಾ​ಗು​ತ್ತದೆ. ಈ ಪ್ರಕಾರ 2012ರ ಹೊತ್ತಿ​ನಲ್ಲಿ ಚೀನಾದ ಗ್ರಾಮೀಣ ಮತ್ತು ಕುಗ್ರಾ​ಮ​ಗ​ಳಲ್ಲಿ 10 ಕೋಟಿ​ಯಷ್ಟುಬಡ​ ಜ​ನರಿದ್ದರು. ಈ ಪೈಕಿ 2.5 ಕೋಟಿ ಜನರ ಶಿಥಿ​ಲಾ​ವ​ಸ್ಥೆಗೆ ತಲು​ಪಿದ್ದ 79 ಲಕ್ಷ ಮನೆ​ಗ​ಳನ್ನು ಪುನರ್‌ ನಿರ್ಮಾಣ ಮಾಡ​ಲಾಯಿತು. 96 ಲಕ್ಷ ಜನ​ರನ್ನು ಉತ್ತಮ ಸ್ಥಳ​ಗ​ಳತ್ತ ಸ್ಥಳಾಂತ​ರಿ​ಸ​ಲಾ​ಗಿದೆ.

ಅಲ್ಲದೆ ಬಡ​ತ​ನಕ್ಕೆ ಸಿಲು​ಕಿದ್ದ 28 ಅಲ್ಪ​ಸಂಖ್ಯಾತ ವರ್ಗ​ಗಳನ್ನು ಸಹ ಮೇಲೆ​ತ್ತ​ಲಾ​ಗಿ​ದೆ​ಯಂತೆ. ತನ್ಮೂ​ಲಕ ತಾವು 2012ರಲ್ಲಿ ಅಧಿ​ಕಾ​ರದ ಗದ್ದು​ಗೆ​ಗೇ​ರಿದ ಬಳಿಕ ಆಡ​ಳಿ​ತ​ದಲ್ಲಿ ಹಾಸು​ಹೊ​ಕ್ಕಾ​ಗಿದ್ದ ಭ್ರಷ್ಟಾ​ಚಾರಕ್ಕೆ ಕಡಿ​ವಾ​ಣದ ಜೊತೆಗೆ ಬಡ​ವ​ರನ್ನು ಮೇಲೆ​ತ್ತುವ ಕಾರ್ಯ​ವನ್ನು ತ್ವರಿ​ತ​ಗೊ​ಳಿ​ಸ​ಲಾ​ಯಿತು. ಇದ​ರಿಂದಾಗಿ ಈ ಐತಿ​ಹಾ​ಸಿಕ ಸಾಧನೆ ಮಾಡಿ​ದ್ದೇವೆ ಎಂದಿ​ದ್ದಾರೆ ಕ್ಸಿ ಜಿನ್‌​ಪಿಂಗ್‌.

Follow Us:
Download App:
  • android
  • ios