ವ್ಯಾಟಿಕನ್‌ ಸಿಟಿ[ಮಾ.04]: ಶೀತ, ಕಫ ಹಾಗೂ ಕೆಮ್ಮಿನಿಂದ ಬಳಲಿದ್ದ ಕ್ರೈಸ್ತರ ಪರಮೋಚ್ಛ ಗುರು ಪೋಪ್‌ ಫಾನ್ಸಿಸ್‌ ಅವರಿಗೆ ಕೊರೋನಾ ಸೋಂಕು ತಗುಲಲಿಲ್ಲ ಎಂದು ಎಂದು ಇಟಲಿಯ ಪತ್ರಿಕೆಯೊಂದು ವರದಿ ಮಾಡಿದೆ.

ಕಳೆದ ಶನಿವಾರ ಇದಕ್ಕಿದ್ದಂತೆ ಶೀತ, ಕೆಮ್ಮಿನಿಂದ ಬಳಲಿದ್ದ ಅವರು ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರು. ಕೊರೋನಾ ಹರಡುತ್ತಿರುವ ವೇಳೆಯಲ್ಲೇ ಕಾಡಿದ್ದ ಈ ಅನಾರೋಗ್ಯ ಆತಂಕಕ್ಕೆ ಎಡೆ ಮಾಡಿ ಕೊಟ್ಟಿತ್ತು. ಆ ಬಳಿಕ ಅವರಿಗೆ ಪರೀಕ್ಷೆ ಮಾಡಲಾಗಿದ್ದು ಸೋಂಕು ಅಂಟಿಲ್ಲ ಎಂದು ಪತ್ರಿಕೆ ಹೇಳಿದೆ.

ಇಟಲಿಯಲ್ಲಿ ಈವರೆಗೆ 2000 ಮಂದಿಗೆ ಸೋಂಕು ತಾಕಿದ್ದು, 52 ಮಂದಿ ಮೃತ ಪಟ್ಟಿದ್ದಾರೆ.