ಅಮೆರಿಕಕ್ಕೆ ಕೊನೆಗೂ ಮಿತ್ರ ದೇಶಗಳು ನೆರವಿನ ಅಭಯ ನೀಡಿವೆ. ಹೋರ್ಮಜ್‌ಲ್ಲಿನ ತೈಲ ಹಡಗುಗಳ ಮುಕ್ತ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವ ಇರಾನ್‌ ವಿರುದ್ಧ ಜಂಟಿ ಹೇಳಿಕೆ ನೀಡಿರುವ ಕೆಲ ದೇಶಗಳು, ಬ್ರಿಟನ್‌ ಮತ್ತು ಜಪಾನ್‌, ಇಂಧನ ಮಾರುಕಟ್ಟೆ ಸ್ಥಿರೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿವೆ.

ವಾಷಿಂಗ್ಟನ್‌: ಇರಾನ್ ಮೇಲೆ ಯುದ್ಧದಲ್ಲಿ ಇಸ್ರೇಲ್‌ ಬೆಂಬಲ ಹೊರತುಪಡಿಸಿ ಉಳಿದಂತೆ ಏಕಾಂಗಿಯಾಗಿದ್ದ ಅಮೆರಿಕಕ್ಕೆ ಕೊನೆಗೂ ಮಿತ್ರ ದೇಶಗಳು ನೆರವಿನ ಅಭಯ ನೀಡಿವೆ. ಹೋರ್ಮಜ್‌ ಜಲಸಂಧಿಯಲ್ಲಿನ ತೈಲ ಹಡಗುಗಳ ಮುಕ್ತ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವ ಇರಾನ್‌ ವಿರುದ್ಧ ಜಂಟಿ ಹೇಳಿಕೆ ನೀಡಿರುವ ಕೆಲ ಯುರೋಪಿಯನ್‌ ದೇಶಗಳು, ಬ್ರಿಟನ್‌ ಮತ್ತು ಜಪಾನ್‌, ಇಂಧನ ಮಾರುಕಟ್ಟೆ ಸ್ಥಿರೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿವೆ.

Add Asianetnews Kannada as a Preferred SourcegooglePreferred

ಈ ಕುರಿತು ಜಂಟಿ ಹೇಳಿಕೆ ನೀಡಿರುವ ಈ ದೇಶಗಳು, ‘ಸಮುದ್ರ ವಲಯದಲ್ಲಿನ ಸಂಚಾರವು ಅಂತಾರಾಷ್ಟ್ರೀಯ ನಿಯಮಗಳ ಅನ್ವಯ ಮೂಲಭೂತ ತತ್ವವಾಗಿದೆ. ಹೋರ್ಮಜ್‌ ಜಲಸಂಧಿಯಲ್ಲಿನ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ತಡೆಯೊಡ್ಡುವ, ಆ ವಲಯದಲ್ಲಿ ಸ್ಫೋಟಕಗಳನ್ನು ಇರಿಸುವ, ಡ್ರೋನ್‌, ಕ್ಷಿಪಣಿ ದಾಳಿಯನ್ನು ಬೆದರಿಕೆಯನ್ನು ತಕ್ಷಣವೇ ನಿಲ್ಲಿಸುವಂತೆ ನಾವು ಒತ್ತಾಯಿಸುತ್ತೇವೆ. ಅಂತಾರಾಷ್ಟ್ರೀಯ ಹಡಗುಗಳ ಸಂಚಾರಕ್ಕೆ ಅಡ್ಡಿಯು ಜಾಗತಿಕ ಇಂಧನ ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ಜಾಗತಿಕ ಶಾಂತಿ ಹಾಗೂ ಭದ್ರತೆಗೂ ಅಪಾಯಕಾರಿ’ ಎಂದು ಹೇಳಿವೆ.ಈ ಹೇಳಿಕೆಗೆ ಬ್ರಿಟನ್‌, ಪ್ರಾನ್ಸ್‌, ಜರ್ಮನಿ, ಇಟಲಿ, ನೆದರ್ಲೆಂಡ್‌ ಮತ್ತು ಜಪಾನ್‌ ಸಹಿಹಾಕಿವೆ.

ಇಸ್ರೇಲ್‌ಗೆ ‘ಮಿಸೈಲ್‌ ಸರ್‌ಪ್ರೈಸ್‌’ ಕೊಡ್ತೇವೆಂದ ಬೆನ್ನಲ್ಲೇ ದಾಳಿಗೆ

ಟೆಹ್ರಾನ್‌: ಶತ್ರುದೇಶ ಇಸ್ರೇಲ್‌ ಮೇಲೆ ‘ಮಿಸೈಲ್‌ ಸರ್ಪ್ರೈಸ್‌’ (ಕ್ಷಿಪಣಿಯ ಅಚ್ಚರಿ) ಬರುತ್ತಿದೆ ಎಂದು ಹೇಳಿಕೆ ನೀಡಿದ ಕೆಲವೇ ಗಂಟೆಯಲ್ಲಿ ಇರಾನ್‌ನ ಉನ್ನತ ಅಧಿಕಾರಿಯೊಬ್ಬರು ಅಮೆರಿಕ-ಇಸ್ರೇಲ್‌ ವಾಯುದಾಳಿಗೆ ಬಲಿಯಾಗಿದ್ದಾರೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್‌ನ ಮುಖ್ಯ ವಕ್ತಾರ ಮತ್ತು ಬ್ರಿಗೇಡಿಯರ್ ಜನರಲ್ ಅಲಿ ಮೊಹಮ್ಮದ್ ನೈನಿ ಮೃತಪಟ್ಟವರು.‘ಇರಾನ್ ಇನ್ನು ಯುರೇನಿಯಂ ಸಂಸ್ಕರಣೆ ಮಾಡಲು ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸಲು ಸಾಧ್ಯವಿಲ್ಲ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿಕೆ ನೀಡಿದ್ದರು.

ಕ್ಷಿಪಣಿ ಉತ್ಪಾದನೆಯನ್ನು ಮುಂದುವರೆಸುತ್ತಿದ್ದೇವೆ

ಇದಕ್ಕೆ ಪ್ರತಿಕ್ರಿಯಿಸಿದ ನೈನಿ, ‘ಯುದ್ಧಸ್ಥಿತಿಯಲ್ಲಿಯೂ ನಾವು ಕ್ಷಿಪಣಿ ಉತ್ಪಾದನೆಯನ್ನು ಮುಂದುವರೆಸುತ್ತಿದ್ದೇವೆ. ನಮ್ಮ ಕ್ಷಿಪಣಿ ಉದ್ಯಮವು ಅತ್ಯುನ್ನತ ಮಟ್ಟಕ್ಕೆ ತಲುಪಿದೆ. ಶತ್ರುವಿಗೆ ಸರ್ಪ್ರೈಸ್‌ಗಳು ಬರುತ್ತಿವೆ’ ಎಂದು ಪರಿಹಾಸ್ಯ ಮಾಡಿದ್ದರು.

ಅಲ್ಲದೆ, ‘ಅಮೆರಿಕ ಅಧ್ಯಕ್ಷ ಟ್ರಂಪ್ ಪರ್ಷಿಯನ್ ಗಲ್ಫ್‌ಗೆ ತಮ್ಮ ಹಡಗುಗಳನ್ನು ಕಳುಹಿಸಿ ನೋಡಲಿ’ ಎಂದು ಸವಾಲು ಹಾಕಿದ್ದರು. ಅವರ ಈ ಹೇಳಿಕೆಯ ಕೆಲವೇ ಗಂಟೆಗಳಲ್ಲಿ ಅಮೆರಿಕ-ಇಸ್ರೇಲ್ ವಾಯುದಾಳಿಯಲ್ಲಿ ನೈನಿ ಹುತಾತ್ಮರಾಗಿದ್ದಾರೆ ಎಂದು ಐಆರ್‌ಜಿಸಿ ಘೋಷಿಸಿದೆ.