ಪೋಪ್ ಫ್ರಾನ್ಸಿಸ್ ಅವರು ಬ್ಯೂನಸ್ ಐರಿಸ್‌ನ ಆರ್ಚ್‌ಬಿಷಪ್ ಆಗಿದ್ದಾಗ, ಅರ್ಜೆಂಟೀನಾ ಸರ್ಕಾರವು 1970 ರ ಮಿಲಿಟರಿ ಅಧಿಕಾರಕ್ಕೆ ಸಹಕರಿಸಿದ್ದರು ಎನ್ನುವ ಸುಳ್ಳು ಆರೋಪಗಳನ್ನು ಹೊರಿಸಲಾಗಿತ್ತು. ಇದೇ ಕಾರಣವನ್ನು ಇಟ್ಟುಕೊಂಡ ನನ್ನ ತಲೆಯನ್ನು ಕತ್ತರಿಸಲು ಬಯಸಿತ್ತು ಎಂದು ಹೇಳಿದ್ದಾರೆ.

ನವದೆಹಲಿ (ಮೇ.10): ಪೋಪ್ ಫ್ರಾನ್ಸಿಸ್ ಅವರು ಒಂದು ದಶಕದ ಹಿಂದೆ ಬ್ಯೂನಸ್ ಐರಿಸ್‌ನ ಆರ್ಚ್‌ಬಿಷಪ್ ಆಗಿದ್ದಾಗ, ಅರ್ಜೆಂಟೀನಾ ಸರ್ಕಾರವು 1970 ರ ಮಿಲಿಟರಿ ಸರ್ವಾಧಿಕಾರದೊಂದಿಗೆ ಸಹಕರಿಸಿದ್ದಾರೆ ಎಂಬ ಸುಳ್ಳು ಆರೋಪಗಳನ್ನು ನನ್ನ ಮೇಲೆ ಹೊರಿಸುವ ಮೂಲಕ "ನನ್ನ ತಲೆಯನ್ನು ಕತ್ತರಿಸಲು" ಬಯಸಿತ್ತು ಎಂದು ಬಹಿರಂಗಪಡಿಸಿದ್ದಾರೆ. ಫ್ರಾನ್ಸಿಸ್ ಅವರು ಏಪ್ರಿಲ್ 29 ರಂದು ಹಂಗೇರಿಗೆ ಭೇಟಿ ನೀಡಿದಾಗ ಜೆಸ್ಯೂಟ್‌ಗಳೊಂದಿಗಿನ ಖಾಸಗಿ ಸಂಭಾಷಣೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಫ್ರಾನ್ಸಿಸ್‌ ಕೂಡ ಜೆಸ್ಯೂಟ್‌ ಆಗಿದ್ದು, ಇಂಥ ಸಭೆಗಳ ನಂತರ ವಾಡಿಕೆಯಂತೆ ಕಾಮೆಂಟ್‌ಗಳನ್ನು ಇಟಾಲಿಯನ್ ಜೆಸ್ಯೂಟ್ ಜರ್ನಲ್ ಸಿವಿಲ್ಟಾ ಕ್ಯಾಟೊಲಿಕಾದಲ್ಲಿ ಮಂಗಳವಾರ ಪ್ರಕಟಿಸಲಾಗಿದೆ. ಫ್ರಾನ್ಸಿಸ್ ಅವರ ಭೇಟಿಯ ಸಮಯದಲ್ಲಿ, ಜೆಸ್ಯೂಟ್ಸ್ ಧಾರ್ಮಿಕ ಕ್ರಮದ ಹಂಗೇರಿಯನ್ ಸದಸ್ಯರೊಬ್ಬರು ಹಂಗೇರಿಯನ್ ಮೂಲದ ಜೆಸ್ಯೂಟ್ ಆಗಿರುವ ಫಾದರ್ ಫ್ರೆಂಕ್ ಜಲಿಕ್ ಅವರೊಂದಿಗಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಬ್ಯೂನಸ್ ಐರಿಸ್ ಷಾಂಟಿಟೌನ್‌ನಲ್ಲಿ ಇವರು ಸಾಮಾಜಿಕ ಕೆಲಸ ಮಾಡಿದ್ದಲ್ಲದೆ, ಮತ್ತು ಎಡಪಂಥೀಯ ಗೆರಿಲ್ಲಾಗಳಿಗೆ ಸಹಾಯ ಮಾಡಿದ್ದಾರೆ ಎಂಬ ಅನುಮಾನದ ಮೇಲೆ ಮಿಲಿಟರಿಯಿಂದ ಬಂಧ ಮಾಡಲಾಗಿತ್ತು.

ಜಲಿಕ್ಸ್ ಅನ್ನು 1976 ರಲ್ಲಿ ಮತ್ತೊಬ್ಬ ಜೆಸ್ಯೂಟ್ ಪಾದ್ರಿ, ಉರುಗ್ವೆಯ ಒರ್ಲ್ಯಾಂಡೊ ಯೊರಿಯೊ ಜೊತೆಗೆ ಬಂಧಿಸಲಾಯಿತು. ಯೊರಿಯೊ 2000 ರಲ್ಲಿ ನಿಧನರಾದರು ಮತ್ತು ಜಲಿಕ್ಸ್ 2021 ರಲ್ಲಿ ನಿಧನರಾದರು. ಫ್ರಾನ್ಸಿಸ್ 2013 ರಲ್ಲಿ ಪೋಪ್ ಆಗಿ ಚುನಾಯಿತರಾದಾಗ, ಅರ್ಜೆಂಟೀನಾದ ಪತ್ರಕರ್ತರೊಬ್ಬರು ಫ್ರಾನ್ಸಿಸ್ ಅವರು ಫಾದರ್ ಜಾರ್ಜ್ ಮಾರಿಯೋ ಬರ್ಗೋಗ್ಲಿಯೊ ಮತ್ತು ಎಡಪಂಥೀಯರ ವಿರುದ್ಧ ಮಿಲಿಟರಿಯ ಕೆಟ್ಟ ಯುದ್ಧದ ಸಮಯದಲ್ಲಿ ಅರ್ಜೆಂಟೀನಾದ ಜೆಸ್ಯೂಟ್‌ಗಳ ಉನ್ನತರಾಗಿದ್ದಾಗ ಇಬ್ಬರು ಪಾದ್ರಿಗಳಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.

ಸೆಕ್ಸ್‌ ಅನ್ನೋದು ದೇವರು ಮಾನವನಿಗೆ ನೀಡಿದ ಅದ್ಭುತ ಸಂಗತಿ, ಪೋಪ್‌ ಫ್ರಾನ್ಸಿಸ್‌ ಮಾತು!

"ಪರಿಸ್ಥಿತಿ (ಸರ್ವಾಧಿಕಾರದ ಅವಧಿಯಲ್ಲಿ) ನಿಜವಾಗಿಯೂ ತುಂಬಾ ಗೊಂದಲಮಯವಾಗಿತ್ತು ಮತ್ತು ಅನಿಶ್ಚಿತವಾಗಿತ್ತು. ನಂತರ ನಾನು ಅವರನ್ನು ಜೈಲಿಗೆ ಒಪ್ಪಿಸಿದ್ದೇನೆ ಎಂದು ಕಟ್ಟುಕಥೆಯನ್ನೂ ರೂಪಿಸಲಾಯಿತು' ಎಂದು ಫ್ರಾನ್ಸಿಸ್ ಹೇಳಿದ್ದಾರೆ.

ಪಾದ್ರಿಗಳು, ಕ್ರೈಸ್ತ ಸನ್ಯಾಸಿನಿಯರು ಕೂಡ Porn ವೀಕ್ಷಿಸ್ತಾರೆ, ಅಪಾಯದ ಎಚ್ಚರಿಕೆ ನೀಡಿದ ಪೋಪ್‌!

ಮೊದಲಿನಿಂದಲೂ ಪೋಪ್‌ ಫ್ರಾನ್ಸಿಸ್‌ ಇದನ್ನು ನಿರಾಕರಿಸುತ್ತಲೇ ಬಂದಿದ್ದರು. ಅವರು ಪೋಪ್‌ ಆಗಿ ನಿಯುಕ್ತರಾದಾಗ ಹೇಳಿಕೆಯನ್ನು ಬಿಡುಗಡೆ ಮಾಅಡಿದ್ದ ಜಾಲಿಕ್‌, ತನ್ನ ಬಂಧನವು ಭವಿಷ್ಯದ ಪೋಪ್‌ ಆಗಲಿರುವ ವ್ಯಕ್ತಿಯ ತಪ್ಪಾಗಿರಲಿಲ್ಲ ಎಂದಿದ್ದರು. 2010 ರಲ್ಲಿ, ಭವಿಷ್ಯದ ಪೋಪ್ ಬ್ಯೂನಸ್ ಐರಿಸ್‌ನ ಆರ್ಚ್‌ಬಿಷಪ್‌ ಆಗಿದ್ದರು, ಅವರು ಸರ್ವಾಧಿಕಾರದ ಅವಧಿಯನ್ನು ತನಿಖೆ ಮಾಡುವ ಮೂರು ನ್ಯಾಯಾಧೀಶರ ಸಮಿತಿಯ ಮುಂದೆ ಸಾಕ್ಷ್ಯ ನೀಡಿದರು. "ಸರ್ಕಾರದ ಕೆಲವು ಜನರು 'ನನ್ನ ತಲೆಯನ್ನು ಕತ್ತರಿಸಲು' ಬಯಸಿದ್ದರು ... (ಆದರೆ) ಕೊನೆಯಲ್ಲಿ ನನ್ನ ಪ್ರಾಮಾಣಿಕತೆಗೆ ಗೆಲುವಾಯಿತು" ಎಂದು ಫ್ರಾನ್ಸಿಸ್ ಹೇಳಿದ್ದಾರೆ.
ಪೋಪ್ ಇದರ ವಿವರಗಳನ್ನು ನೀಡಲಿಲ್ಲವಾದರೂ, ಬ್ಯೂನಸ್ ಐರಿಸ್‌ನ ಆರ್ಚ್‌ಬಿಷಪ್ ಆಗಿ, ಅವರು 2007-2015 ರವರೆಗೆ ಆ ಪಾತ್ರದಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಅವರ ಸರ್ಕಾರದೊಂದಿಗೆ ಆಗಾಗ್ಗೆ ಕೆಟ್ಟ ಸಂಬಂಧವನ್ನು ಹೊಂದಿದ್ದರು.