ಪಾದ್ರಿಗಳು, ಕ್ರೈಸ್ತ ಸನ್ಯಾಸಿನಿಯರು ಕೂಡ Porn ವೀಕ್ಷಿಸ್ತಾರೆ, ಅಪಾಯದ ಎಚ್ಚರಿಕೆ ನೀಡಿದ ಪೋಪ್!
ಆನ್‌ಲೈನ್ ಪೋರ್ನೋಗ್ರಫಿ ಬಗ್ಗೆ ವಿಶ್ವದ ಅತಿದೊಡ್ಡ ಕ್ರಿಶ್ಚಿಯನ್ ಧಾರ್ಮಿಕ ಮುಖಂಡ ಪೋಪ್ ಫ್ರಾನ್ಸಿಸ್ ಅವರು ಮಾತನಾಡಿದ್ದು, ಇದು ಪಾದ್ರಿಗಳ ಹೃದಯದಲ್ಲಿ ಪೈಶಾಚಿಕತೆಗೆ ಕಾರಣವಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಕ್ರೈಸ್ತ ಪಾದ್ರಿಗಳು ಹಾಗೂ ಸನ್ಯಾಸಿನಿಯರೂ ಪೋರ್ನ್ ನೋಡುತ್ತಾರೆ ಎಂದು ಒಪ್ಪಿಕೊಂಡಿರುವ ಅವರು, ತಕ್ಷಣವೇ ಇದನ್ನೆಲ್ಲಾ ಮೊಬೈಲ್‌ನಿಂದ ಡಿಲೀಟ್ ಮಾಡಬೇಕು ಎಂದಿದ್ದಾರೆ.
ನವದೆಹಲಿ (ಅ. 27): ವ್ಯಾಟಿಕನ್ ಸಿಟಿ ಕ್ಯಾಥೋಲಿಕ್ ಚರ್ಚ್‌ನ ಸರ್ವೋಚ್ಚ ಕ್ರಿಶ್ಚಿಯನ್ ಧರ್ಮಗುರು ಪೋಪ್ ಫ್ರಾನ್ಸಿಸ್ ಆನ್‌ಲೈನ್ ಪೋರ್ನ್ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಕ್ರೈಸ್ತ ಸನ್ಯಾಸಿನಿಯರು (ನನ್ಸ್) ಮತ್ತು ಪಾದ್ರಿಗಳೂ ಮೊಬೈಲ್‌ನಲ್ಲಿ ಪೋರ್ನ್ ನೋಡುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಒಪ್ಪಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವುದರಿಂದ ಮನಸ್ಸಿನಲ್ಲಿ ಪೈಶಾಚಿಕತೆ ನೆಲೆಗೊಳ್ಳಲು ಪ್ರಾರಂಭಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಪೋಪ್ ಫ್ರಾನ್ಸಿಸ್ ಪಾದ್ರಿಗಳಿಗೆ ಹಾಗೂ ನನ್ಸ್‌ಗೆ ಅಪಾಯದ ಎಚ್ಚರಿಕೆಯನ್ನೂ ನೀಡಿದ್ದು, ಅಶ್ಲೀಲತೆಯನ್ನು ನೋಡುವ ಬಯಕೆಯು ವ್ಯಕ್ತಿಯ ಪವಿತ್ರಾತ್ಮವನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ. ಸಾಮಾಜಿಕ ಮಾಧ್ಯಮಗಳನ್ನು ಬಳಸಬೇಕು ಆದರೆ ಅದರಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಬಾರದು ಎಂದು ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಡಿಜಿಟಲ್ ಪೋರ್ನ್ ವೀಕ್ಷಿಸುತ್ತಿದ್ದಾರೆ, ಇದರಲ್ಲಿ ಪಾದ್ರಿಗಳು ಮತ್ತು ನನ್ಸ್‌ಗಳೂ ಇದ್ದಾರೆ ಎನ್ನುವುದು ತಿಳಿದಿದೆ ಎಂದಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಕ್ರಿಮಿನಲ್ ಅಶ್ಲೀಲತೆಯ (ಮಕ್ಕಳ ಅಶ್ಲೀಲತೆಯ) ಬಗ್ಗೆ ಮಾತನಾಡುತ್ತಿಲ್ಲ, ಇದು ನೈತಿಕ ಅವನತಿಯ ಸಂಕೇತವಾಗಿದೆ ಎಂದು ಹೇಳಿದರು. ಸಾಮಾನ್ಯ ಪೋರ್ನೋಗ್ರಫಿಗಿಂತ ಡಿಜಿಟಲ್ ಮಾಧ್ಯಮದ ಮೂಲಕ ಎಲ್ಲೆಡೆ ಲಭ್ಯವಿರುವ ಪೋರ್ನೋಗ್ರಫಿ ಬಗ್ಗೆ ಅವರು ಹೆಚ್ಚಾಗಿ ಮಾತನಾಡಿದ್ದಾರೆ. ಇದೇ ವೇಳೆ, ಪೋಪ್ ಫ್ರಾನ್ಸಿಸ್ ಅವರು ಸಾಮಾಜಿಕ ಮಾಧ್ಯಮ ಅಥವಾ ಇಂಟರ್ನೆಟ್ ಪ್ರಪಂಚವನ್ನು ಬಳಸಬೇಕು, ಆದರೆ ಅದರಲ್ಲಿ ಹೆಚ್ಚು ಸಮಯವನ್ನು ಕಳೆಯಬಾರದು ಎಂದು ಹೇಳಿದರು. ತಮ್ಮಲ್ಲಿ ಈವರೆಗೂ ಒಂದೇ ಒಂದು ಮೊಬೈಲ್ ಫೋನ್ ಇಲ್ಲ. ಅದನ್ನು ನಾನು ಬಳಕೆ ಮಾಡಿಲ್ಲ ಎಂದು ಹೇಳಿದರು. ಮೊಬೈಲ್‌ಗಳು ಉತ್ತಮ. ಆದರೆ, ಪರಸ್ಪರ ಸಂವಹನಗಳಲ್ಲಿ ಮಾತ್ರವೇ ಅದನ್ನು ಬಳಸಬೇಕು ಎಂದು ಹೇಳಿದರು.
ಪೋರ್ನ್ ಚಿತ್ರಗಳನ್ನು ಮೊಬೈಲ್‌ನಿಂದ ಡಿಲೀಟ್ ಮಾಡಿ: ಡಿಜಿಟಲ್ ಪೋರ್ನೋಗ್ರಫಿ (Digital Pornography) ಮೂಲಕ ಪೈಶಾಚಿಕತೆ ಮನುಷ್ಯನ ಹೃದಯಕ್ಕೆ ಬರುತ್ತದೆ ಎಂದು ಕ್ರಿಶ್ಚಿಯನ್ ಧಾರ್ಮಿಕ ಮುಖಂಡ ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಶುದ್ಧ ( nuns and Priests ) ಹೃದಯವುಳ್ಳ ಯೇಸು, ಎಂದಿಗೂ ಪೋರ್ನ್ ನೋಡುವ ವ್ಯಕ್ತಿಯನ್ನು ಗಮನಿಸೋದಿಲ್ಲ ಎಂದು ಪೋಪ್ ಫ್ರಾನ್ಸಿಸ್ (Online pornography) ಹೇಳಿದ್ದಾರೆ. ಇದೇ ವೇಳೆ ಜನರಿಗೆ ಮತ್ತಷ್ಟು ಸಲಹೆ ನೀಡಿದ ಅವರು, ನೀವು ಯಾವುದೇ ಪ್ರಲೋಭನೆಗಳಿಗೆ ಒಳಗಾಗಬಾರದೆಂದರೆ, ಕೂಡಲೇ ನಿಮ್ಮ ಮೊಬೈಲ್‌ಗಳಲ್ಲಿರುವ ಪೋರ್ನ್ ಚಿತ್ರಗಳನ್ನು ಅಳಿಸಿ ಎಂದಿದ್ದಾರೆ. ಇಂತಹ ವಿಷಯಗಳು ಮಾನವನ ಆತ್ಮವನ್ನು ದುರ್ಬಲಗೊಳಿಸುತ್ತವೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಅದೇ ಸಮಯದಲ್ಲಿ, ಪೋಪ್ ಫ್ರಾನ್ಸಿಸ್ (Pope Francis) ಸುದ್ದಿ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ ಸಲಹೆ ನೀಡಿದರು. ಅತಿಯಾಗಿ ಸುದ್ದಿ ನೋಡುವುದರಿಂದ ಅಥವಾ ಸಂಗೀತ ಕೇಳುವುದರಿಂದ ಕೆಲಸದಿಂದ ಮನಸ್ಸು ಚಂಚಲವಾಗುತ್ತದೆ ಎಂದರು. ಆದ್ದರಿಂದ ಈ ಎಲ್ಲಾ ವಿಷಯಗಳನ್ನು ಮಿತಿಯಲ್ಲಿ ಇಡಬೇಕು ಎಂದರು.
Operation Megha Chakra: 20 ರಾಜ್ಯಗಳ 56 ಸ್ಥಳಗಳ ಚೈಲ್ಡ್ ಪೋರ್ನೊಗ್ರಫಿ ದಂಧೆಯ ಮೇಲೆ ಸಿಬಿಐ ದಾಳಿ!
ಪೋಪ್ ಫ್ರಾನ್ಸಿಸ್ ಅವರು ತಮ್ಮ ಭಾಷಣದಲ್ಲಿ, ಯಾರಾದರೂ ತಮ್ಮ ಅಧ್ಯಯನ ಅಥವಾ ಕೆಲಸದಲ್ಲಿ ಹೆಚ್ಚು ನಿರತರಾಗಿದ್ದರೂ ಸಹ, ದೇವರನ್ನು ನಂಬುವ ಅಂತಹ ಜನರೊಂದಿಗೆ ಸಂಪರ್ಕದಲ್ಲಿರಲು ಇನ್ನೂ ಅಗತ್ಯವಿದೆ ಎಂದು ಹೇಳಿದರು. ಅದೇ ಸಮಯದಲ್ಲಿ, ವಿಜ್ಞಾನ ಮತ್ತು ನಂಬಿಕೆಯ ನಡುವಿನ ಸಂಬಂಧದ ಪ್ರಶ್ನೆಗೆ ಪೋಪ್ ಫ್ರಾನ್ಸಿಸ್ ಅವರು ನಂಬಿಕೆಯನ್ನು ಹೊಂದಿರುವುದು ಎಂದರೆ ಎಲ್ಲದಕ್ಕೂ ನಿಮ್ಮ ಬಳಿ ಉತ್ತರವಿದೆ ಎಂದು ಅರ್ಥವಲ್ಲ. ಆದಾಗ್ಯೂ, ನಂಬಿಕೆಯುಳ್ಳ ವ್ಯಕ್ತಿಯು ವಿಜ್ಞಾನದ ಬಗ್ಗೆ ತನ್ನ ಆಲೋಚನೆಯನ್ನು ಮುಕ್ತವಾಗಿಟ್ಟುಕೊಳ್ಳಬೇಕು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
ಪೋರ್ನೋಗ್ರಫಿ ಕೋರ್ಸ್, ವಿದ್ಯಾರ್ಥಿಗಳು ಜೊತೆಯಲ್ಲೇ ಕುಳಿತು ಅಶ್ಲೀಲ ಸಿನಿಮಾ ನೋಡ್ಬೋದು !
ಜೆಸ್ಯೂಟ್ ಪೋಪ್ ಅವರು ತಮ್ಮ ಸಾರ್ವತ್ರಿಕ ಭಾಷಣದ ಅವಧಿಯಲ್ಲಿ ಅಶ್ಲೀಲತೆಯನ್ನು ಖಂಡಿಸಿದ್ದಾರೆ, ತೀರಾ ಇತ್ತೀಚೆಗೆ ಜೂನ್‌ನಲ್ಲಿ ಇದನ್ನು "ಪುರುಷರು ಮತ್ತು ಮಹಿಳೆಯರ ಘನತೆಯ ಮೇಲಿನ ಶಾಶ್ವತ ದಾಳಿ" ಎಂದು ಕರೆದಿದ್ದರು. ಇದನ್ನು "ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆ" ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದರು.