Asianet Suvarna News Asianet Suvarna News

1 ವರ್ಷದಲ್ಲಿ 7 ಲಕ್ಷ ಹುಟ್ಟು, 15 ಲಕ್ಷ ಸಾವು : ಸತತ 15ನೇ ವರ್ಷವೂ ಕುಸಿದ ಜಪಾನ್ ಜನಸಂಖ್ಯೆ

ಸತತ 15ನೇ ವರ್ಷವೂ ಜಪಾನಿನಲ್ಲಿ ಜನಸಂಖ್ಯೆ ಕುಸಿದಿದೆ. ಈ 1 ವರ್ಷದ ಅವಧಿಯಲ್ಲಿ 7.30 ಲಕ್ಷ ಜನನ ಪ್ರಮಾಣ ದಾಖಲಾಗಿದ್ದರೆ, 15 ಲಕ್ಷ ಜನರು ಸಾವನ್ನಪ್ಪಿದ್ದಾರೆ.

7 lakh births 15 lakh deaths in 1 year Japans population declines for the 15th year in a row akb
Author
First Published Jul 26, 2024, 12:03 PM IST | Last Updated Jul 26, 2024, 12:25 PM IST

ಟೋಕಿಯೋ: ಸತತ 15ನೇ ವರ್ಷವೂ ಜಪಾನಿನಲ್ಲಿ ಜನಸಂಖ್ಯೆ ಕುಸಿದಿದೆ. ಈ 1 ವರ್ಷದ ಅವಧಿಯಲ್ಲಿ 7.30 ಲಕ್ಷ ಜನನ ಪ್ರಮಾಣ ದಾಖಲಾಗಿದ್ದರೆ, 15 ಲಕ್ಷ ಜನರು ಸಾವನ್ನ ಪ್ಪಿದ್ದಾರೆ. ಇದರೊಂದಿಗೆ ಜಪಾನ್‌ನ ಜನಸಂಖ್ಯೆ 12.49 ಕೋಟಿಗೆ ಇಳಿದಿದೆ.

ಜಪಾನ್ ಜನಸಂಖ್ಯೆಯು 2070ರ ವೇಳೆಗೆ ಶೇ.30ಕ್ಕಿಂತ ಕುಸಿತವಾಗಲಿದ್ದು 5.8 ಕೋಟಿಗೆ ತಲುಪಬಹುದು. ಈ ಪೈಕಿ ಪ್ರತಿ 10ರಲ್ಲಿ 4 ಮಂದಿ 65 ವರ್ಷ ಮೇಲ್ಪಟ್ಟವರಾಗಿರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಸತತವಾಗಿ 15 ವರ್ಷಗಳಿಂದ ಜನಸಂಖ್ಯೆ ಇಳಿಕೆ ಕಾರಣ ಜಪಾನ್ ಸರ್ಕಾರ ಬಜೆಟ್‌ನಲ್ಲಿ 5.30 ಸಾವಿರ ಕೋಟಿ ರು.ಗಳನ್ನು ದಂಪತಿಗಳು ಮಕ್ಕಳನ್ನು ಹೊಂದಲು ಪ್ರೋತ್ಸಾಹಧನ ಸೇರಿ ಹಲವು ಕ್ರಮ ಕೈಗೊಂಡರೂ ಅದು ಫಲ ಕೊಟ್ಟಿಲ್ಲ. ಸಮೀಕ್ಷೆಯ ಪ್ರಕಾರ, ಜಪಾನ್‌ನ ಯುವ ಸಮುದಾಯ ಮದುವೆಯಾಗಲು ಮಕ್ಕಳನ್ನು ಹೊಂದಲು ಹಿಂಜರಿಯುತ್ತಾರೆ. ಸಂಬಳಕ್ಕಿಂತ ಜೀವನ ಮಟ್ಟ ಏರಿಕೆ, ಲಿಂಗಾಧರಿತ ಕಾರ್ಪೋರೆಟ್ ಸಂಸ್ಕೃತಿ, ಮಹಿಳೆಯರು ಮತ್ತು ನೌಕರಸ್ಥ ಮಹಿಳೆಯರಿಗೆ ಕೆಲಸದ ಹೊರೆ ಜನಸಂಖ್ಯೆ ಕುಸಿತಕ್ಕೆ ಕಾರಣವಾಗಿದೆ.

ಮೋದಿ-ಪುಟಿನ್ ಭೇಟಿ ಟೀಕಿಸಿದ ಅಮೆರಿಕಕ್ಕೆ ಭಾರತದ ತಿರುಗೇಟು

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಯಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದನ್ನು ಪ್ರಶ್ನಿಸಿದ್ದ ಅಮೆರಿಕಕ್ಕೆ ಭಾರತ ತಿರುಗೇಟು ನೀಡಿದೆ. ಎಲ್ಲ ದೇಶಗಳು 'ಆಯ್ಕೆಯ ಸ್ವಾತಂತ್ರ್ಯ' ಹೊಂದಿವೆ ಎಂದು ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯಲು ಅಲೆದಾಟ, ಇಲ್ಲಿದೆ ದಾಖಲೆಯ 90 ಲಕ್ಷ ಮನೆ ಖಾಲಿ ಖಾಲಿ!

ಬಾಂಗ್ಲಾದಿಂದ 6700 ವಿದ್ಯಾರ್ಥಿಗಳು ವಾಪಸ್: 

ಈ ನಡುವೆ, ಭಾರತದ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ಮೀಸಲು ವಿರೋಧಿ ವಿದ್ಯಾರ್ಥಿ ಹಿಂಸೆ ಭುಗಿಲೆದ್ದ ಕಾರಣ, ವಿದ್ಯಾಭ್ಯಾಸಕ್ಕೆಂದು ತೆರಳಿದ ಭಾರತೀಯ ವಿದ್ಯಾರ್ಥಿಗಳಲ್ಲಿ 6,700 ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಬಾಂಗ್ಲಾ ವಿವಿಗಳಲ್ಲಿ ಓದಲು ಭಾರತದಿಂದ 15 ಸಾವಿರ ವಿದ್ಯಾರ್ಥಿಗಳು ತೆರಳಿದ್ದಾರೆ.

ಕೇರಳ ಸರ್ಕಾರದ ನಡೆಗೆ ಕೇಂದ್ರ ಸರ್ಕಾರ ಆಕ್ರೋಶ

ನವದೆಹಲಿ: ಐಎಎಸ್ ಅಧಿಕಾರಿ ವಾಸುಕಿ ಅವರನ್ನು ವಿದೇಶಾಂಗ ಸಹಕಾರ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ್ದ ಕೇರಳ ಸರ್ಕಾರದ ನಡೆಗೆ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರಗಳು ತಮ್ಮ ಸಾಂವಿಧಾನಿಕ ವ್ಯಾಪ್ತಿ ಮೀರಿ ಅತಿಕ್ರಮ ಪ್ರವೇಶ ಮಾಡಬಾರದು. ವಿದೇಶಾಂಗ ವ್ಯವಹಾರ ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಇದು ಸಹವರ್ತಿ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಕೇರಳ ಸರ್ಕಾರ ತನ್ನ ಸಾಂವಿಧಾನಿಕಮಿತಿಯನ್ನು ಮೀರಿ ಅತಿಕ್ರಮವಾಗಿ ವರ್ತಿಸಬಾರದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ ಏರಿಕೆ!

ಕೆನಡಾ ಕ್ರಮ ಕೈಗೊಳ್ಳಲಿ: ಕೆನಡಾ ನೆಲದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಭಾರತ ವಿರೋಧಿ ಶಕ್ತಿಗಳ ವಿರುದ್ಧ ಆ ದೇಶ ಕ್ರಮ ಕೈಗೊಳ್ಳಬೇಕು ಎಂದು ಭಾರತ ಕಟ್ಟುನಿಟ್ಟಾಗಿ ತಾಕೀತು ಮಾಡಿದೆ. ಪ್ರಧಾನಿ ಟ್ರುಡೋ ವಿರುದ್ಧ ಜಾಲತಾಣಗಳಲ್ಲಿ ಕೊಲೆ ಬೆದರಿಕೆ ಹಾಕಿದ್ದಕ್ಕೆ ಇಬ್ಬರ ವಿರುದ್ದ ಕೆನಡಾ ಪ್ರಕರಣ ದಾಖಲಿಸಿದೆ. ಆದರೆ ಭಾರತದ ನಾಯಕರು, ರಾಜ ತಾಂತ್ರಿಕ ಅಧಿಕಾರಿಗಳ ವಿರುದ್ಧ ಬೆದರಿಕೆಗಳು ಬಂದಾಗ ಅಂತಹ ಕ್ರಮಗಳು ಕಾಣುತ್ತಿಲ್ಲ. ನೆಲದ ಕಾನೂನು ಜಾರಿಗೆ ಎರಡು ಭಿನ್ನ ಮಾನದಂಡಗಳನ್ನು ಅಳವಡಿಸಿಕೊಂಡರೆ ಅದು ದ್ವಿಮುಖ ನೀತಿಯಾಗುತ್ತದೆ ಎಂದು ಭಾರತ ಚಾಟಿ ಬೀಸಿದೆ.

Latest Videos
Follow Us:
Download App:
  • android
  • ios