ಪೊಲೀಸರು ಬಂದು ಬಾಗಿಲು ತಟ್ಟಿದ್ದೇ ತಡ ಬಾಲ್ಕನಿಯಿಂದ ಜಿಗಿದ ಕುಟುಂಬಬದುಕುಳಿದ 15 ವರ್ಷದ ಬಾಲಕ,ಸ್ವಿಜರ್ಲೆಂಡ್ ನಲ್ಲಿ ನಡೆದ ಘಟನೆಹೋಮ್ ಸ್ಕೂಲಿಂಗ್ ನಡೆಸುತ್ತಿದ್ದ ಕಾರಣಕ್ಕೆ ಅರೆಸ್ಟ್ ವಾರಂಟ್ ಜಾರಿಯಾಗಿತ್ತು
ಜಿನೇವಾ (ಸ್ವಿಜರ್ಲೆಂಡ್, ಮಾ. 25): ಹೋಮ್ ಸ್ಕೂಲಿಂಗ್ (Home Schooling) ನಡೆಸುತ್ತಿದ್ದ ಕಾರಣಕ್ಕಾಗಿ ಬಂಧಿಸಲು ಪೊಲೀಸರು ಬಹುಮಹಡಿ ಅಪಾರ್ಟ್ ಮೆಂಟ್ ನ ಬಾಗಿಲು ಬಡಿದಿದ್ದೇ ತಡ, ಐವರು ಸದಸ್ಯರ ಕುಟುಂಬದ ಎಲ್ಲರೂ ಬಾಲ್ಕನಿಯಿಂದ ಹಾರಿದ್ದಾರೆ. ಈ ಯತ್ನದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. 15 ವರ್ಷದ ಬಾಲಕ ಸ್ಥಿತಿ ಚಿಂತಾಜನಕವಾಗಿದೆ. ಸ್ವಿಜರ್ಲೆಂಡ್ ನ (Switzerland) ಲೇಕ್ ಜಿನೆವಾದ (Lake Geneva)ಮಾಂಟ್ರೆಯೆಕ್ಸ್ ನಲ್ಲಿ (Montreux ) ಈ ಘಟನೆ ನಡೆದಿದೆ.
ಫ್ರೆಂಚ್ ಮೂಲದ ಕುಟುಂಬದ ನಾಲ್ವರ ಶವ ಗುರುವಾರ ಮಾಂಟ್ರಿಯಕ್ಸ್‌ನಲ್ಲಿ ಏಳು ಅಂತಸ್ತಿನ ಕಟ್ಟಡದ ಕೆಳಭಾಗದಲ್ಲಿ ಕಂಡುಬಂದಿದೆ. ಮನೆಯಲ್ಲಿದ್ದ ಮಗುವಿಗೆ ಹೋಮ್ ಸ್ಕೂಲಿಂಗ್ ನಡೆಸುತ್ತಿದ್ದ ಕಾರಣಕ್ಕೆ ಬಂಧನ ವಾರಂಟ್ ಅನ್ನು ಕಾರ್ಯಗತಗೊಳಿಸಲು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದ ಕೆಲವೇ ಕ್ಷಣಗಳಲ್ಲಿ ಕಟ್ಟಡದ ಬಾಲ್ಕನಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಸಾವಿಗೀಡಾದ ನಾಲ್ವರನ್ನು ತಂದೆ (40 ವರ್ಷ), ತಾಯಿ (41 ವರ್ಷ), ಚಿಕ್ಕಮ್ಮ ಹಾಗೂ ದಂಪತಿಗಳ ಎಂಟು ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, 15 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಐದು ಜನರ ಕುಟುಂಬವು ಪಟ್ಟಣದ ಲೇಕ್ಸೈಡ್ ಕ್ಯಾಸಿನೊ ಬಳಿಯಿರುವ ತಮ್ಮ ಅಪಾರ್ಟ್ ಮೆಂಟ್ ನಿಂದ ಕೆಳಗೆ ಜಿಗಿದಿದೆ ಎಂದು ಪೊಲೀಸ್ ವಕ್ತಾರ ಅಲೆಕ್ಸಾಂಡ್ರೆ ಬಿಸೆನ್ಜ್ ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯ ಪ್ರಕಾರ, ನಾಲ್ವರ ದೇಹಗಳನ್ನು ನೆಲಮಹಡಿಯಲ್ಲಿ ಶೂಗಳಿಲ್ಲದೆ ಬಿದ್ದಿದ್ದವು. ಇದರ ಬೆನ್ನಲ್ಲಿಯೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗುರುವಾರ ದಂಪತಿಯ ಮಕ್ಕಳಲ್ಲಿ ಒಬ್ಬರ ಮನೆ-ಶಿಕ್ಷಣಕ್ಕೆ ಸಂಬಂಧಿಸಿದಂತೆ ತಂದೆಗೆ ವಾರಂಟ್ ಅನ್ನು ಕಾರ್ಯಗತಗೊಳಿಸಲು ಇಬ್ಬರು ಅಧಿಕಾರಿಗಳು ಮಾಂಟ್ರೀಕ್ಸ್‌ನ ಪ್ರಸಿದ್ಧ ಕ್ಯಾಸಿನೊದಿಂದ ಕಟ್ಟಡಕ್ಕೆ ಆಗಮಿಸಿದ ನಂತರ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಮುಂದೆ ಬಂದ ಪೊಲೀಸ್ ಅಧಿಕಾರಿಗಳು ಬಾಗಿಲನ್ನು ತಟ್ಟಿದ್ದಾರೆ. ಒಳಗಿನಿಂದ ಬಂದ ದನಿಯಲ್ಲಿ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಈ ಕಡೆಯಿಂದ ಪೊಲೀಸ್ ಎಂದು ಉತ್ತರ ಸಿಕ್ಕ ಬೆನ್ನಲ್ಲಿಯೇ ಕೆಲ ಹೊತ್ತು ಅಪಾರ್ಟ್ ಮೆಂಟ್ ನ ಒಳಗೆ ಮೌನ ಆವರಿಸಿತ್ತು ಎನ್ನಲಾಗಿದೆ.
ಮನೆಯ ಒಳಗಿದ್ದ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ವಿಫಲವಾದ ಬೆನ್ನಲ್ಲಿಯೇ ಪೊಲೀಸರು ಅಲ್ಲಿಂದ ಹೊರಟುಹೋಗಿದ್ದಾರೆ. ಈ ಮಧ್ಯೆ ಪೊಲೀಸ್ ಇಲಾಖೆಗೆ ಸ್ಥಳೀಯಜನರು ಕರೆ ಮಾಡಿ, ಅದೇ ಅಪಾರ್ಟ್ ಮಂಟ್ ನ ಬಾಲ್ಕನಿಯಿಂದ ವ್ಯಕ್ತಿಯೊಬ್ಬರು ಬಿದ್ದಿದ್ದಾರೆ ಎಂದು ಮಾಹಿತಿ ನೀಡಿದ್ದರು.
Ukraine Crisis ಮರಿಯುಪೋಲ್ ಚಿತ್ರಮಂದಿರದ ಮೇಲಿನ ದಾಳಿಯಲ್ಲಿ 300 ನಾಗರೀಕರ ಸಾವು, ಮಕ್ಕಳ ಸಂಖ್ಯೆ ಹೆಚ್ಚು!
ಅವರು ತಪ್ಪಿಸಿಕೊಂಡು ಹೋಗುವ ಪ್ರಯತ್ನದಲ್ಲಿ ಬಿದ್ದಿದ್ದಾರೆಯೇ ಅಥವಾ, ಆತ್ಮಹತ್ಯೆ ಮಾಡಿಕೊಳ್ಳಲೇಬೇಕು ಎನ್ನುವ ಕಾರಣಕ್ಕೆ ಬಿದ್ದಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ ಎಂದು ಪೊಲೀಸ್ ವಕ್ತಾರ ಜೀನ್-ಕ್ರಿಸ್ಟೋಫ್ ಸೌಟೆರೆಲ್ ಹೇಳಿದ್ದಾರೆ. ದುರಂತದ ತನಿಖೆ ನಡೆಯುತ್ತಿರುವಾಗ, ಆ ಸಮಯದಲ್ಲಿ ಅಪಾರ್ಟ್ಮೆಂಟ್ನಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಫೋರೆನ್ಸಿಕ್ ತಂಡಗಳು ಈಗ ಏಳನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಮಾದರಿಗಳನ್ನು ತೆಗೆದುಕೊಳ್ಳುತ್ತಿವೆ.
ಇನ್ಪೋಸಿಸ್ ನಲ್ಲಿ ಪತ್ನಿಯ ಷೇರು, ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಮೇಲೆ ರಷ್ಯಾ ಲಿಂಕ್ ಆರೋಪ!
ಏನಿದು ಹೋಮ್ ಸ್ಕೂಲಿಂಗ್: ಕೆಲ ದೇಶಗಳಲ್ಲಿ ಭಿನ್ನ ಕಾರಣಗಳಿಗಾಗಿ ಮಕ್ಕಳನ್ನು ಸ್ಕೂಲಿಗೆ ಕಳಿಸೋಲ್ಲ. ಅನೇಕ ಪೋಷಕರು. ತಾವೇ ಪಾಠ ಮಾಡುತ್ತಾರೆ. 7ನೇ ಕ್ಲಾಸಿಗೋ, 10 ಕ್ಲಾಸಿಗೋ ಕೇಳಿದಷ್ಟು ಫೀ ಕೊಟ್ಟು ಸ್ಕೂಲಿಗೆ ಸೇರಿಸಿ, ಪರೀಕ್ಷೆ ಪಾಸ್ ಮಾಡಿಸುತ್ತಾರೆ. ಅದಕ್ಕೆ ಹೋಂ ಸ್ಕೂಲಿಂಗ್ ಅನ್ನುತ್ತಾರೆ. ಯುರೋಪ್ ನ ಹೆಚ್ಚಿನ ದೇಶಗಳಲ್ಲಿ ಇಂಥದ್ದೊಂದು ಸಂಪ್ರದಾಯವಿದೆ. ಆದರೆ, ಸ್ವಿಜರ್ಲೆಂಡ್ ನಲ್ಲಿ ಇದು ನಿಷಿದ್ಧ. ಶಾಲಾ ವಯಸ್ಸಿನ ಮಕ್ಕಳಿಗೆ ಮನೆಯಲ್ಲಿ ಖಾಸಗಿ ಪಾಠಗಳನ್ನು ಒದಗಿಸುವ ಸಾಂವಿಧಾನಿಕ ಹಕ್ಕು ಪೋಷಕರಿಗೆ ಇಲ್ಲ ಎಂದು ಸ್ವಿಟ್ಜರ್ಲೆಂಡ್‌ನ ಅತ್ಯುನ್ನತ ನ್ಯಾಯಾಲಯ ಕೂಡ ತೀರ್ಪು ನೀಡಿದೆ.
