ಜೀನಿವಾ(ಸೆ. 25) ಪಾಕ್ ಆಕ್ರಮಿತ ಕಾಶ್ಮೀರದ ಹೋರಾಟಗಾರ   ಸಜಿದ್ ರಾಜಾ ವಿಶ್ವಸಂಸ್ಥೆ ತಮ್ಮ ನೆರವಿಗೆ ಬರಬೇಕು ಎಂದು ಕೋರಿದ್ದಾರೆ. ರಾಜಕೀಯ ಮತ್ತು ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ವಿಶ್ವಸಂಸ್ಥೆ ಬರಬೇಕು ಎಂದು ಒತ್ತಾಯ ಮಾಡಿದ್ದಾರೆ. ಇಮ್ರಾನ್ ಖಾನ್ ನೇತೃತ್ವದ  ಪಾಕಿಸ್ತಾನ ನಮ್ಮನ್ನು ಪ್ರಾಣಿಗಳಂತೆ ನಡೆಸುಕೊಂಡಿದೆ ಎಂದು ಆರೋಪಿಸಿದ್ದಾರೆ.

ವಿಶ್ವಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪಾಕಿಸ್ತಾನವು ನಮ್ಮನ್ನು ಪ್ರಾಣಿಗಳಂತೆ ನೋಡಿಕೊಳ್ಳುವುದನ್ನು ತಡೆಯಬೇಕು ಎಂದು ಭದ್ರತಾ ಮಂಡಳಿಗೆ ಮನವಿ ಮಾಡಿದ್ದಾರೆ.

'ಭಾರತವನ್ನು ಸಿರಿಯಾ ಎಂದವರ ಮನೆಯನ್ನು ಯಾಕೆ ಒಡೆಯಲಿಲ್ಲ'

ಪಿಒಕೆ ಚುನಾವಣಾ ಕಾಯ್ದೆ 2020 ನಮ್ಮ ಎಲ್ಲ ಸಾಂವಿಧಾನಿಕ, ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಕಸಿದುಕೊಂಡಿದೆ. ಪಾಕಿಸ್ತಾನ ಪ್ರವೇಶಿಸುವುದನ್ನು ವಿರೋಧಿಸಿದರೆ ನಾವೇ ದೇಶದ್ರೋಹಿಗಳು ಎಂದು ಬಿಂನಬಿಸಲಾಗುತ್ತದೆ.  ಗುರುವಾರ ಜೀನಿವಾದ ಯುಎನ್‌ಹೆಚ್‌ಆರ್‌ಸಿಯ 45 ನೇ ಅಧಿವೇಶನದಲ್ಲಿ ಮಾತನಾಡುತ್ತ ರಾಜಾ ಗದ್ಗದಿತರಾದರು.

ನಮ್ಮನ್ನು ನಾವು ಸಮರ್ಥಿಸಿಕೊಂಡರೆ ಅದನ್ನು ದೇಶದ್ರೋಹ ಎಂದು ಬಿಂಬಿಸಲಾಗುತ್ತಿದೆ. ನಮ್ಮ ಎದುರಿನಲ್ಲೇ ನಾಗರಿಕರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ನೋವು ತೋಡಿಕೊಂಡರು.

ಅಮಾಯಕ ಯುವಕರಿಗೆ ಉಗಗ್ರ ತರಬೇತಿ ನೀಡಿ ಅವರನ್ನು ಭಾರತದ ಮೇಲೆ ವಿಧ್ವಂಸಕ ಕೃತ್ಯ ನಡೆಸಲು ಕಳುಹಿಸಲಾಗುತ್ತಿದೆ. ಆಮಿಷ ಒಡ್ಡಲಾಗುತ್ತಿದೆ ಎಂದು ಪಾಕ್ ಕುತಂತ್ರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಪಾಕಿಸ್ತಾನ ಏಜೆನ್ಸಿಗಳ ದಾಳಿಗಳಿಂದ  ರಕ್ಷಣೆ ಮಾಡಿ ಎಂದು ವಿಶ್ವ ಸಿಂಧಿ ಕಾಂಗ್ರೆಸ್  ಸಹ ಯುಎನ್ ಸಾಮಾನ್ಯ ಸಭೆಗೆ ಮನಚಿ ಮಾಡಿದೆ.  ಕಳೆದ ಮೂರು ತಿಂಗಳಲ್ಲಿ 60 ಕ್ಕೂ ಹೆಚ್ಚು ಸಿಂಧಿ ಜನರನ್ನು ಅಪಹರಿಸಲಾಗಿದೆ ಎಂಬ ಆತಂಕಕಾರಿ ಮಾಹಿತಿ ನೀಡಿದೆ.