Asianet Suvarna News Asianet Suvarna News

ಇಂದು Shinzo Abe ಶ್ರದ್ಧಾಂಜಲಿ : ಜಪಾನ್‌ಗೆ ತೆರಳಿದ ಪ್ರಧಾನಿ Narendra Modi

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆಗೆ ರಾಣಿ ಎಲಿಜಬೆತ್ IIಗಿಂತ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ಇಂದು ಶ್ರದ್ಧಾಂಜಲಿ ಸಭೆ ನಡೆಯಲಿದ್ದು, ಪ್ರಧಾನಿ ಮೋದಿ ಟೋಕಿಯೋಗೆ ತೆರಳಿದ್ದಾರೆ. 

pm narendra modi lands in tokyo for shinzo abe state funeral ash
Author
First Published Sep 27, 2022, 9:25 AM IST

ಜಪಾನಿನ ಮಾಜಿ ಪ್ರಧಾನಿ (Ex Prime Minister) ಶಿಂಜೋ ಅಬೆ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಜಪಾನ್‌ ರಾಜಧಾನಿ ಟೋಕಿಯೋಗೆ ತೆರಳಿದ್ದಾರೆ. ಈ ವೇಳೆ ಪ್ರಧಾನಿ ಮೋದಿ, ಜಪಾನ್‌ ನೂತನ ಪ್ರಧಾನಿ ಫುಮಿಯೋ ಕಿಶಿದಾ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಿದ್ದು, ಬಳಿಕ ಶಿಂಜೋ ಅಬೆ ಅವರ ಪತ್ನಿಯನ್ನು ಭೇಟಿಯಾಗಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾತ್ರಾ ಟ್ವೀಟ್‌ ಮೂಲಕ ತಿಳಿಸಿದ್ದಾರೆ. 3 ತಿಂಗಳ ಹಿಂದೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದಾಗ ಅಬೆ ಗುಂಡೇಟಿಗೆ ಬಲಿಯಾಗಿದ್ದರು. ಮಂಗಳವಾರ ಆಯೋಜಿಸಿರುವ ಶ್ರದ್ಧಾಂಜಲಿ ಸಭೆಯಲ್ಲಿ ಮೋದಿ ಸೇರಿದಂತೆ ನೂರಾರು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡು ಶಿಂಜೋ ಅಬೆಯವರಿಗೆ ಗೌರವ ಸಲ್ಲಿಸಲಿದ್ದಾರೆ.

ಜುಲೈ 8 ರಂದು ನಾರಾ ನಗರದಲ್ಲಿ ಪ್ರಚಾರ ಭಾಷಣದ ವೇಳೆ ದಾಳಿಗೊಳಗಾಗಿ ಬಲಿಯಾದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತಿಮ ಸಂಸ್ಕಾರದಲ್ಲಿ (Funeral) ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಗ್ಗೆ ಟೋಕಿಯೋಗೆ (Tokyo) ಬಂದಿಳಿದರು. ಜುಲೈ 8 ರಂದು ಒಸಾಕಾದ (Osaka) ಪೂರ್ವದ ನಾರಾದಲ್ಲಿ (Nara) ಸ್ಥಳೀಯ ಕಾಲಮಾನ ಬೆಳಗ್ಗೆ 11:30 ಕ್ಕೆ ಶಿಂಜೋ ಅಬೆ ಅವರು ಬೀದಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದ. ಶಿಂಜೋ ಅಬೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶಿಂಜೋ ಅಬೆ  ಸಂಜೆ 5:03 ಕ್ಕೆ ನಿಧನರಾದರು ಎಂದು ಘೋಷಿಸಲಾಯಿತು.
ಮಂಗಳವಾರ ನಸುಕಿನ ವೇಳೆಯಲ್ಲಿ ದಿವಂಗತ ಪ್ರಧಾನಿಗೆ ಶ್ರದ್ಧಾಂಜಲಿ ಸಲ್ಲಿಸಲು ಜಪಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಟ್ವಿಟ್ಟರ್‌ನಲ್ಲಿ "ಟೋಕಿಯೋಗೆ ಬಂದಿಳಿದಿದ್ದೇನೆ" ಎಂದು ಬರೆದಿದ್ದಾರೆ.

ಇದನ್ನು ಓದಿ: Shinzo Abe ಅಂತ್ಯಕ್ರಿಯೆಗೆ 96 ಕೋಟಿ ಖರ್ಚು: ರಾಣಿ ಎಲಿಜಬೆತ್‌ ಅಂತ್ಯಕ್ರಿಯೆಗಿಂತ ಹೆಚ್ಚು ವೆಚ್ಚ; ಜಪಾನಿಗರ ಪ್ರತಿಭಟನೆ

ಪ್ರಧಾನಿ ಮೋದಿ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಆಸ್ಟ್ರೇಲಿಯ ಪ್ರಧಾನಿ ಆಂಥೋನಿ ಅಲ್ಬನೀಸ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ, ದಕ್ಷಿಣ ಕೊರಿಯಾದ ಪ್ರಧಾನಿ ಹಾನ್ ಡಕ್-ಸೂ, ವಿಯೆಟ್ನಾಂ ಅಧ್ಯಕ್ಷ ನ್ಗುಯೆನ್ ಕ್ಸುವಾನ್ ಫುಕ್ ಮತ್ತು ಬ್ರಿಟೀಷ್‌ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವೆರ್ಲಿ ಸೇರಿದಂತೆ 217 ದೇಶಗಳಿಂದ 700 ಅತಿಥಿಗಳು ಭಾಗವಹಿಸಲಿದ್ದಾರೆ.   ಇವರು ಶಿಂಜೊ ಅಬೆ ಅವರ ರಾಜ್ಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 50 ಹಾಲಿ ಮತ್ತು ಮಾಜಿ ನಾಯಕರಿದ್ದಾರೆ.
 
ಅಬೆ ಅಂತ್ಯಕ್ರಿಯೆ ಕುರಿತು ಜಪಾನ್‌ನಲ್ಲಿ ವಿವಾದ

ಜಪಾನ್‌ನಲ್ಲಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಯನ್ನು ಸರ್ಕಾರ ನಡೆಸುತ್ತಿದ್ದು, ಸಮಾರಂಭಕ್ಕೆ ವ್ಯಯಿಸುತ್ತಿರುವ ಹಣದ ಮೊತ್ತವನ್ನು ದೇಶದ ಜನರ ಒಂದು ಬಣ ವಿರೋಧಿಸುತ್ತಿದೆ. ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಗೆ ಜಪಾನ್ ಸರ್ಕಾರವು 1.66 ಬಿಲಿಯನ್ ಯೆನ್ ಖರ್ಚು ಮಾಡಿದೆ ಎಂದು ವರದಿಯಾಗಿದೆ. ಹಾಗೂ, ಈ ವೆಚ್ಚವು 1.7 ಬಿಲಿಯನ್ ಯೆನ್‌ಗೆ ಹೋಗಬಹುದು ಎಂದೂ ಹೇಳಲಾಗುತ್ತಿದೆ. ಇದು ರಾಣಿ ಎಲಿಜಬೆತ್‌ ಅಂತ್ಯಕ್ರಿಯೆಗೆ ಖರ್ಚು ಮಾಡಿದ ಹಣಕ್ಕಿಂತ ಹೆಚ್ಚಿನದಾಗಿದೆ. ಇಂಗ್ಲೆಂಡ್‌ ಸರ್ಕಾರ ರಾಣಿ ಅಂತ್ಯಕ್ರಿಯೆಗೆ 1.3 ಶತಕೋಟಿ ಯೆನ್ ಖರ್ಚು ಮಾಡಿತ್ತು ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Shinzo Abe Death; ಪ್ರೀತಿಯ ಗೆಳೆಯನನ್ನು ಕಳೆದುಕೊಂಡಿದ್ದೇನೆ, ಮೋದಿ ಭಾವುಕ ಲೇಖನ

ಜುಲೈ 8 ರ ಪ್ರಚಾರ ರ‍್ಯಾಲಿಯಲ್ಲಿ ಶಿಂಜೋ ಅಬೆ ಅವರ ಹತ್ಯೆಯು ಯುನಿಫಿಕೇಶನ್ ಚರ್ಚ್‌ನ ನಡುವಿನ ಸಂಬಂಧಗಳ ಬಗ್ಗೆ ಬಹಿರಂಗಪಡಿಸುವಿಕೆಯ ವಿವಾದವನ್ನು ಹುಟ್ಟುಹಾಕಿತ್ತು. ಇದು ಪ್ರಸ್ತುತ ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿಡಾ ವಿರುದ್ಧ ಹಿನ್ನಡೆಯನ್ನು ಉಂಟುಮಾಡಿತು. ವಿವಾದದಿಂದ ಅವರ ಬೆಂಬಲದ ರೇಟಿಂಗ್‌ಗಳು ಅತ್ಯಂತ ಕೆಳಮಟ್ಟಕ್ಕೆ ಕುಸಿದಿತ್ತು. ನಂತರ, ಕಿಶಿಡಾ ಕ್ಷಮೆಯಾಚಿಸಿದ್ದು ಮತ್ತು ಚರ್ಚ್‌ಗೆ ಪಕ್ಷದೊಂದಿಗಿನ ಸಂಬಂಧಗಳನ್ನು ಕಡಿತಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

Follow Us:
Download App:
  • android
  • ios