Shinzo Abe ಅಂತ್ಯಕ್ರಿಯೆಗೆ 96 ಕೋಟಿ ಖರ್ಚು: ರಾಣಿ ಎಲಿಜಬೆತ್ ಅಂತ್ಯಕ್ರಿಯೆಗಿಂತ ಹೆಚ್ಚು ವೆಚ್ಚ; ಜಪಾನಿಗರ ಪ್ರತಿಭಟನೆ
ಶಿಂಜೋ ಅಬೆ ಅಂತ್ಯಕ್ರಿಯೆಗೆ 96 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದು ರಾಣಿ ಎಲಿಜಬೆತ್ ಅಂತ್ಯಕ್ರಿಯೆಗಿಂತ ದುಬಾರಿ ವೆಚ್ಚವಾಗಿದೆ. ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಸೇರಿ ಹಲವು ದೇಶಗಳ ಗಣ್ಯರು ಭಾಗವಹಿಸುತ್ತಿದ್ದಾರೆ.
ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ (Shinzo Abe) ಅವರ ಅಂತ್ಯಕ್ರಿಯೆ (Funeral) ಸೆಪ್ಟೆಂಬರ್ 27ರಂದು ನಡೆಯಲಿದ್ದು, ಅದಕ್ಕೆ ಸರ್ಕಾರದಿಂದ ಸುಮಾರು 96 ಕೋಟಿ ರು. (1.7 ಬಿಲಿಯನ್ ಯೆನ್) ಖರ್ಚು ಮಾಡಲಾಗುತ್ತಿದೆ. ಇಷ್ಟು ದುಬಾರಿ ವೆಚ್ಚದ ಅಂತ್ಯಕ್ರಿಯೆ ಏಕೆ ಎಂದು ಜಪಾನ್‌ನಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಇತ್ತೀಚೆಗೆ ಲಂಡನ್ನಿನಲ್ಲಿ ಬ್ರಿಟನ್‌ನ ಎಲಿಜಬೆತ್ ರಾಣಿಯ (Queen Elizabeth II) ಅದ್ಧೂರಿ ಅಂತ್ಯಕ್ರಿಯೆ ನಡೆದಿತ್ತು. ಅದಕ್ಕೆ ಬ್ರಿಟನ್ ಸರ್ಕಾರ ಸುಮಾರು 74 ಕೋಟಿ ರೂ. ಖರ್ಚು ಮಾಡಿತ್ತು. ಅದಕ್ಕಿಂತ ಹೆಚ್ಚು ಹಣ ವ್ಯಯಿಸಿ ಶಿಂಜೋ ಅಬೆಯ ಅಂತ್ಯಕ್ರಿಯೆ ನಡೆಸುವ ಜರೂರು ಏನಿದೆ ಎಂದು ಜಪಾನಿಗರು ಪ್ರಶ್ನಿಸಿದ್ದಾರೆ.
ಕಳೆದ ಜುಲೈನಲ್ಲಿ ವ್ಯಕ್ತಿಯೊಬ್ಬನಿಂದ ಚೂರಿ ಇರಿತಕ್ಕೊಳಗಾಗಿ ಶಿಂಜೋ ಅಬೆ ಸೆಪ್ಟೆಂಬರ್ 27 ರಂದು ಪ್ರಾಣ ತೆತ್ತಿದ್ದರು. ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂತ್ಯಕ್ರಿಯೆಯ ಮೇಲುಸ್ತುವಾರಿಯನ್ನು ಟೋಕಿಯೋದ ‘ಮುರಯಾಮ’ (Murayama) ಎಂಬ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗೆ ನೀಡಲಾಗಿದೆ. ಅದು ಒಟ್ಟು 96 ಕೋಟಿ ರೂ. ವ್ಯಯಿಸುವುದಕ್ಕೆ ಸರ್ಕಾರದಿಂದ ಅನುಮತಿ ಪಡೆದಿದ್ದು, ಇದರ ವಿರುದ್ಧ ದೇಶದ ವಿವಿಧೆಡೆ ಜನರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಕಳೆದ ವಾರ ಶಿಂಜೋ ಅಬೆಗೆ ಸರ್ಕಾರಿ ಗೌರವದ ಅಂತ್ಯಕ್ರಿಯೆ ಬೇಡ ಎಂದು ವ್ಯಕ್ತಿಯೊಬ್ಬ ಪ್ರತಿಭಟನಾರ್ಥವಾಗಿ ಪ್ರಧಾನಿ ಫುಮಿಯೋ ಕಿಶಿದಾ ಅವರ ಕಚೇರಿ (Office) ಎದುರು ಬೆಂಕಿ ಹಚ್ಚಿಕೊಂಡಿದ್ದ.
ಇದನ್ನು ಓದಿ: ಚಿಕಿತ್ಸೆ ಫಲಕಾರಿಯಾಗದೇ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ
ಟೋಕಿಯೋ ಒಲಿಂಪಿಕ್ಸ್‌ಗಾಗಿ (Tokyo Olympics) ಜಪಾನ್ 13 ಬಿಲಿಯನ್ ಡಾಲರ್ ಖರ್ಚು ಮಾಡಿತ್ತು. ಆ ವೇಳೆಯೂ ಅಲ್ಲಿನ ಜನರು ಕಳವಳ ವ್ಯಕ್ತಪಡಿಸಿದ್ದರು. ಒಲಿಂಪಿಕ್ಸ್ ಈವೆಂಟ್‌ಗೆ ಅಂದಾಜು ಮಾಡಲಾದ ಬಜೆಟ್‌ಗಿಂತ ಇದು ದುಪ್ಪಟ್ಟು ವೆಚ್ಚ ಆಗಿತ್ತು ಎನ್ನುವುದು ಸಹ ಗಮನಾರ್ಹ. ದಿ ಗಾರ್ಡಿಯನ್ ವರದಿಯ ಪ್ರಕಾರ, ಜಪಾನ್ ಸರ್ಕಾರವು ರಾಜ್ಯದ ಅಂತ್ಯಕ್ರಿಯೆಯ ಅಂದಾಜು ವೆಚ್ಚವನ್ನು 250 ಮಿಲಿಯನ್ ಯೆನ್ ಎಂದು ಹಾಕಿದೆ. ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ, ಹಿರೊಕಾಜು ಮಾಟ್ಸುನೊ ಪ್ರಕಾರ, ಅಂತ್ಯಕ್ರಿಯೆಗೆ ಸುಮಾರು 800 ಮಿಲಿಯನ್ ಯೆನ್ ಖರ್ಚು ಮಾಡಲಾಗುವುದು ಎಂದು ಅಂದಾಜಿಸಲಾಗಿದೆ. ಆದರೆ ಗಣ್ಯರಿಗೆ ಆತಿಥ್ಯ ವಹಿಸಲು 600 ಮಿಲಿಯನ್ ಯೆನ್ ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇತ್ತೀಚಿನ ಕ್ಯೋಡೋ ನ್ಯೂಸ್ ಏಜೆನ್ಸಿ ಸಮೀಕ್ಷೆಯೊಂದನ್ನು (Survey) ನಡೆಸಿದ್ದು, ಈ ಸಮೀಕ್ಷೆಗೆ ಒಳಗಾದ 70% ಕ್ಕಿಂತ ಹೆಚ್ಚು ಜನರು ಜಪಾನ್ ಸರ್ಕಾರವು ಶಿಂಜೋ ಅಬೆ ಅಂತ್ಯಕ್ರಿಯೆಗೆ ಹೆಚ್ಚು ಖರ್ಚು ಮಾಡುತ್ತಿದೆ ಎಂದು ಹೇಳಿದ್ದಾರೆ. ಈ ಪೈಕಿ ಅರ್ಧದಷ್ಟು ಹಣವು ಭದ್ರತೆಗೆ ಖರ್ಚಾಗುವ ನಿರೀಕ್ಷೆಯಿದೆ ಮತ್ತು ವಿದೇಶಿ ಪ್ರವಾಸಿಗರಿಗೆ ಆತಿಥ್ಯ ವಹಿಸಲು ಸಹ ಹೆಚ್ಚು ಹಣವನ್ನು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಮಂಗಳವಾರದ ರಾಜ್ಯ ಅಂತ್ಯಕ್ರಿಯೆಗೆ ಮುಂಚಿತವಾಗಿ, ಪ್ರಸ್ತುತ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರನ್ನು ಭೇಟಿ ಮಾಡಲು ಸಾಗರೋತ್ತರ ಅತಿಥಿಗಳು ಜಪಾನ್‌ಗೆ ಆಗಮಿಸುತ್ತಿದ್ದಾರೆ. 3 ದಿನಗಳ ಕಾರ್ಯಕ್ರಮವನ್ನು "ಅಂತ್ಯಕ್ರಿಯೆಯ ರಾಜತಾಂತ್ರಿಕತೆ" ಎಂದು ಕರೆಯಲಾಗಿದೆ.
ಇದನ್ನೂ ಓದಿ: Shinzo Abe Death; ಪ್ರೀತಿಯ ಗೆಳೆಯನನ್ನು ಕಳೆದುಕೊಂಡಿದ್ದೇನೆ, ಮೋದಿ ಭಾವುಕ ಲೇಖನ
ಯುಎಸ್ ಉಪಾಧ್ಯಕ್ಕ್ಷೆ ಕಮಲಾ ಹ್ಯಾರಿಸ್ ಮತ್ತು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಸೇರಿದಂತೆ 217 ದೇಶಗಳಿಂದ 700 ಅತಿಥಿಗಳು (Guests) ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.