*  ದ್ವಿಪಕ್ಷೀಯ ಹಿತಾಸಕ್ತಿಗಳ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಉಭಯ ನಾಯಕರುಗಳು*  ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಇನ್ನಷ್ಟು ಆಳಗೊಳಿಸುವ ಸಾಮರ್ಥ್ಯದ ಬಗ್ಗೆ ಚರ್ಚೆ*  ಉಕೆ ಪಿಎಂ ಜಾನ್ಸನ್‌ಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ(ಮಾ.23): ಉಕ್ರೇನ್‌(Ukraine) ಮೇಲೆ ರಷ್ಯಾ(Russia) ನಡೆಸುತ್ತಿರುವ ದಾಳಿಯ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌(Boris Johnson) ಅವರು ಚರ್ಚೆ ನಡೆಸಿದ್ದಾರೆ. ನಿನ್ನೆ(ಮಂಗಳವಾರ) ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರಿಗೆ ದೂರವಾಣಿ ಕರೆ ಮಾಡಿದ ಪ್ರಧಾನಿನ ನರೇಂದ್ರ ಅವರು, ಯುದ್ಧವನ್ನು(War) ನಿಲ್ಲಿಸಲು ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಲು ಭಾರತದ ನಿರಂತರ ಮನವಿಯನ್ನು ಪ್ರಧಾನಿ ಮೋದಿ ಇದೇ ವೇಳೆ ಪುನರುಚ್ಚರಿಸಿದ್ದಾರೆ. 

ಸಮಕಾಲೀನ ವಿಶ್ವ ಕ್ರಮದ ಆಧಾರವಾಗಿ ಅಂತಾರಾಷ್ಟ್ರೀಯ ಕಾನೂನು(International Law) ಮತ್ತು ಪ್ರಾದೇಶಿಕ ಸಮಗ್ರತೆ ಮತ್ತು ಎಲ್ಲಾ ರಾಜ್ಯಗಳ ಸಾರ್ವಭೌಮತ್ವವನ್ನು ಗೌರವಿಸುವಲ್ಲಿ ಭಾರತದ ನಂಬಿಕೆಯನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ. 

Russia Ukraine War ರಷ್ಯಾ ಸೈನಿಕರ ಹೊರದಬ್ಬಿ ಕೀವ್‌ ಉಪನಗರ ಭದ್ರಪಡಿಸಿದ ಉಕ್ರೇನ್‌!

ದ್ವಿಪಕ್ಷೀಯ ಹಿತಾಸಕ್ತಿಗಳ ವಿಷಯಗಳ ಬಗ್ಗೆ ಚರ್ಚಿಸಿದರು ಮತ್ತು ವ್ಯಾಪಾರ, ತಂತ್ರಜ್ಞಾನ, ಹೂಡಿಕೆಗಳು, ರಕ್ಷಣೆ ಮತ್ತು ಭದ್ರತೆ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಆಳಗೊಳಿಸುವ ಸಾಮರ್ಥ್ಯದ ಬಗ್ಗೆ ಉಭಯ ನಾಯಕರು ಮಾತನಾಡಿದ್ದಾರೆ. 

ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ನಡೆಯುತ್ತಿರುವ ಮಾತುಕತೆಗಳ ಸಕಾರಾತ್ಮಕ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದರು. ಕಳೆದ ವರ್ಷ ಉಭಯ ನಾಯಕರ ನಡುವೆ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಅಳವಡಿಸಿಕೊಂಡ 'ಭಾರತ-ಯುಕೆ ಮಾರ್ಗಸೂಚಿ 2030' ಅನ್ನು ಅನುಷ್ಠಾನಗೊಳಿಸುವಲ್ಲಿನ ಪ್ರಗತಿಯನ್ನು ಅವರು ಶ್ಲಾಘಿಸಿದ್ದಾರೆ. ಇನ್ನು ಇದೇ ವೇಳೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಭಾರತಕ್ಕೆ ಬರುವಂತೆ ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ. 

ಬಿಡೆನ್, ಜಾನ್ಸನ್‌ರನ್ನೇ ಹಿಂದಿಕ್ಕಿ ಸತತ ಮೂರನೇ ವರ್ಷ ಮೋದಿ ವಿಶ್ವದ ನಂ.1 ನಾಯಕ!

ನವದೆಹಲಿ: ಪ್ರಧಾನಿ ಮೋದಿಯವರು ತಮ್ಮ ಜನಪ್ರಿಯತೆ ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅಮೆರಿಕದ ಸಂಶೋಧನಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ (Morning Consult) ಬಿಡುಗಡೆ ಮಾಡಿದ ಇತ್ತೀಚಿನ ಪಟ್ಟಿಯ ಪ್ರಕಾರ ಜಾಗತಿಕ ನಾಯಕರಾದ ಯುಎಸ್ ಅಧ್ಯಕ್ಷ ಜೋ ಬಿಡೆನ್, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಹಿಂದಿಕ್ಕಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತೊಮ್ಮೆ 'ಗ್ಲೋಬಲ್ ಲೀಡರ್ ಅಪ್ರೂವಲ್' ರೇಟಿಂಗ್ ಪಟ್ಟಿಯಲ್ಲಿ ಶೇ.72 ರ ಅತ್ಯಧಿಕ ರೇಟಿಂಗ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 

ಗ್ಲೋಬಲ್ ಲೀಡರ್ ಅಪ್ರೂವಲ್ ಲಿಸ್ಟ್ 2022 ಅನ್ನು ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಬಿಡುಗಡೆ ಮಾಡಿದೆ, ಇದು ಜಗತ್ತಿನಾದ್ಯಂತ ಬದಲಾಗುತ್ತಿರುವ ರಾಜಕೀಯ ಬದಲಾವಣೆಗಳ ಒಳನೋಟವನ್ನು ಪಡೆಯಲು ಜಗತ್ತಿನಾದ್ಯಂತ ಹಲವಾರು ದೇಶಗಳ ಅನುಮೋದನೆ ಮತ್ತು ಜನಪ್ರಿಯತೆಯ ರೇಟಿಂಗ್‌ಗಳನ್ನು ಟ್ರ್ಯಾಕ್ ಮಾಡುವ ಸಂಸ್ಥೆಯಾಗಿದೆ.

Russia Ukraine war ಉಕ್ರೇನ್‌ನಿಂದ 35 ಲಕ್ಷ ಜನರ ವಲಸೆ, ವಿಶ್ವಸಂಸ್ಥೆ ವರದಿ!

ಪಟ್ಟಿಯ ಪ್ರಕಾರ, 13 ವಿಶ್ವ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿದ್ದಾರೆ. ಮೆಕ್ಸಿಕೊ ಅಧ್ಯಕ್ಷ ಲೋಪೆಜ್ ಒಬ್ರಡಾರ್ 64 ಪ್ರತಿಶತ, ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ 57 ಪ್ರತಿಶತ, ಫ್ಯೂಮಿಯೊ ಕಿಶಿಡಾ 47 ಪ್ರತಿಶತ, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ 42 ಪ್ರತಿಶತ ಪಡೆಯುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬಿಡೆನ್, ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ 41 ಪ್ರತಿಶತ ರೇಟಿಂಗ್ ಗಳಿಸಿದ್ದಾರೆ. 

ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಶೇ 37, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಶೇ 35 ಪಾಲು ಪಡೆದಿದ್ದಾರೆ. ಕಟ್ಟುನಿಟ್ಟಾದ ಕರೋನವೈರಸ್ ಲಾಕ್‌ಡೌನ್‌ಗಳ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಸಿಬ್ಬಂದಿ ಜತೆ ಪಾರ್ಟಿ ನಡೆಸಿದ್ದಾರೆ ಎಂಬ ವರದಿಯ ನಂತರ ಬ್ರಿಟಿಷ್ ಪ್ರಧಾನಿ ತನ್ನ ರಾಜಕೀಯ ವೃತ್ತಿಜೀವನಕ್ಕಾಗಿ ಹೋರಾಡುತ್ತಿರುವುದರಿಂದ ಬೋರಿಸ್ ಜಾನ್ಸನ್ ಪಟ್ಟಿಯಲ್ಲಿ ಅತಿ ಕಡಿಮೆ ಅಂಕ ಗಳಿಸಿದ್ದಾರೆ.