- ಮಕರೀವ್‌ನಿಂದ ರಷ್ಯನ್ನರನ್ನು ಹೊರದಬ್ಬಿದ ಉಕ್ರೇನ್‌ ಯೋಧರು- ಅದರೆ ರಾಜಧಾನಿ ಕೀವ್‌ ಸುತ್ತಲಿನ 3 ಉಪನಗರಗಳಿಗೆ ರಷ್ಯಾ ಲಗ್ಗೆ- ಮರಿಯುಪೋಲ್‌ನಲ್ಲಿ ರಷ್ಯಾದ ಕ್ಷಿಪಣಿಗಳ ಸುರಿಮಳೆ ಮತ್ತಷ್ಟುತೀವ್ರ 

ಕೀವ್(ಮಾ.23): ಯುದ್ಧ ಸಾರಿ 27 ದಿನಗಳಾದರೂ ಉಕ್ರೇನ್‌(Ukraine) ಅನ್ನು ಕೈವಶ ಮಾಡಿಕೊಳ್ಳಲು ಇನ್ನೂ ಹೋರಾಡುತ್ತಿರುವ ರಷ್ಯಾಕ್ಕೆ(Russia) ಮಂಗಳವಾರ ಕೊಂಚ ಹಿನ್ನಡೆಯಾಗಿದೆ. ಉಕ್ರೇನ್‌ ರಾಜಧಾನಿ ಕೀವ್‌ನಿಂದ 70 ಕಿ.ಮೀ. ದೂರದಲ್ಲಿರುವ, ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಉಪನಗರ ಮಕರೀವ್‌(Makariv) ಅನ್ನು ರಷ್ಯಾದಿಂದ ಉಕ್ರೇನ್‌ ಮರುವಶಕ್ಕೆ ಪಡೆದಿದೆ. ಅಲ್ಲಿದ್ದ ರಷ್ಯಾ ಯೋಧರನ್ನು ಹೊರದಬ್ಬುವಲ್ಲಿ ಯಶಸ್ವಿಯಾಗಿವೆ.

ಮಕರೀವ್‌ನಲ್ಲಿ ಉಕ್ರೇನ್‌ ಹಾಗೂ ರಷ್ಯಾ(Russia Ukraine war) ಯೋಧರ ನಡುವೆ ಘೋರ ಕಾಳಗ ನಡೆಯಿತು. ಮಕರೀನ್‌ ಅನ್ನು ವಶಕ್ಕೆ ಪಡೆಯುವಲ್ಲಿ ನಮ್ಮ ಯೋಧರು ಯಶಸ್ವಿಯಾದರು ಎಂದು ಉಕ್ರೇನ್‌ನ ರಕ್ಷಣಾ ಇಲಾಖೆ ಘೋಷಿಸಿದೆ. ಈ ಬೆಳವಣಿಗೆಯಿಂದಾಗಿ ಪ್ರಮುಖ ಹೆದ್ದಾರಿಯೊಂದು ಉಕ್ರೇನ್‌ ತೆಕ್ಕೆಗೆ ಮರಳಿದ್ದು, ರಾಜಧಾನಿ ಕೀವ್‌ ಅನ್ನು ವಾಯವ್ಯ ದಿಕ್ಕಿನಿಂದ ಸುತ್ತುವರಿಯುವ ರಷ್ಯಾ ಯತ್ನಕ್ಕೆ ಅಡ್ಡಿಪಡಿಸಿದಂತಾಗಿದೆ.

Naveen Dead Body ದೇಹ ತರಿಸಿದ ಪ್ರಧಾನಿ ಮೋದಿ, ಸಿಎಂಗೆ ವಿಧಾನಸಭೆ ಅಭಿನಂದನೆ!

ಆದರೆ, ಕೀವ್‌ ಸುತ್ತಲಿನ ಬುಚಾ, ಹೊಸ್ಟೊಮೆಲ್‌ ಹಾಗೂ ಇರ್ಪಿನ್‌ ನಗರಗಳ ಭಾಗಶಃ ಭಾಗವನ್ನು ರಷ್ಯಾ ಪಡೆಗಳು ವಶಕ್ಕೆ ಪಡೆದಿವೆ ಎಂದು ಸ್ವತಃ ಉಕ್ರೇನ್‌ ತಿಳಿಸಿದೆ.

ಈ ನಡುವೆ, ಶರಣಾಗತಿಗೆ ಉಕ್ರೇನ್‌ ಒಪ್ಪದ ಹಿನ್ನೆಲೆಯಲ್ಲಿ ಕರಾವಳಿಯ ಬಂದರು ನಗರಿ ಮರಿಯುಪೋಲ್‌ನಲ್ಲಿ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಅಲ್ಲಿ ಬಾಂಬ್‌, ಕ್ಷಿಪಣಿಗಳ ಸುರಿಮಳೆಯಾಗುತ್ತಿದೆ. ಹೆಣಗಳು ರಸ್ತೆಯಲ್ಲೆಲ್ಲಾ ಬಿದ್ದಿವೆ ಎಂದು ಮರಿಯುಪೋಲ್‌ನಿಂದ ಪಾರಾಗಿ ಬಂದಿರುವ ನಿರಾಶ್ರಿತರು ಮಾಹಿತಿ ನೀಡಿದ್ದಾರೆ.

ಶೆಲ್‌ ದಾಳಿಗೆ ಶಾಪಿಂಗ್‌ ಮಾಲ್‌ ಧ್ವಂಸ
ನಗರದ ಶಾಪಿಂಗ್‌ ಕೇಂದ್ರದ ಮೇಲೆ ರಷ್ಯಾ ಶೆಲ್‌ದಾಳಿ ನಡೆಸಿದ ಪರಿಣಾಮ 8 ಮಂದಿ ಸಾವನಪ್ಪಿದ್ದಾರೆ. ಭಾನುವಾರ ತಡರಾತ್ರಿ ಸಿಟಿ ಸೆಂಟರ್‌ ಬಳಿ ಶೆಲ್‌ ದಾಳಿ ನಡೆಸಲಾಗಿದೆ ಈ ದಾಳಿಯ ತೀವ್ರತೆಯು ತೀವ್ರ ಸ್ವರೂಪದಲ್ಲಿದ್ದು ಕಿಟಕಿ ಗಾಜುಗಳು, ಬಾಗಿಲು ಸಂಪೂರ್ಣವಾಗಿ ಒಡೆದುಹೋಗಿದೆ. ಅಗ್ನಿಶಾಮಕದಳದ ಪ್ರಯತ್ನದ ನಂತರವೂ ಕಟ್ಟಡದಲ್ಲಿ ಬೆಳಗ್ಗೆವರೆಗೂ ಹೊಗೆಯಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ವಿದ್ಯಾರ್ಥಿಗಳಿಗೆ ನಿರಂತರ ನೆರವು ನೀಡುತ್ತಿದೆ ಸೇವಾ ಯುಗಂ ಸ್ವಯಂ ಸೇವಕ ಸಂಘಟನೆ!

ಕೀವ್‌ನಲ್ಲಿ 36 ಗಂಟೆ ಕರ್ಫ್ಯೂ 
ರಷ್ಯಾ ಪಡೆಗಳ ದಾಳಿ ನಡುವೆಯೂ ಉಕ್ರೇನ್‌ ರಾಜಧಾನಿ ಕೀವ್‌ ಮೇಯರ್‌ ನಗರದಲ್ಲಿ 36 ಗಂಟೆಗಳ ಕಾಲ ಕರ್ಫ್ಯೂ ಘೋಷಿಸಲಾಗಿತ್ತು ಕರ್ಫ್ಯೂ ಮಾ.17ಕ್ಕೆ ಅಂತ್ಯವಾಗಿದೆ. ಈ ಅವಧಿಯಲ್ಲಿ ನಿವಾಸಿಗಳಿಗೆ ಬಾಂಬ್‌ ಶೆಲ್ಟರ್‌ಗಳಿಗೆ ಮಾತ್ರ ಹೋಗಲು ಅವಕಾಶ ನೀಡಲಾಗುತ್ತದೆ.

ಉಕ್ರೇನ್‌ ಅನ್ನು ವಶಪಡಿಸಿಕೊಳ್ಳುವ ತನ್ನ ಯತ್ನವನ್ನು ಸತತ 19ನೇ ದಿನವೂ ಮುಂದುವರೆಸಿರುವ ರಷ್ಯಾ ಸೇನೆ, ರಾಜಧಾನಿ ಕೀವ್‌ ಸೇರಿದಂತೆ ಹಲವು ಪ್ರಮುಖ ನಗರಗಳ ಮೇಲೆ ಭಾರೀ ಪ್ರಮಾಣದ ವೈಮಾನಿಕ ದಾಳಿ ಮುಂದುವರೆಸಿದೆ. ಹೀಗಾಗಿ ದೇಶಾದ್ಯಂತ ಭಾನುವಾರ ಇಡೀ ರಾತ್ರಿ ವೈಮಾನಿಕ ದಾಳಿಯ ಮುನ್ನೆಚ್ಚರಿಕೆ ನೀಡುವ ಸೈರನ್‌ಗಳು ಮೊಳಗುತ್ತಲೇ ಇದ್ದು, ಜನರಲ್ಲಿ ಭಾರೀ ಭೀತಿ ಹುಟ್ಟಿಸಿದ್ದವು.

ಒಂದೆಡೆ ಯುದ್ಧ ಕೊನೆಗೊಳಿಸಲು ಉಕ್ರೇನ್‌ ಜೊತೆ ಸೋಮವಾರ 4ನೇ ಸುತ್ತಿನ ಮಾತುಕತೆ ನಡೆಸಿದ ರಷ್ಯಾ, ಅದೇ ಮತ್ತೊಂದೆಡೆ ಭಾರೀ ದಾಳಿಯ ಮೂಲಕ ಉಕ್ರೇನಿ ಜನರ ಜೀವನ ಹೈರಾಣಾಗಿಸಿದೆ. ರಾಜಧಾನಿ ಕೀವ್‌, ಕೀವ್‌ನ ಹೊರವಲಯ ಪ್ರದೇಶಗಳಾದ ಬ್ರೊವರಿ, ಇರ್ಪಿನ್‌, ಬುಚಾ, ಹೊಸ್ಟೊಮೆಲ್‌, ಎರಡನೇ ಅತಿದೊಡ್ಡ ನಗರ ಖಾರ್ಕೀವ್‌, ದಕ್ಷಿಣದ ಪ್ರಮುಖ ನಗರ ಮೈಕೋಲೈವ್‌, ಬಂದರು ನಗರಿ ಖೇರ್ಸನ್‌, ಚೆರ್ನಿಹಿವ್‌ ಸೇರಿದಂತೆ ಹಲವು ನಗರಗಳ ಮೇಲೆ ಭಾನುವಾರ ರಾತ್ರಿಯಿಂದಲೂ ರಷ್ಯಾ ಪಡೆಗಳು ಶೆಲ್‌ ಮತ್ತು ಬಾಂಬ್‌ಗಳ ಮೂಲಕ ದಾಳಿ ನಡೆಸಿವೆ.

ದಾಳಿಯ ಪರಿಣಾಮ ಬಹುತೇಕ ನಗರಗಳು ದುರಸ್ತಿ ಮಾಡಲಾಗದ ಸ್ಥಿತಿಗೆ ತಲುಪಿದ್ದು, ಯುದ್ಧ ನಿಂತರೂ ಇನ್ನೂ ಹಲವು ತಿಂಗಳ ಕಾಲ ಬಂಕರ್‌ಗಳಲ್ಲೇ ಜೀವನ ಮಾಡಬೇಕಾದ ಅಪಾಯಕಾರಿ ಸ್ಥಿತಿಯನ್ನು ನಿರ್ಮಿಸಿದೆ. ಜೊತೆಗೆ ಸತತ ದಾಳಿಯಿಂದಾಗಿ ಜನವಸತಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರುವ ಮಾಡುವ ನೆರವು ಸಂಸ್ಥೆಗಳ ಯತ್ನಕ್ಕೂ ಅಡ್ಡಿಯಾಗಿದೆ.