Asianet Suvarna News Asianet Suvarna News

ಚೀನಾ ವಿರುದ್ಧ ಮೋದಿ ಕ್ವಾಡ್‌ ಸಮರ: ಪಿಎಂ ಭಾಷಣದ ಬಗ್ಗೆ ಕುತೂಹಲ!

* ಅಮೆರಿಕದಲ್ಲಿ ಇಂದು ಕ್ವಾಡ್‌ ದೇಶಗಳ ಸಭೆ

* ಚೀನಾ ವಿರುದ್ಧ ಮೋದಿ ಕ್ವಾಡ್‌ ಸಮರ

* ಮೋದಿ ಭಾಗಿ: ಭಾಷಣದ ಬಗ್ಗೆ ಕುತೂಹಲ

* 2 ವರ್ಷಗಳ ಬಳಿಕ ನಮೋ ಮೊದಲ ಅಮೆರಿಕ ಪ್ರವಾಸ

PM Modi to participate in Quad leaders meet in Washington pod
Author
Bangalore, First Published Sep 24, 2021, 10:44 AM IST

ವಾಷಿಂಗ್ಟನ್‌(ಸೆ.24): ಇಂಡೋ-ಪೆಸಿಫಿಕ್‌ ವಲಯದಲ್ಲಿ ಹೆಚ್ಚುತ್ತಿರುವ ಚೀನಾ(China) ಪ್ರಭಾವ ತಗ್ಗಿಸಲು ರಚನೆಯಾಗಿರುವ ‘ಕ್ವಾಡ್‌’ (ಭಾರತ, ಅಮೆರಿಕ, ಆಸ್ಪ್ರೇಲಿಯಾ, ಜಪಾನ್‌) ದೇಶಗಳ ಮಹತ್ವದ ಶೃಂಗಸಭೆ ಶುಕ್ರವಾರ ಇಲ್ಲಿ ನಿಗದಿಯಾಗಿದೆ. ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌(Joe Biden), ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi), ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಮತ್ತು ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಭಾಗವಹಿಸಲಿದ್ದಾರೆ. ಬೈಡೆನ್‌ ಅವರ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರ ಜತೆ ಮೋದಿ ನಡೆಸುತ್ತಿರುವ ಮೊದಲ ಮುಖಾಮುಖಿ ಸಭೆ ಇದಾಗಿದೆ.

ಶ್ವೇತಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಚೀನಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಸಮರ ಸಾರುವ ನಿರೀಕ್ಷೆ ಇದೆ. ಇಂಡೋ- ಪೆಸಿಫಿಕ್‌ ವಲಯವನ್ನು ವಿಶ್ವದ ಎಲ್ಲಾ ದೇಶಗಳಿಗೂ ಸ್ವತಂತ್ರ ಮತ್ತು ಮುಕ್ತವಾಗಿ ಇರಿಸುವ ಕುರಿತು ಪ್ರಧಾನಿ ಮೋದಿ(Narendra Modi) ಬಲವಾಗಿ ಪ್ರತಿಪಾದಿಸುವ ಸಾಧ್ಯತೆ ಇದೆ. ಅಲ್ಲದೆ ಈ ವಲಯದಲ್ಲಿ ಆರ್ಥಿಕ, ಮಿಲಿಟರಿ ಸಹಕಾರದ ಬಗ್ಗೆಯೂ ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ.

ಕಳೆದ 2 ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಕ್ವಾಡ್‌ ಸಭೆ ಆನ್‌ಲೈನ್‌ ಮೂಲಕವೇ ಆಯೋಜನೆಗೊಂಡಿತ್ತು. ಆದರೆ ಇದೀಗ 2 ವರ್ಷಗಳ ಬಳಿಕ ಎಲ್ಲಾ ನಾಲ್ಕು ದೇಶಗಳ ನಾಯಕರು ಖುದ್ದು ಸಭೆ ನಡೆಸುತ್ತಿದ್ದು, ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಆತ್ಮೀಯ ಸ್ವಾಗತ:

2 ವರ್ಷಗಳ ಬಳಿಕ ಬುಧವಾರ ಅಮೆರಿಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣ ಮತ್ತು ಹೋಟೆಲ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಾರತೀಯರು, ಕೋವಿಡ್‌ ನಿಯಮಗಳನ್ನೂ ಬದಿಗೊತ್ತಿ ಪ್ರಧಾನಿ ಜೊತೆ ಬೆರೆತರು. ಭಾರತೀಯರ ಈ ಸ್ವಾಗತವನ್ನು ಮೋದಿ ಕೂಡ ಸಂಭ್ರಮಿಸಿದರು.

ಸರಣಿ ಸಭೆ:

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಕ್ವಾಲ್‌ಕಾಂ, ಅಡೋಬ್‌, ಫಸ್ಟ್‌ ಸೋಲಾರ್‌, ಜನರಲ್‌ ಆಟೋಮಿಕ್ಸ್‌ ಮತ್ತು ಬ್ಲಾಕ್‌ಸ್ಟೋನ್‌ ಕಂಪನಿಯ ಸಿಇಒಗಳ ಜೊತೆ ಸಭೆ ನಡೆಸಿದರು.

Follow Us:
Download App:
  • android
  • ios