ಶ್ವೇತಭವನದ ಆತ್ಮೀಯ ಅತಿಥ್ಯಕ್ಕೆ ವಿಡಿಯೋ ಮೂಲಕ ಪ್ರಧಾನಿ ಮೋದಿ ಧನ್ಯವಾದ!

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಹಲವು ಕಾರಣಗಳಿಂದ ವಿಶ್ವಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಅದ್ಧೂರಿ ಸ್ವಾಗತ, ಔತಣಕೂಟ, ಹಲವು ವಿಷಯಗಳ ಚರ್ಚೆ, ದ್ವಿಪಕ್ಷೀಯ ಒಪ್ಪಂದ, ಉಡುಗೊರೆ ಶ್ವೇತಭವನ ಭೇಟಿಯ ಪ್ರಮುಖ ವಿಷಯಗಳಾಗಿತ್ತು. ಶ್ವೇತಭವನದ ಅದ್ಭುತ ಆತಿಥ್ಯಕ್ಕೆ ಪ್ರಧಾನಿ ಮೋದಿ ವಿಡಿಯೋ ಹಂಚಿಕೊಂಡು ಧನ್ಯವಾದ ಹೇಳಿದ್ದಾರೆ.

PM Modi thank America President Joe biden for Whitehouse hospitality share video on twitter ckm

ವಾಶಿಂಗ್ಟನ್ ಡಿಸಿ(ಜೂ.22): ಪ್ರಧಾನಿ ನರೇಂದ್ರ ಮೋದಿ ನಾಲ್ಕು ದಿನದ ಅಮೆರಿಕ ಪ್ರವಾಸವನ್ನು ವಿಶ್ವದ ಹಲವು ರಾಷ್ಟ್ರಗಳು ಕುತೂಹಲ ಕಣ್ಣಿನಿಂದ ನೋಡುತ್ತಿದೆ. ಪ್ರವಾಸದ ಮೊದಲ ನ್ಯೂಯಾರ್ಕ್ ತೆರಳಿದ್ದ ಮೋದಿ ಅಂತಾರಾಷ್ಟ್ರೀಯ ಯೋಗದಿನಾಚರಣೆ ಆಚರಿಸಿದ್ದರು. ಬಳಿಕ ವಾಶಿಂಗ್ಟನ್ ಡಿಸಿಗೆ ಆಗಮಿಸಿದ ಮೋದಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬರ ಮಾಡಿಕೊಂಡಿದ್ದರು. ಬಳಿಕ ಹಲವು ಸುತ್ತಿನ ಮಾತುಕತೆ, ಉಭಯ ಕುಶಲೋಪರಿ, ಸೌಹಾರ್ಧಯುತ ಭೇಟಿ, ಒಪ್ಪಂದಗಳಿಗೆ ಸಹಿ ಸೇರಿದಂತೆ ಹಲವು ವಿಚಾರಗಳ ಚರ್ಚೆಯೂ ನಡೆದಿದೆ. ಜೋ ಬೈಡನ್, ಜಿಲ್ ಬೈಡನ್, ಶ್ವೇತಭವನದ ಆತ್ಮಿಯ ಆತಿಥ್ಯಕ್ಕೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದಾರೆ.

ವಾಶಿಂಗ್ಟನ‌್‌ ಡಿಸಿಗೆ ಆಗಮಿಸಿದ ಮೋದಿ, ಜೋ ಬೈಡನ್ ಹಾಗೂ ಜಿಲ್ ಬೈಡನ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಕೆಲ ಗಣ್ಯರು ಪಾಲ್ಗೊಂಡಿದ್ದರು. ಭೋಜನದ ಬಳಿಕ ಭಾರತೀಯ ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಸವಿ ಆನಂದಿಸಿದರು.  ಶ್ವೇತಭವನದಲ್ಲಿ ಮೋದಿ ಹಾಗೂ ಬೈಡೆನ್ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.

ಅಮೆರಿಕದಲ್ಲಿ ಮೋದಿಗೆ ಇಂದ್ರದೇವನ ಆಶೀರ್ವಾದ: ಮಳೆಯ ಆರ್ಭಟದ ನಡುವೆಯೂ ರಾಷ್ಟ್ರಗೀತೆಗೆ ‘ನಮೋ’ ಗೌರವ

ಮೋದಿ ಹಾಗೂ  ಅಮೇರಿಕದ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರು ವಾಷಿಂಗ್ಟನ್ ಡಿಸಿ ಯ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ ಭಾರತ ಮತ್ತು ಯುಎಸ್ಎ  ಭವಿಷ್ಯಕ್ಕಾಗಿ ಕೌಶಲ್ಯ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಮಾಜದಲ್ಲಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣದ ಲಭ್ಯತೆಯನ್ನು ವಿಸ್ತರಿಸಲು ಮತ್ತು ಹೆಚ್ಚಿಸಲು ಉನ್ನತ ಶಿಕ್ಷಣ ಸಂಸ್ಥೆಗಳಾದ್ಯಂತ ಉದ್ಯೋಗಿಗಳ ಪುನರಾಭಿವೃದ್ಧಿಯ ಬಗ್ಗೆ ಈ ಕಾರ್ಯಕ್ರಮ ಗಮನ ಕೇಂದ್ರೀಕರಿಸಿತು.  

 

 

ಜೂನ್ 23 ರಂದು ಪ್ರಧಾನಿ ಮೋದಿ , ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಜಂಟಿಯಾಗಿ ಭೋಜನ ಸವಿಯಲಿದ್ದಾರೆ. ಬಳಿಕ  20 ಉನ್ನತ ಅಮೇರಿಕನ್ ಕಂಪನಿಗಳ ವ್ಯಾಪಾರ ನಾಯಕರನ್ನು ಭೇಟಿ ಮಾಡಲಿದ್ದಾರೆ.  1,500 ಕ್ಕೂ ಹೆಚ್ಚು ವಲಸೆಗಾರರು ಮತ್ತು ವ್ಯಾಪಾರ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

‘ಅಧ್ಯಕ್ಷ ಜೋ ಬೈಡೆನ್‌ ಮತ್ತು ಜಿಲ್‌ ಬೈಡೆನ್‌ ದಂಪತಿಯ ಭೇಟಿ, ಎರಡು ಪ್ರಜಾಪ್ರಭುತ್ವ ದೇಶಗಳ ನಡುವಿನ ಸಹಕಾರವನ್ನು ಇನ್ನಷ್ಟುಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದ ಪ್ರತೀಕವಾಗಿದೆ. ಭೇಟಿ ಅವಧಿಯಲ್ಲಿ ಬೈಡೆನ್‌ ಮತ್ತು ಅಮೆರಿಕದ ಇತರೆ ಹಲವು ನಾಯಕರ ಜೊತೆಗಿನ ಚರ್ಚೆಯು, ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟುಸುಭದ್ರಗೊಳಿಸಲು ಮತ್ತು ಬಹುಪಕ್ಷೀಯ ವೇದಿಕೆಗಳಾದ ಜಿ20, ಕ್ವಾಡ್‌ ಮತ್ತು ಇಂಡೋ-ಪೆಸಿಫಿಕ್‌ ಎಕನಾಮಿಕ್‌ ಫ್ರೇಮ್‌ವರ್ಕ್ ವೇದಿಕೆಗಳನ್ನು ಬಲಪಡಿಸಲು ನೆರವಾಗಿದೆ ಎಂದು ಮೋದಿ ಹೇಳಿದ್ದಾರೆ. ಈ ಭೇಟಿ ವೇಳೆ ಪ್ರಧಾನಿ ಮೋದಿ ಮತ್ತು ಬೈಡೆನ್‌, ರಕ್ಷಣಾ ಸಹಕಾರ, ಬಾಹ್ಯಾಕಾಶ, ಟೆಲಿಕಾಂ, ಕ್ವಾಟಂ, ಕೃತಕ ಬುದ್ಧಿಮತ್ತೆ, ಜೈವಿಕ ವಿಜ್ಞಾನ, ಸೆಮಿಕಂಡಕ್ಟರ್‌ ಮೊದಲಾದ ವಿಷಯಗಳಲ್ಲಿ ಚರ್ಚೆ ನಡೆಸಲಿದ್ದಾರೆ.

Latest Videos
Follow Us:
Download App:
  • android
  • ios