Asianet Suvarna News Asianet Suvarna News

ವಿಶ್ವದ ಅತ್ಯಂತ ಲೋಕಪ್ರಿಯ ನಾಯಕ ಮೋದಿ: ಟಾಪ್ ನಾಯಕರೆಲ್ಲಾ ಹಿಂದೆ!

* ಜಾಗತಿಕ ಮಟ್ಟದಲ್ಲಿ ಮೋದಿ ಹವಾ

* ವಿಶ್ದದ ಅತ್ಯಂತ ಲೋಕಪಗ್ರಿಯ ನಾಯಕರಲ್ಲಿ ಮೋದಿ ಟಾಪ್

* ಬೈಡೆನ್, ಬೋರಿಸ್‌ರನ್ನುಹಿಂದಿಕ್ಕಿದ ಮೋದಿ

PM Modi Rated Most Approved World Leader By US Research Firm Way Ahead Of Biden and Boris pod
Author
Bangalore, First Published Nov 7, 2021, 10:52 AM IST

ನವದೆಹಲಿ(ನ.07): ಲೋಕಪ್ರಿಯ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತೊಮ್ಮೆ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಅತೀ ಹೆಚ್ಚು ಲೋಕಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಆಳ್ವಿಕೆ ಮುಂದುವರೆದಿದೆ. ಈ ರೇಸ್‌ನಲ್ಲಿ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (Britain PM Johnson Boris) ಅವರನ್ನು ಹಿಂದಿಕ್ಕಿದ್ದಾರೆ. ಪಿಎಂ ಮೋದಿಯವರ ಅನುಮೋದನೆ ರೇಟಿಂಗ್ 70 ಪ್ರತಿಶತವಾಗಿದೆ, ಇದು 13 ಜಾಗತಿಕ ನಾಯಕರಲ್ಲಿ ಅತ್ಯಧಿಕವಾಗಿದೆ. ಈ ಸಮೀಕ್ಷೆಯನ್ನು ಅಮೆರಿಕದ ಡೇಟಾ ಇಂಟೆಲಿಜೆನ್ಸ್ ಫರ್ಮ್ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಮಾಡಿದೆ.

ಪಿಎಂ ಮೋದಿ ಹಿಂದಿಕ್ಕಿದ ವಿಶ್ವ ನಾಯಕರಲ್ಲಿ ಬೈಡೆನ್, ಜಾನ್ಸನ್, ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅನೇಕ ಅನುಭವಿ ನಾಯಕರು ಸೇರಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ (Union Minister Piyush Goyal) ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಮಾಹಿತಿ ನೀಡಿದ್ದಾರೆ. ಈ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರ ಅನುಮೋದನೆಯ ರೇಟಿಂಗ್ ಕೇವಲ ಶೇ 70ರಷ್ಟಿದೆ.

ಆರನೇ ಸ್ಥಾನದಲ್ಲಿ ಬೈಡನ್

ಈ ಅನುಮೋದನೆ ರೇಟಿಂಗ್‌ ಶೇ. 60 ಕ್ಕಿಂತ ಹೆಚ್ಚಿದ್ದು, ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿಯವರ ಅನುಮೋದನೆ ರೇಟಿಂಗ್ ಶೇ 70ರಷ್ಟಿದೆ. ಪ್ರಧಾನಿ ಮೋದಿ ನಂತರ, ಮೆಕ್ಸಿಕೋ ಅಧ್ಯಕ್ಷ ಆಂಡ್ರೆಜ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಎರಡನೇ ಸ್ಥಾನದಲ್ಲಿದ್ದಾರೆ. ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ ಮೂರನೇ ಸ್ಥಾನದಲ್ಲಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ 44 ರೇಟಿಂಗ್ನೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ಜೋ ಬೈಡೆನ್ ಅವರ ರೇಟಿಂಗ್ 50 ಕ್ಕಿಂತ ಕಡಿಮೆಯಿದೆ.

ಏನಿದು ಮಾರ್ನಿಂಗ್ ಕನ್ಸಲ್ಟ್?

ಮಾರ್ನಿಂಗ್ ಕನ್ಸಲ್ಟ್ ಪಾಲಿಟಿಕಲ್ ಇಂಟಲಿಜೆನ್ಸ್ ಆಗಿದೆ ಹಾಗೂ ಪ್ರಸ್ತುತ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಸರ್ಕಾರಿ ನಾಯಕರ ಅನುಮೋದನೆ ರೇಟಿಂಗ್‌ಗಳನ್ನು ಟ್ರ್ಯಾಕ್ ಮಾಡುತ್ತಿದೆ. ವಾರಕ್ಕೊಮ್ಮೆ, ಎಲ್ಲಾ 13 ದೇಶಗಳಿಗೆ ಇತ್ತೀಚಿನ ಡೇಟಾದೊಂದಿಗೆ ಈ ಪುಟವನ್ನು ನವೀಕರಿಸಲಾಗುತ್ತದೆ. ಇದು ಜಗತ್ತಿನಾದ್ಯಂತ ಬದಲಾಗುತ್ತಿರುವ ರಾಜಕೀಯ ಡೈನಾಮಿಕ್ಸ್‌ಗೆ ಅನುಗುಣವಾಗಿದೆ.

ಮೋದಿಯನ್ನು ಕೊಂಡಾಡಿದ ದೇವೇಗೌಡ

 

ಕೇದಾರನಾಥದಲ್ಲಿ ಆದಿ ಶಂಕರಚಾರ್ಯರ ಪ್ರತಿಮೆಯನ್ನು (Shankaracharya statue) ಅನಾವರಣಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ (HD Devegowda) ಅಭಿನಂದನೆ ಸಲ್ಲಿಸಿದ್ದಾರೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ  ಬರೆದಿದ್ದು, ಕೇದಾರನಾಥ (Kedarnath) ಕ್ಷೇತ್ರವನ್ನು ಪುನರ್ನಿರ್ಮಾಣ ಮಾಡುವುದಕ್ಕೆ ಆದಿ ಶಂಕರಾಚಾರ್ಯರ ಪುತ್ಥಳಿ ನಿರ್ಮಾಣ ಮಾಡುವುದಕ್ಕೆ ಹೊಂದಿದ್ದ ಬದ್ಧತೆ, ಸಮರ್ಪಣಾ ಮನೋಭಾವವನ್ನು ಕೊಂಡಾಡಿದ್ದಾರೆ.

Follow Us:
Download App:
  • android
  • ios