ಶ್ವೇತಭವನದಲ್ಲಿ ಮೋದಿ, ಬೈಡನ್ ಜಂಟಿ ಸುದ್ದಿಗೋಷ್ಠಿ, ಬೆಂಗಳೂರಿನಲ್ಲಿ ಕೌನ್ಸಿಲರ್ ಘಟಕ ಸ್ವಾಗತಿಸಿದ ಪ್ರಧಾನಿ!
ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಐತಿಹಾಸಿಕವಾಗಿ ಮಾರ್ಪಟ್ಟಿದೆ. ಶ್ವೇತಭವನದಲ್ಲಿ ಪ್ರಧಾನಿ ಮೋದಿ ಹಾಗೂ ಜೋ ಬೈಡೆನ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಮೋದಿ ಮಾತುಗಳ ಹೈಲೈಟ್ಸ್ ಇಲ್ಲಿದೆ.
ವಾಶಿಂಗ್ಟನ್ ಡಿಸಿ(ಜೂ.22): ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶ್ವೇತಭವನದಲ್ಲಿ , ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಭಾರತ ಹಾಗೂ ಅಮರಿಕ ನಡುವಿನ ಸಂಬಂಧ ಹಾಗೂ ವ್ಯಾಪಾರ ವಹಿವಾಟು ಕುರಿತು ಒಪ್ಪಂದಗಳ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಭಯೋತ್ಪಾದನೆ ಮಟ್ಟ ಹಾಕಲು ಉಭಯ ದೇಶಗಳ ಒಂದೇ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಭಾರತ ಹಾಗೂ ಅಮೆರಿಕ ಇತಿಹಾಸದಲ್ಲಿ ಈ ದಿನ ಮಹತ್ವಪೂರ್ಣವಾಗಿದೆ. ಭಾರತ ಅಮೆರಿಕ ವ್ಯಾಪಾರ ವಹಿವಾಟು ಕೇವಲ ಎರಡು ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ, ಜಾಗತಿಕ ಆರ್ಥಿಕತೆ ಮೇಲೂ ಧನಾತ್ಮಕ ಪರಿಣಾಮ ಬೀರಲಿದೆ. ಇಂದು ಅಮೆರಿಕದ ಅತೀ ದೊಡ್ಡ ವ್ಯಾಪಾರ ವಹಿವಾಟ ಪಾಲುದಾರನಾಗಿದೆ. ಆರ್ಟಿಫಿಶಿಯರ್ ಇಂಟೆಲಿಜೆನ್ಸ್, ಸ್ಪೇಸ್, ಟೆಲಿಕಾಂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಹಾಗೂ ಅಮೆರಿಕ ಜಂಟಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ದಶಕದ ಹಿಂದೆ ಸಾಮಾನ್ಯ ವ್ಯಕ್ತಿಯಾಗಿ ಶ್ವೇತಭವನ ನೋಡಿದ್ದೆ, ನೆನಪು ಬಿಚ್ಚಿಟ್ಟ ಪ್ರಧಾನಿ ಮೋದಿ!
ಅಮೆರಿಕ ಪ್ರವಾಸದಲ್ಲಿ ಇಲ್ಲಿನ ಕೆಲ ಕಂಪನಿಗಳ ಸಿಇಒ ಜೊತೆ ಮಾತನಾಡುವ ಅವಕಾಶ ಸಿಕ್ಕಿತ್ತು. ನಮ್ಮ ತಂತ್ರಜ್ಞಾನ ಪಾಲುದಾರರ ಜೊತೆ ಉತ್ತಮ ಬಾಂಧವ್ಯ ವೃದ್ದಿಸಲು ಹಾಗೂ ವ್ಯಾಪಾರ ವಹಿವಾಟು ವಿಸ್ತರಿಸಲು ಕೆಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗ್ರೀನ್ ಹೈಡ್ರೋಜನ್, ಬ್ಯಾಟರಿ ಸ್ಟೋರೇಜ್ ಸೇರಿದಂತೆ ಹಲವು ಯೋಜನೆಗಳು ಜಾರಿ ಮಾಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.ಭಾರತ ಹಾಗೂ ಅಮೆರಿಕ ವಿಶ್ವಾಸ ಹಾಗೂ ಬದ್ಧತೆ ಹೆಚ್ಚಿದೆ. ತಂತ್ಪಜ್ಞಾನ ಬಳಸಿಕೊಂಡು ಭಾರತ ಹಾಗೂ ಅಮೆರಿಕ ಹೊಸ ಇತಿಹಾಸ ರಚಿಸಿದೆ. ಇದೀಗ ಯದ್ಧವಿಮಾನಗಳ ಎಂಜಿನ್ ನಿರ್ಮಿಸುವ ಮಹತ್ವದ ಒಪ್ಪಂದ ಉಭಯ ದೇಶಗಳ ನಡುವಿನ ಐತಿಹಾಸಿಕ ಒಪ್ಪಂದವಾಗಿದೆ ಎಂದು ಮೋದಿ ಹೇಳಿದ್ದಾರೆ.
ಇಂಡಿಯನ್ ಅಮೆರಿಕನ್ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಬೆಂಗಳೂರು ಹಾಗೂ ಅಹಮ್ಮದಾಬಾದ್‌ನಲ್ಲಿ ಅಮೆರಿಕ ಕೌನ್ಸಿಲ್ ಘಟಕ ತೆರೆಯುವ ನಿರ್ಧಾರವನ್ನು ಭಾರತ ಸ್ವಾಗತಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಶ್ವೇತಭವನದ ಆತ್ಮೀಯ ಅತಿಥ್ಯಕ್ಕೆ ವಿಡಿಯೋ ಮೂಲಕ ಪ್ರಧಾನಿ ಮೋದಿ ಧನ್ಯವಾದ!
ಭಯೋತ್ಪಾದನೆ, ಉಗ್ರವಾದ ವಿರುದ್ಧ ಹೋರಾಟದಲ್ಲಿ ಭಾರತ ಹಾಗೂ ಅಮೆರಿಕ ಒಂದೇ ದಿಕ್ಕಿನಲ್ಲಿ ಸಾಗುತ್ತಿದೆ. ಕೋವಿಡ್ ಮಹಾಮಾರಿ, ಉಕ್ರೇನ್ ಸಂಘರ್ಷದಲ್ಲಿ ಹಲವರು ಬಳಲಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಿದೆ. ಶಾಂತಿ ಸ್ಥಾಪನೆಗೆ ಭಾರತ ಸದಾ ಮುಂದಿದೆ. ಭಾರತ ಜಿ20 ಅಧ್ಯಕ್ಷತೆಯಲ್ಲಿ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಮಂತ್ರದೊಂದಿಗೆ ಸಾಗುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ವಿಶ್ವದ ಅತೀ ದೊಡ್ಡ ಲೋಕತಂತ್ರ ದೇಶವಾಗಿರುವ ಭಾರತ , ಇದೀಗ ಅಮರಿಕ ಜೊತೆ ಸೇರಿ ಜಂಟಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಮೌಲ್ಯಗಳ ಆಧಾರದಲ್ಲಿ ಈ ಎರಡು ದೇಶಗಳು ವಿಶ್ವಕ್ಕೆ ಹೊಸ ದಿಕ್ಕು ತೋರುವಲ್ಲಿ ಪ್ರಮುಖ ಪಾತ್ರನಿಭಾಯಸಲಿದೆ ಎಂದು ಮೋದಿ ಹೇಳಿದ್ದಾರೆ.