ಭಾರತ ವಿರುದ್ಧ ಗೆದ್ದ ಪಾಕ್‌: ಅವಕಾಶ ಬಳಸಿ ಕಾಶ್ಮೀರ ವಿಚಾರ ಎತ್ತಿದ ಇಮ್ರಾನ್ ಖಾನ್!

*ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಮೊದಲ ಗೆಲುವು 
*ಕಾಶ್ಮೀರ ಸಮಸ್ಯೆ ಬಗ್ಗೆ ಮಾತನಾಡಲು ಉತ್ತಮ ಸಮಯವಲ್ಲ ಎಂದ ಇಮ್ರಾನ್‌ ಖಾನ್‌
*ಕಾಶ್ಮೀರ ಜನರಿಗೆ ಅವರ ಹಕ್ಕುಗಳನ್ನು ನೀಡಿ - ಪಾಕ್‌ ಪ್ರಧಾನಿ

PM Imran Khan speaks about Kashmir at Pakistan Saudi investment forum

ಇಸ್ಲಾಮಾಬಾದ್‌(ಅ. 26 ) : ವಿಶ್ವಕಪ್‌ ಇತಿಹಾಸದಲ್ಲೇ ಭಾರತ ವಿರುದ್ಧ ಪಾಕಿಸ್ತಾನ ಮೊದಲ ಗೆಲುವು ಸಾಧಿಸಿ ಸಂಭ್ರಮಿಸಿದೆ. ಬರೋಬ್ಬರಿ 29 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. 1992ರಿಂದ ಆರಂಭಗೊಂಡ ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್‌ ಸೆಣಸಾಟದಲ್ಲೇ ಭಾರತವೇ ಇಷ್ಟುವರ್ಷ ಮೇಲುಗೈ ಸಾಧಿಸಿತ್ತು. ಆದರೆ 2021ರ ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತದ ಅಜೇಯ ಓಟಕ್ಕೆ ಪಾಕಿಸ್ತಾನ ತಡೆಯೊಡ್ಡಿದೆ. ಗೆಲುವಿನ ಸಂಭ್ರಮದಲ್ಲಿರುವ ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳು ಭಾರತವನ್ನು ಟೀಕಿಸುವ  ಸತತ ಪ್ರಯತ್ನ ಮಾಡುತ್ತಿದ್ದಾರೆ. ಈಗ ಈ ಸಾಲಿಗೆ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ (Imran Khan) ಕೂಡ ಸೇರ್ಪಡೆಯಾಗಿದ್ದಾರೆ

ಭಾರತದ ವಿರುದ್ಧ ಗೆದ್ದರೂ ಸಂಭ್ರಮಿಸಲಿಲ್ಲ ಪಾಕ್ ಆಟಗಾರರು: ಇಲ್ಲಿದೆ ಕಾರಣ!

ಭಾರತ ಜತೆಗೆ ಸಂಬಂಧವನ್ನು ಬೆಳೆಸುವ ಅಗತ್ಯವನ್ನು ವಿವರಿಸಿದ ಇಮ್ರಾನ್‌ ಖಾನ್, ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಜಯಭೇರಿ ಬಾರಿಸಿದ ಬಳಿಕ ಈ ಬಗ್ಗೆ ಮಾತುಕತೆ ನಡೆಸಲು ಉತ್ತಮ ಸಮಯವಲ್ಲ ಎಂದು ಹೇಳುವ  ಮೂಲಕ ಭಾರತ ಸೋಲಿನ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಸೌದಿಯಲ್ಲಿ ನಡೆದ  ಪಾಕಿಸ್ತಾನ - ಸೌದಿ ಹೂಡಿಕೆ ವೇದಿಕೆಯಲ್ಲಿ (Pakistan Saudi investment forum) ಮಾತನಾಡಿದ ಇಮ್ರಾನ್‌ ಖಾನ್ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕೇವಲ ಒಂದು ಸಮಸ್ಯೆಯಿದೆ. ಅದು ಕಾಶ್ಮೀರದ ಸಮಸ್ಯೆ ಎಂದು ಹೇಳಿ ಉತ್ತಮ ವ್ಯಕ್ತಿತ್ವದ ನೆರೆಹೊರೆಯವರಂತೆ ಅದನ್ನು ಪರಿಹರಿಸಲು ಒತ್ತಾಯಿಸಿದ್ದಾರೆ.

ಕಾಶ್ಮೀರದ ಜನರಿಗೆ ಅವರ ಹಕ್ಕುಗಳನ್ನು ಹಿಂತಿರುಗಿಸಿ!

"ನಾವು ಚೀನಾ (China) ಜತೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ, ಹೇಗಾದರೂ ಮಾಡಿ ಭಾರತದ ಜತೆ ಉತ್ತಮ ಸಂಬಂಧ ಬೆಳೆಸಬೇಕಿದೆ. ಆದರೆ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿದೆ. ಹಾಗಾಗಿ ಈ ಸಂದರ್ಭದಲ್ಲಿ ಈ ಬಗ್ಗೆ ಮಾತುಕತೆ ನಡೆಸುವುದು ಸರಿಯಲ್ಲ" ಎಂದು ಹೇಳಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯದ ಒಂದು ದಿನ ನಂತರ ಇಮ್ರಾನ್‌ ಖಾನ್‌ ಈ ಹೇಳಿಕೆ ನೀಡಿದ್ದಾರೆ. ಇದು ಕಾಶ್ಮಿರದ (Kashmir) ಜನರ ಮಾನವ ಹಕ್ಕುಗಳ ಪ್ರಶ್ನೆಯಾಗಿದೆ ಹಾಗೂ 72 ವರ್ಷಗಳ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (United Nations Security Council) ನಮಗೆ ನೀಡಿದ್ದ ಭರವಸೆಯಾಗಿದೆ ಎಂದು ಇಮ್ರಾನ್‌ ಹೇಳಿದ್ದಾರೆ.

Pak ವಿರುದ್ಧ ಸೋತ ಭಾರತ: ನಿಂದನೆಗೀಡಾದ ಶಮಿ ಬೆಂಬಲಕ್ಕೆ ಬಂದ ಕ್ರಿಕೆಟ್‌ ದೇವರು!

ಅವರ (ಕಾಶ್ಮೀರದ ಜನರ) ಹಕ್ಕುಗಳನ್ನು ಅವರಿಗೆ ನೀಡಿದರೆ, ನಮಗೆ ಬೇರೆ ಯಾವ ಸಮಸ್ಯೆಯೂ ಇಲ್ಲ. ಆಗ ಎರಡೂ ರಾಷ್ಟ್ರಗಳು ಸೌಹಾರ್ದತೆಯಿಂದ ಬದುಕಬಹುದು, ಹೀಗಾದರೆ ಈ ದೇಶಗಳ ಸಾಮರ್ಥ್ಯವನ್ನು ಊಹಿಸಲು ಸಾಧ್ಯವಿಲ್ಲ ಎಂದು ಇಮ್ರಾನ್‌ ಸೌದಿ ಉದ್ಯಮಿಯೊಬ್ಬರ ಮುಂದೆ ಹೇಳಿದ್ದಾರೆ. ಪಾಕಿಸ್ತಾನದ ಮೂಲಕ ಭಾರತವು ಮಧ್ಯ ಏಷಿಯಾದ (Central Asia) ಸಂಪರ್ಕವನ್ನು ಪಡೆಯುವ ಮೂಲಕ ದೊಡ್ಡ ಮಾರುಕಟ್ಟೆಗಳ ಸಂಪರ್ಕ ಸಾಧಿಸಬಹುದು ಎಂದು ಇಮ್ರಾನ್‌ ಹೇಳಿದ್ದಾರೆ. 

ಪಾಕ್‌ ಕ್ರಿಕೆಟ್‌ ಅಭಿಮಾನಿಗಳಲ್ಲಿ ಸಂತಸ!

ವಿಶ್ವಕಪ್‌ನಲ್ಲಿ ಇನ್ನೂ ಪಾಕಿಸ್ತಾನ ವಿರುದ್ಧ ಅಜೇಯವಾಗಿ ಉಳಿದಿದ್ದ ಭಾರತ, ಟಿ20 ವಿಶ್ವಕಪ್‌ನಲ್ಲಿ ಸತತ 5 ಗೆಲುವುಗಳ ಬಳಿಕ ಮೊದಲ ಬಾರಿಗೆ ಸೋಲು ಕಂಡಿತ್ತು. ದುಬೈನಲ್ಲಿ ನಡೆದ ಈ ವಿಶ್ವಕಪ್‌ನ ಬಹು ನಿರೀಕ್ಷಿತ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, ಭಾರತ ಭಾರೀ ಮುಖಭಂಗಕ್ಕೊಳಗಾಗುವಂತೆ ಮಾಡಿತ್ತು. ಈ ಗೆಲುವು ಪಾಕಿಸ್ತಾನ ಅಭಿಮಾನಿಗಳನ್ನು ಸಂಭ್ರಮಿಸುವಂತೆ ಮಾಡಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಪಂದ್ಯದ ಬಳಿಕ, ತಂಡದ ನಾಯಕ ಬಾಬರ್ ಮಾತನಾಡುತ್ತಿರುವ ವಿಡಿಯೋ ಒಂದನ್ನು ಟ್ವೀಟ್ ಮಾಡಿತ್ತು. 

T20 World Cup: ಟೀಂ ಇಂಡಿಯಾ ಸೋಲಿನೊಂದಿಗೆ ಮೌಕಾ ಮೌಕಾ ಜಾಹೀರಾತಿಗೆ ತೆರೆ..!

ಬಾಬರ್ (Babar Azam) ಪಾಕ್ ತಂಡದ ಆಟಗಾರರನ್ನು ಕೂರಿಸಿ ಕೆಲ ಮಾತುಗಳನ್ನು ಹೇಳಿದ್ದಾರೆ. ಭಾರತದ ವಿರುದ್ಧದ ಪಂದ್ಯದಲ್ಲಿ ತಂಡದ ಪ್ರದರ್ಶನದ ಬಗ್ಗೆ ಹಾಡಿಹೊಗಳಿದ ನಾಯಕ ಬಾಬರ್ ಈ ಉತ್ತಮ ಪ್ರದರ್ಶನಕ್ಕೆ ಭೇಷ್ ಎಂದಿದ್ದರು. ನಂತರ ಮಾತನಾಡಿದ ಅವರು, ಇದು ಕೇವಲ ಆರಂಭವಷ್ಟೇ ನಮ್ಮ ಗುರಿ ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವುದು ಎಂಬುವುದನ್ನು ಮರೆಯಬೇಡಿ ಎಂದು ಪಾಕ್ ಆಟಗಾರರನ್ನು ಹುರಿದುಂಬಿಸಿದ್ದರು.

Latest Videos
Follow Us:
Download App:
  • android
  • ios