ಮಾಡು ಇಲ್ಲವೇ ಮಡಿ ಯುದ್ಧಕ್ಕೆ ಹೆಝ್‌ಬೊಲ್ಹಾ ಎಂಟ್ರಿಕೊಟ್ಟರೆ ಲೆಬೆನಾನ್ ಉಡೀಸ್, ಇಸ್ರೇಲ್ ಎಚ್ಚರಿಕೆ!
ನಮಗಿದು ಮಾಡು ಇಲ್ಲವೇ ಮಡಿ ಹೋರಾಟ. ಹಮಾಸ್ ಉಗ್ರರ ಸದಬಡಿದೇ ತೀರುತ್ತೇವೆ. ಇದರ ನಡುವೆ ಹೆಝ್‌ಬೊಲ್ಹಾ ಉಗ್ರರು ಎಂಟ್ರಿ ಮೂಲಕ ಲೆಬೆನಾನ್ ಎಳೆದು ತರುತ್ತಿದ್ದೀರಿ. ಇದು ನೆಟ್ಟಗಿರಲ್ಲ. ಉಡೀಸ್ ಮಾಡಿಬಿಡುತ್ತೇವೆ. ಇದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇರವಾಗಿ ಲೆಬೆನಾನ್ ಉಗ್ರರಿಗೆ ನೀಡಿದ ಎಚ್ಚರಿಕೆ

ಜೆರುಸಲೇಂ(ಅ.22) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಇದೀಗ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಮಾಸ್ ಉಗ್ರರ ವಿರುದ್ದ ನಮ್ಮ ಯುದ್ಧ. ಉಗ್ರರನ್ನು ಸಂಪೂರ್ಣ ನಾಶ ಮಾಡದೇ ಬಿಡುವುದಿಲ್ಲ. ಇದರ ನಡುವೆ ಲೆಬೆನಾನ್ ಗಡಿಯಿಂದ ಹೆಝ್‌ಬೊಲ್ಹಾ ಉಗ್ರರು ಮತ್ತೆ ರಾಕೆಟ್ ದಾಳಿ ನಡೆಸಿದ್ದಾರೆ. ಇದರಿಂದ ಕೆರಳಿರುವ ಇಸ್ರೇಲ್ ಪ್ರಧಾನಿ ಇದೀಗ ನೇರವಾಗಿ ಲೆಬೆನಾನ್ ಹಾಗೂ ಹೆಝ್‌ಬೊಲ್ಹಾ ಉಗ್ರರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ನಮಗಿದು ಮಾಡು ಇಲ್ಲವೇ ಮಡಿ ಹೋರಾಟ. ಹಮಾಸ್ ಉಗ್ರರ ವಿರುದ್ದ ನಾವು ಹೋರಾಡುತ್ತಿದ್ದೇವೆ. ಇದರ ನಡುವೆ ಹೆಝ್‌ಬೊಲ್ಹಾ ಉಗ್ರರು ಲೆಬೆನಾನ್‌ನ್ನು ದೇಶದ ನಡುವೆ ಎಳೆದು ತರುತ್ತಿದ್ದಾರೆ. ಇದು ನೆಟ್ಟಗಿರಲ್ಲ. ಉಗ್ರರ ದಾಳಿ ಮುಂದುವರಿದರೆ ಪ್ರತಿದಾಳಿ ಎದುರಿಸಲು ಸಜ್ಜಾಗಿ ಎಂದು ಬೆಂಜಮಿನ್ ನೇತಾನ್ಯಾಹು ಎಚ್ಚರಿಸಿದ್ದಾರೆ.
ಇಸ್ರೇಲ್ ಸೇನೆ ಹಗಲು ಪಾತ್ರಿ ಹಮಾಸ್ ಉಗ್ರರ ವಿರುದ್ದ ಹೋರಾಡುತ್ತಿದೆ. ಇದು ಉಗ್ರರ ವಿರುದ್ಧದ ಹೋರಾಟ. ಗಾಜಾವನ್ನು ಅಡಗುತಾಣ ಮಾಡಿ ವಿದ್ವಂಸಕ ಕೃತ್ಯ ನಡೆಸಿದ ಹಮಾಸ್ ಉಗ್ರರ ವಿರುದ್ಧ ಈ ಹೋರಾಟ. ಅಕ್ಟೋಬರ್ 7 ರಂದು ನಮ್ಮ ನಾಗರೀಕರ ಮೇಲೆ ನಡೆಸಿದ ಪೈಶಾಚಿಕ ದಾಳಿಗೆ ಪ್ರತಿಯಾಗಿ ನಾವು ಹೋರಾಡುತ್ತಿದ್ದೇವೆ. ಆದರೆ ಲೆಬೆನಾನ್ ಗಡಿಯಿಂದ ದಕ್ಷಿಣ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಯುತ್ತಿದೆ. ಹೆಝ್‌ಬೊಲ್ಹಾ ಉಗ್ರರು ನಮ್ಮ ಯುದ್ಧದ ನಡುವೆ ಲೆಬೆನಾನ್ ಎಳೆದುತರಬೇಡಿ. ಇದರ ಪರಿಣಾಮ ನೆಟ್ಟಗಿರಲ್ಲ ಎಂದು ಬೆಂಜಮಿನ್ ಎಚ್ಚರಿಸಿದ್ದಾರೆ.
ಗಾಜಾದಿಂದ ವೆಸ್ಟ್‌ಬ್ಯಾಂಕ್ ಕಡೆ ಚಿತ್ತ, ಉಗ್ರರಿಗೆ ನೆರವು ನೀಡಿದ ಮಸೀದಿ ಧ್ವಂಸಗೊಳಿಸಿದ ಇಸ್ರೇಲ್!
ಹೆಝ್‌ಬೊಲ್ಹಾ ಯುದ್ಧದ ಲಾಭ ಪಡೆಯುವ ಯತ್ನ ಮಾಡುತ್ತಿದೆ. ಇದು ಅತ್ಯಂತ ಕೆಟ್ಟ ನಡೆಯಾಗಿದೆ. ನಾವು ಗಾಜಾದಲ್ಲಿ ಅಡಗಿರುವ ಉಗ್ರರನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದೇವೆ. ಇದರ ಮಧ್ಯ ಪ್ರವೇಶಿಸುವ ಧೈರ್ಯವನ್ನು ಹೆಝಬೊಲ್ಹಾ ತೋರಿಸದಿದ್ದರೆ ಲೆಬೆನಾನ್‌ಗೆ ಒಳಿತು. ಇಸ್ರೇಲ್ ಪ್ರತಿದಾಳಿ ಆರಂಭಿಸಿದರೆ ಮುಗಿಸದೇ ನಿಲ್ಲಿಸುವುದಿಲ್ಲ ಎಂದು ಬೆಂಜಮಿನ್ ನೇರ ಎಚ್ಚರಿಕೆ ನೀಡಿದ್ದಾರೆ.
ಗಾಜಾದಲ್ಲಿನ ಸಂತ್ರಸ್ತರಿಗೆ ಈಜಿಪ್ಟ್ ಮೂಲಕ ಪರಿಹಾರ ಸಾಮಾಗ್ರಿ ಪೂರೈಕೆ ಮಾಡಲಾಗುತ್ತಿದೆ. ಅಮೆರಿಕ ಮಧ್ಯಪ್ರವೇಶದಿಂದ ಗಾಜಾದ ಕೆಲ ಭಾಗದ ಮೇಲಿನ ದಾಳಿಯನ್ನು ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ ವೆಸ್ಟ್ ಬ್ಯಾಂಕ್‌ನಲ್ಲಿರುವ ಮಸೀದಿ ಮೇಲೆ ಇಸ್ರೇಲ್ ಸೇನೆ ದಾಳಿ ಮಾಡಿದೆ. ಈ ಮಸೀದಿ ಹಮಾಸ್ ಉಗ್ರರಿಗೆ ನೆರವು ನೀಡಿತ್ತು. ಶಸ್ತ್ರಾಸ್ತ್ರ ಪೂರೈಕೆ ಮಾಡಿತ್ತು. ಉಗ್ರ ಚಟುವಟಿಕೆಗೆ ಮಸೀದಿಯನ್ನು ಬಳಸಿಕೊಳ್ಳಲಾಗಿತ್ತು. ಹೀಗಾಗಿ ಈ ಮಸೀದಿಯನ್ನು ಧ್ವಂಸಗೊಳಿಸಲಾಗಿದೆ.
ಜೆರುಸಲೇಂನಲ್ಲಿ 3 ಸಹಸ್ರಮಾನದ ಹಿಂದೆ ಏನಾಗಿತ್ತು..? 70 ವರ್ಷಗಳ ಹಿಂದೆ ಏನಾಯ್ತು ನೋಡಿ..