ಗಾಜಾದಿಂದ ವೆಸ್ಟ್‌ಬ್ಯಾಂಕ್ ಕಡೆ ಚಿತ್ತ, ಉಗ್ರರಿಗೆ ನೆರವು ನೀಡಿದ ಮಸೀದಿ ಧ್ವಂಸಗೊಳಿಸಿದ ಇಸ್ರೇಲ್!
ಹಮಾಸ್ ಉಗ್ರರ ಮೇಲೆ ದಾಳಿ ಮುಂದುವರಿಸಿರುವ ಇಸ್ರೇಲ್ ಇದೀಗ ಗಾಜಾದಿಂದ ವೆಸ್ಟ್‌ಬ್ಯಾಂಕ್‌ನತ್ತ ಚಿತ್ತ ಹರಿಸಿದೆ. ಹಮಾಸ್ ಉಗ್ರರಿಗೆ ನೆರವು ನೀಡಿದ್ದು ಮಾತ್ರವಲ್ಲ, ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಉಗ್ರ ಚಟುವಟಿಕೆಗೆ ಮಸೀದಿಯನ್ನು ಬಳಸಲಾಗಿತ್ತು. ಈ ಮಸೀದಿಯನ್ನು ಇಸ್ರೇಲ್ ಧ್ವಂಸಗೊಳಿಸಿದೆ.

ವೆಸ್ಟ್‌ಬ್ಯಾಂಕ್(ಅ.22) ಇಸ್ರೇಲ್ ಮೇಲೆ ಹಮಾಸ್ ಉಗ್ರರು ಅಕ್ಟೋಬರ್ 7 ರಂದು ಭೀಕರ ದಾಳಿ ನಡೆಸಿ ಮಾರಣಹೋಮ ನಡೆಸಿತ್ತು. ಇಸ್ರೇಲ್ ನಾಗರೀಕರನ್ನೇ ಟಾರ್ಗೆಟ್ ಮಾಡಿತ್ತು. ಈ ದಾಳಿಗೆ ಪ್ರತಿಯಾಗಿ ಇಸ್ರೇಲ್, ಹಮಾಸ್ ಉಗ್ರರ ವಿರುದ್ಧ ಯುದ್ಧ ಸಾರಿದೆ. ಗಾಜಾದ ಮೇಲೆ ಪ್ರತಿ ದಿನ ದಾಳಿ ನಡೆಸಿದ ಇಸ್ರೇಲ್ ಇದೀಗ ವೆಸ್ಟ್ ಬ್ಯಾಂಕ್ ಕಡೆ ಮುಖಮಾಡಿದೆ. ಹಮಾಸ್ ಉಗ್ರರಿಗೆ ನೆರವು ನೀಡಿದ ವೆಸ್ಟ್ ಬ್ಯಾಂಕ್‌ನ ಮಸೀದಿಯನ್ನೇ ಇಸ್ರೇಲ್ ಸೇನೆ ಧ್ವಂಸಗೊಳಿಸಿದೆ.
ಮಸೀದಿಯನ್ನು ಇಸ್ಲಾಮಿಕ್ ಜಿಹಾದ್ ಭಯೋತ್ಪಾದನೆಗೆ ಬಳಸಿಕೊಳ್ಳಲಾಗಿದೆ. ಅಕ್ಟೋಬರ್ 7 ರಂದು ನಡೆದ ಇಸ್ರೇಲ್ ನಾಗರೀಕರ ಮೇಲಿನ ದಾಳಿ ವೇಳೆ ಇದೇ ಮಸೀದಿ ನೆರವು ನೀಡಿತ್ತು. ಇಸ್ರೇಲ್ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಸೇನೆ ದಾಳಿ ನಡೆಸಿದೆ. ಏರ್‌ಸ್ಟ್ರೈಕ್ ಮೂಲಕ ಮಸೀದಿಯನ್ನು ಧ್ವಂಸಗೊಳಿಸಿದೆ. ಇದೇ ವೇಳೆ ಇಸ್ರೇಲ್ ಸೇನೆ ಮಹತ್ವದ ಎಚ್ಚರಿಕೆಯನ್ನೂ ನೀಡಿದೆ. ಅಕ್ಟೋಬರ್ 7 ರಂದು ಇಸ್ರೇಲ್ ನಾಗರೀಕರ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಗೆ ನೆರವು ನೀಡಿದ ಯಾವುದೇ ಕಟ್ಟಡವಾಗಲಿ, ಮಸೀದಿಯಾಗಲಿ ಧ್ವಂಸಗೊಳಿಸುತ್ತೇವೆ ಎಂದು ಎಚ್ಚರಿಸಿದೆ.
ಇಸ್ರೇಲ್ ವಿರುದ್ಧ ಮರುಕಳಿಸುತ್ತಾ 1948ರ ಅರಬ್ ಯುದ್ಧ..? ತೈಲ ನಿರ್ಬಂಧ ಹೇರುವಂತೆ ಇರಾನ್ ಒತ್ತಾಯ..!
ಜೆನಿನ್‌ನಲ್ಲಿರುವ ಅಲ್ ಅನ್ಸರ್ ಮಸೀದಿ ನೆಲಸಮಗೊಂಡಿದೆ. ಈ ಕುರಿತು ಇಸ್ರೇಲ್ ಡಿಫೆನ್ಸ್ ಫೋರ್ಸ್ ಮಾಹಿತಿ ಹಂಚಿಕೊಂಡಿದೆ. ಇದೇ ವೇಳೆ ಮಸೀದಿ ಆವರಣವನ್ನು ಯಾವ ರೀತಿ ಇಸ್ಲಾಮಿಕ್ ಜಿಹಾದಿ ಭಯೋತ್ಪಾದನೆಗೆ ಬಳಸಿಕೊಳ್ಳಲಾಗಿದೆ ಅನ್ನೋ ದಾಖಲೆಯನ್ನು ನೀಡಿದೆ. ಅಕ್ಟೋಬರ್ 7 ರಂದು ಉಗ್ರರ ದಾಳಿ ಬೆನ್ನಲ್ಲೇ ವೆಸ್ಟ್‌ಬ್ಯಾಂಕ್‌ನಲ್ಲಿನ ಮಸೀದಿಗಳ ಮೈಕ್‌ಗಳಲ್ಲಿ ಹಮಾಸ್ ಉಗ್ರರಿಗೆ ಬೆಂಬಲ ನೀಡುವಂತೆ ಮುಸ್ಲಿಮರಿಗೆ ಕರೆ ನೀಡಲಾಗಿತ್ತು. ಇದೀಗ ಈ ಎಲ್ಲಾ ಮಸೀದಿಗಳನ್ನು ಇಸ್ರೇಲ್ ಟಾರ್ಗೆಟ್ ಮಾಡಿದೆ.
ಹಮಾಸ್ ಉಗ್ರರು ಇತ್ತೀಚೆಗೆ ಇಬ್ಬರು ಅಮೆರಿಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಈ ಕುರಿತು ಹೇಳಿಕೆ ನೀಡಿರುವ ಹಮಾಸ್, ಒತ್ತೆಯಾಳುಗಳನ್ನು ಇಸ್ರೇಲ್ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿತ್ತು. ಇದಕ್ಕೆ ಉತ್ತರ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು, ಒತ್ತೆಯಾಳಾಗಳು ಹಾಗೂ ನಾಪತ್ತೆಯಾಗಿರುವ ಎಲ್ಲರನ್ನು ಸುರಕ್ಷಿತವಾಗಿ ಮತ್ತೆ ಮನೆ ಸೇರಿಸಲು ಇಸ್ರೇಲ್ ಎಲ್ಲಾ ಪ್ರಯತ್ನ ಮಾಡಲಿದೆ ಎಂದಿದ್ದಾರೆ.
ಗಾಜಾಗೆ ವಿಶ್ವಾದ್ಯಂತ ಬೆಂಬಲ, ಆದರೆ ಗಾಜಾ ನಿರಾಶ್ರಿತರು ಅರಬ್ ರಾಷ್ಟ್ರಗಳಿಗೂ ಬೇಡ!