ಬರೋಬ್ಬರಿ 30 ನಿಮಿಷ ಯುವತಿ ಒಂದೆ ಒಂದು ಬಟ್ಟೆ ಇಲ್ಲದೆ ವಿಮಾನದಲ್ಲಿ ರಂಪಾಟ ಮಾಡಿದ್ದಾಳೆ. ಸಹ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದಾರೆ. ಹಲವರು ಒಳಗೊಳಗೆ ಖುಷಿ ಪಟ್ಟ ಘಟನೆ ನಡೆದಿದೆ.

ನ್ಯೂಯಾರ್ಕ್(ಮಾ.07) ಎಲ್ಲಾ ಪ್ರಯಾಣಿಕರು ವಿಮಾನದೊಳಗೆ ಬಂದು ಕುಳಿತಿದ್ದಾರೆ. ಸೂಚನೆ, ಮಾಹಿತಿ ನೀಡಿದ ಬಳಿಕ ವಿಮಾನ ಇನ್ನೇನು ಹೊರಡಬೇಕ ಅನ್ನುವಷ್ಟರಲ್ಲೇ ಯುವತಿಯ ರಂಪಾಟ ಶುರುವಾಗಿದೆ. ವಿಮಾನ ಇನ್ನೂ ಟೇಕ್ ಆಫ್ ಆಗಿಲ್ಲ. ಆದರೆ ಯುವತಿ ತನ್ನ ಬಟ್ಟೆಗಳನ್ನು ಟೇಕ್ ಆಫ್ ಮಾಡಿದ್ದಳು. ಆಸನಗಳ ನಡುವಿನ ಬೇ ಯಿಂದ ಅತ್ತ ಇತ್ತ ಚೀರಾಡುತ್ತಾ ಸಾಗಿದ್ದಾಳೆ. ಗಗನ ಸಖಿಯರ ವಿರುದ್ದ ಕೂಗಾಡಿದ್ದಾಳೆ. ಕಾಕ್‌ಪಿಟ್ ಬಾಗಿಲು ತರೆಯಲು ಯತ್ನಿಸಿದ್ದಾಳೆ. ಇದರ ಪರಿಣಾಮ ವಿಮಾನ ರನ್‌ವೇನಿಂದ ಮರಳಿ ನಿಲ್ದಾಣಕ್ಕೆ ಬಂದ ಘಟನೆ ಅಮೆರಿಕದಲ್ಲಿ ನಡದಿದೆ. ಈ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ. 

ಸೌತ್‌ವೆಸ್ಟ್ ಏರ್‌ಲೈನ್ಸ್ ಫ್ಲೈಟ್‌ ಹತ್ತಿದ ಯುವತಿ ಈ ರಂಪಾಟ ಮಾಡಿದ್ದಾಳೆ. ಫಿಯೋನಿಕ್ಸ್‌ಗೆ ತೆರಳು ವಿಮಾನ ಸಜ್ಜಾಗಿತ್ತು. ಎಲ್ಲಾ ಪ್ರಯಾಮಿಕರು ವಿಮಾನದಲ್ಲಿದ್ದರು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಕ್ಕೆ ಸಜ್ಜಾಗಿದ್ದರು. ವಿಮಾನ ಹತ್ತಿ ತಮ್ಮ ತಮ್ಮ ಆಸನದಲ್ಲಿ ಪ್ರಯಾಣಿಕರು ಕುಳಿತಿದ್ದಾರೆ. ಇತ್ತ ಗಗನಸಖಿಯರು ಬಂದು ಎಲ್ಲರು ಸರಿಯಾಗಿ ಕುಳಿತಿದ್ದಾರೆ ಎಂಬುದು ಖಚಿತಪಡಿಸಿದ್ದಾರೆ. ಬಳಿಕ ಸೀಟ್ ಬೆಲ್ಟ್ ಸೇರಿದಂತೆ ಕೆಲ ಎಚ್ಚರಿಕೆ ಮಾಹಿತಿಯನ್ನು ನೀಡಿದ್ದಾರೆ. 

ಏರ್ ಇಂಡಿಯಾ ಭರ್ಜರಿ ಆಫರ್, ಕೇವಲ 1535 ರೂಗೆ ವಿಮಾನ ಪ್ರಯಾಣ! ತಕ್ಷಣ ಬುಕ್‌ ಮಾಡಿ

ಕೆಲ ಹೊತ್ತಲ್ಲೇ ವಿಮಾನ ರನ್‌ವೇಯತ್ತ ಸಾಗಲು ಆರಂಭಿಸಿದೆ. ಅಷ್ಟರಲ್ಲೇ ಯುವತಿಯೊಬ್ಬಳು ದಿಢೀರ್ ಸೀಟಿನಿಂದ ಎದ್ದಿದ್ದಾಳೆ. ಬಳಿಕ ರಂಪಾಟ ಆರಂಭಿಸಿದ್ದಾಳೆ. ಒಂದೊಂದೆ ಬಟ್ಟೆ ಕಳಜಿ ವಿಮಾನದಲ್ಲಿ ಇಡೀ ಓಡಾಡಿದ್ದಾಳೆ. ಕಿರುಚಾಡುತ್ತಾ, ಚೀರಾಡುತ್ತಾ ಯುವತಿಯ ರಂಪಾಟ ಆರಂಭಗೊಂಡಿದೆ. ಯುವತಿ ಮೈಮೇಲೆ ಬಟ್ಟೆ ಇಲ್ಲದ ಕಾರಣ ಆಕೆಯನ್ನು ತಡೆದು ನಿಲ್ಲಿಸುವ ಪ್ರಯತ್ನಕ್ಕೆ ಪುರುಷರು ಹೋಗಲಿಲ್ಲ. ಇತ್ತ ಗಗನಸಖಿಯರು ಅಸಹಾಯಕರಾಗಿ ನಿಂತು ಬಿಟ್ಟರು.

ಯುವತಿ ಕಾಕ್‌ಪಿಟ್ ಒಳ ಪ್ರವೇಶಿಸಲು ಪ್ರಯತ್ನಿಸಿದ್ದಾಳೆ. ಬಳಿಕ ಗಗನಸಖಿಯರು, ಕ್ಯಾಪ್ಟನ್ ಸೇರಿದಂತೆ ಎಲ್ಲರ ವಿರುದ್ಧ ಕಿರುಚಾಡಿದ್ದಾಳೆ. ಆಕ್ರೋಶ ಹೊರಹಾಕಿದ್ದಾರೆ. ಯುವತಿಯ ರಂಪಾಟ ಹೆಚ್ಚಾಗುತ್ತಿದ್ದಂತೆ ರನ್‌ವೇನತ್ತ ಸಾಗುತ್ತಿದ್ದ ವಿಮಾನ ದಿಢೀರ್ ವಾಪಸ್ ಬರಲು ನಿರ್ಧರಿಸಿದೆ. ರನ್‌ವೇನಿಂದ ಮರಳಿದ ವಿಮಾನ ಮತ್ತೆ ನಿಲ್ದಾಣಕ್ಕೆ ಬಂದಿದೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ಆಗಮಿಸಿದ್ದಾರೆ. 

Scroll to load tweet…

ಭದ್ರತಾ ಸಿಬ್ಬಂದಿಗಳು ಆಗಮಿಸಿ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಬರೋಬ್ಬರಿ 30 ನಿಮಿಷಗಳ ಕಾಲ ಯುವತಿ ರಂಪಾಟ ಮಾಡಿದ್ದಾಳೆ. ಇತ್ತ ಭದ್ರತಾ ಪಡಗಳು ವಶದಲ್ಲಿ ಕಿರುಚಾಡುತ್ತಲೇ ಇದ್ದ ಯುವತಿಯನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಯುವತಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಹೀಗಾಗಿ ಯುವತಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಲ್ಲ. 

ಘಟನೆ ಕುರಿತು ಹಲವು ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ. ಯುವತಿ ಏಕಾಏಕಿ ಈ ರೀತಿ ಮಾಡಿದಾಗ ಆತಂಕ ಎದುರಾಗಿತ್ತು. ಏನಾಗುತ್ತಿದೆ, ಯುವತಿ ಯಾರು ಅನ್ನೋದು ಗೊತ್ತಾಗಲಿಲ್ಲ. ಹೀಗಾಗಿ ಆತಂಕ ಹೆಚ್ಚಾಗಿತ್ತು. ಜೊತೆಗೆ ಕುಟುಂಬದ ಜೊತೆ ಪ್ರಯಾಣಿಸುತ್ತಿದ್ದ ಹಲವರು ಮುಜುಗರಕ್ಕೀಡಾದರು. ಆದರೆ ಯುವತಿ ಮಾನಸಿಕವಾಗಿ ಸಮಸ್ಯೆ ಇದೆ ಎಂದು ಗೊತ್ತಾದಾಗ ತೀವ್ರ ದುಃಖವಾಯಿತು ಎಂದು ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಿಂದ ವಿಯೆಟ್ನಾಂಗೆ ಕೇವಲ ₹11ಕ್ಕೆ ವಿಮಾನ ಟಿಕೆಟ್, ಡಿಸೆಂಬರ್‌ವರೆಗೆ ಪ್ರತಿ ಶುಕ್ರವಾರ ಆಫರ್