Asianet Suvarna News Asianet Suvarna News

ಮಧ್ಯ ಆಗಸದಲ್ಲಿ ತೆರೆದುಕೊಂಡ ವಿಮಾನದ ಬಾಗಿಲು: ವೈರಲ್ ವಿಡಿಯೋ

 25 ಪ್ರಯಾಣಿಕರು ಐದು ಜನ ಸಿಬ್ಬಂದಿ ಇದ್ದ ರಷ್ಯಾದ ವಿಮಾನವೊಂದು ಮಧ್ಯ ಆಗಸದಲ್ಲಿ ಹಾರಾಡುತ್ತಿದ್ದಾಗ ವಿಮಾನದ ಹಿಂಭಾಗದ ಬಾಗಿಲು ತೆರೆದುಕೊಂಡು  ಪ್ರಯಾಣಿಕರು ಆತಂಕಕ್ಕೆ ಒಳಗಾದ ಘಟನೆ  ನಡೆದಿದೆ.

Plane door opened in midair passengers get Distraught akb
Author
First Published Jan 10, 2023, 4:38 PM IST

ಮಾಸ್ಕೋ:  25 ಪ್ರಯಾಣಿಕರು ಐದು ಜನ ಸಿಬ್ಬಂದಿ ಇದ್ದ ರಷ್ಯಾದ ವಿಮಾನವೊಂದು ಮಧ್ಯ ಆಗಸದಲ್ಲಿ ಹಾರಾಡುತ್ತಿದ್ದಾಗ ವಿಮಾನದ ಹಿಂಭಾಗದ ಬಾಗಿಲು ತೆರೆದುಕೊಂಡು  ಪ್ರಯಾಣಿಕರು ಆತಂಕಕ್ಕೆ ಒಳಗಾದ ಘಟನೆ  ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.   ವಿಮಾನದ ಬಾಗಿಲು ಒಮ್ಮೆಗೆ ತೆರೆದುಕೊಂಡಿದ್ದರಿಂದ ಪ್ರಯಾಣಿಕರ ಲಗೇಜುಗಳನ್ನು ಅದು ದೂರ ತಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ ಎಂದು  ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ಘಟನೆಯಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಆಘಾತಗೊಂಡಿದ್ದರು. 

IrAero ಗೆ ಸೇರಿದ ಎಎನ್-26 ಟ್ವಿನ್ ಪ್ರಾಪ್ ವಿಮಾನದಲ್ಲಿ ಈ ಘಟನೆ ನಡೆದಿದೆ.  ಸೈಬೀರಿಯನ್ ನಗರವಾದ (Siberian city) ಮಗನ್‌ನಿಂದ ರಷ್ಯಾದ ಪೆಸಿಫಿಕ್ ಕರಾವಳಿಯ ಮಗದನ್‌ಗೆ ಹೋಗುವ ಮಾರ್ಗದಲ್ಲಿ ವಿಮಾನವು ಮೈನಸ್ 41 ಡಿಗ್ರಿ ತಾಪಮಾನದಲ್ಲಿ ಹಾರಾಡುತ್ತಿದ್ದಾಗ ವಿಮಾನದ ಬಾಗಿಲು ತೆರೆದುಕೊಂಡಿದೆ. ಈ ವಿಮಾನದಲ್ಲಿ 25 ಪ್ರಯಾಣಿಕರು ಹಾಗೂ 6 ಜನ ವಿಮಾನ ಸಿಬ್ಬಂದಿ ಇದ್ದರು.  ಈ ಘಟನೆಯ ವಿಡಿಯೋವನ್ನು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದು,  ಗಾಳಿಯು ವಿಮಾನದೊಳಗೆ ನುಗ್ಗುತ್ತಿರುವುದನ್ನು ಕಾಣಬಹುದು. ಈ ಘಟನೆಯಿಂದಾಗಿ ವಿಮಾನವೂ ತುರ್ತು ಲ್ಯಾಂಡ್ ಆಯ್ತು ಎಂದು ತಿಳಿದು ಬಂದಿದೆ.  ಅಲ್ಲದೇ ವಿಮಾನದೊಳಗೆ ಗಾಳಿಯೂ ನುಗ್ಗಿದ ರಭಸಕ್ಕೆ ಕೆಲವರು ಧರಿಸಿದ್ದ ಟೋಪಿ ಕೂಡ ಹಾರಿ ಹೋಗಿದೆ ಎಂದು ತಿಳಿದು ಬಂದಿದೆ.

ಆಕಾಶದಲ್ಲಿ ವಿಮಾನ ಹಾರಾಟ: ವಿಮಾನದೊಳಗೆ ಪ್ರಯಾಣಿಕರ ಹೋರಾಟ

ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ.  ವಿಮಾನವೂ ಸುತ್ತು ಬರಲು ಆರಂಭಿಸಿದಾಗ ಮತ್ತೆ ಬಾಗಿಲನ್ನು ಮುಚ್ಚಿ ತಹಬದಿಗೆ ತರಲಾಯಿತು. ನಂತರ ವಿಮಾನ ಮಾಗನ್‌ನಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಯ್ತು ಎಂದು ತಿಳಿದು ಬಂದಿದೆ.  2800-2900 ಮೀಟರ್ ಎತ್ತರದಲ್ಲಿ ಚಾರ್ಟರ್ ವಿಮಾನ ಹಾರಾಡುತ್ತಿದ್ದಾಗ ವಿಮಾನದ ಬಾಗಿಲು ತೆರೆದುಕೊಂಡಿತು ಎಂದು IrAero ಮಾಹಿತಿ ನೀಡಿದೆ. ಈ ಘಟನೆಯ ವಿಡಿಯೋವನ್ನು ಉಕ್ರೇನ್‌ನ ಅಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಅಂಟನ್ ಗೆರಾಶ್ಚೆಂಕೊ (Anton Gerashchenko) ಅವರು ಕೂಡ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 

ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟಲ್ಲಿ ಗೋ‌ ಫಸ್ಟ್ ಏರ್ಲೈನ್ಸ್ ನಿರ್ಲಕ್ಷ್ಯ, ಪ್ರಯಾಣಿಕರಿಂದ ಭಾರೀ ಆಕ್ರೋಶ

 

Follow Us:
Download App:
  • android
  • ios