Asianet Suvarna News Asianet Suvarna News

ನ್ಯೂಯಾರ್ಕ್‌ನಲ್ಲಿ ವಿಮಾನ ಪತನ: ಭಾರತೀಯ ಮೂಲದ ಮಹಿಳೆ ಸಾವು, ಮಗಳ ಸ್ಥಿತಿ ಗಂಭೀರ

ನಾಲ್ಕು ಸೀಟುಗಳ ಚಾಲನಾ ತರಬೇತಿ ವಿಮಾನ ಅಪಘಾತಕ್ಕೀಡಾದ ಪರಿಣಾಮ ಭಾರತೀಯ ಮೂಲದ ಮಹಿಳೆ ಸಾವನ್ನಪ್ಪಿ, ಮಹಿಳೆಯ ಪುತ್ರಿ ಹಾಗೂ ಪೈಲಟ್ ಟ್ರೈನರ್ ಗಂಭೀರವಾಗಿ ಗಾಯಗೊಂಡ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ. 

Plane crashed in New York Indian origin woman died, daughter seriously injuried akb
Author
First Published Mar 7, 2023, 2:57 PM IST

ನ್ಯೂಯಾರ್ಕ್‌ : ನಾಲ್ಕು ಸೀಟುಗಳ ಚಾಲನಾ ತರಬೇತಿ ವಿಮಾನ ಅಪಘಾತಕ್ಕೀಡಾದ ಪರಿಣಾಮ ಭಾರತೀಯ ಮೂಲದ ಮಹಿಳೆ ಸಾವನ್ನಪ್ಪಿ, ಮಹಿಳೆಯ ಪುತ್ರಿ ಹಾಗೂ ಪೈಲಟ್ ಟ್ರೈನರ್ ಗಂಭೀರವಾಗಿ ಗಾಯಗೊಂಡ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ. ಈ ಪ್ರದರ್ಶನ ವಿಮಾನ (ಎಂದರೆ ವಿಮಾನ ಚಾಲನಾ ತರಬೇತಿಯ ಬಗ್ಗೆ ಆಸಕ್ತಿ ಇರುವವರಿಗೆ ವಿವರಣೆ ನೀಡುವಂತಹ ವಿಮಾನ)  ನ್ಯೂಯಾರ್ಕ್ ಸಮೀಪ ಅಪಘಾತಕ್ಕೀಡಾಗಿದ್ದರಿಂದ  ಪೈಲಟ್ ಭೋದಕನಿಗೂ ಗಂಭೀರ ಗಾಯಗಳಾಗಿವೆ.  63 ವರ್ಷದ ರೋಮಾ ಗುಪ್ತಾ ಮೃತ ಮಹಿಳೆ, ಅವರ ಮಗಳು 33 ವರ್ಷದ ರೀವಾ ಗುಪ್ತಾ ಹಾಗೂ ಭೋದಕ ಪೈಲಟ್‌ಗೆ ಗಂಭೀರವಾದ ಸುಟ್ಟಗಾಯಗಳಾಗಿವೆ.  ವಿಮಾನವೂ ಲಾಂಗ್ ಐಲ್ಯಾಂಡ್ ಬಳಿ ಅಪಘಾತಕ್ಕೀಡಾಗುವ ಮೊದಲು ಅದರ ಪೈಲಟ್ ಕಾಕ್‌ಪಿಟ್‌ನಲ್ಲಿ ಹೊಗೆ ಬರುತ್ತಿರುವ ಬಗ್ಗೆ ವರದಿ ಮಾಡಿದ್ದಾರೆ ಎಂದು ಎನ್‌ಬಿಸಿ ನ್ಯೂಯಾರ್ಕ್ ಟಿವಿ ಚಾನೆಲ್ ವರದಿ ಮಾಡಿದೆ.

ನಾಲ್ಕು ಸೀಟುಗಳ ಸಿಂಗಲ್-ಇಂಜಿನ್ ಪೈಪರ್ ಚೆರೋಕೀ ವಿಮಾನವು (Piper Cherokee plane) ಲಾಂಗ್ ಐಲ್ಯಾಂಡ್‌ನ ರಿಪಬ್ಲಿಕ್ ಏರ್‌ಪೋರ್ಟ್‌ಗೆ ಹಿಂತಿರುಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ.  ಈ ಐಲ್ಯಾಂಡ್‌ನಿಂದಲೇ ವಿಮಾನ ಟೇಕಾಫ್ ಆಗಿತ್ತು.  ಇಬ್ಬರಿಗೆ ತೀವ್ರವಾಗಿ ಸುಟ್ಟಗಾಯಗಳಾಗಿದ್ದು, ನನಗೆ ತಿಳಿದಿರುವಂತೆ ಅವರನ್ನು ನಾಗರಿಕರು ವಿಮಾನದಿಂದ ಹೊರತೆಗೆದಿದ್ದಾರೆ ಎಂದು ಉತ್ತರ ಲಿಂಡೆನ್‌ಹರ್ಸ್ಟ್ ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಕೆನ್ನಿ ಸ್ಟಾಲೋನ್ ಹೇಳಿದ್ದಾರೆ.

ಮಧ್ಯ ಪ್ರದೇಶದ ಮೊರೆನಾ ಬಳಿ 2 ಯುದ್ಧ ವಿಮಾನ ಪತನ; ಓರ್ವ ಪೈಲಟ್‌ ಸಾವು

ರೀವಾ (Reeva) ಮೂರನೇ ಹಂತದ ಸುಟ್ಟಗಾಯಗಳೊಂದಿಗೆ ಸ್ಟೋನಿ ಬ್ರೂಕ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ರೀವಾ ಅವರು ಮೌಂಟ್ ಸಿನಾಯ್ ವ್ಯವಸ್ಥೆಯಲ್ಲಿ ವೈದ್ಯರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.  ಈ ಅಪಘಾತಕ್ಕೀಡಾದ ನತದೃಷ್ಟ ವಿಮಾನದ ಮಾಲೀಕತ್ವ ಹೊಂದಿರುವ ಡ್ಯಾನಿ ವೈಜ್‌ಮನ್ ಫ್ಲೈಟ್ ಸ್ಕೂಲ್ ಪ್ರಕಾರ, ಫ್ಲೈಟ್ ಪೈಲಟ್‌ ಟ್ರೈನರ್‌ ಸ್ಥಿತಿಯೂ ಗಂಭೀರವಾಗಿದೆ. ಡ್ಯಾನಿ ವೈಜ್‌ಮನ್ ಫ್ಲೈಟ್ ಸ್ಕೂಲ್‌ನ (Danny Waizman Flight School) ಅಟಾರ್ನಿ ಒಲೆಹ್ ಡೆಕೈಲೊ (leh Dekaylo) ಹೇಳುವಂತೆ ಈ ವಿಮಾನದ ಪೈಲಟ್ ಎಲ್ಲಾ ಉತ್ತಮ ರೇಟಿಂಗ್‌ಗಳು ಮತ್ತು ಪ್ರಮಾಣೀಕರಣಗಳನ್ನು ಹೊಂದಿದ್ದರು ಮತ್ತು ಅಪಘಾತಕ್ಕೀಡಾದ ವಿಮಾನ ಕಳೆದ ವಾರವಷ್ಟೇ ಎರಡು ಕಠಿಣ ತಪಾಸಣೆಗಳಲ್ಲಿ ಪಾಸಾಗಿತ್ತು.  

ಈ ವಿಮಾನವೂ  ಪ್ರದರ್ಶನ ವಿಮಾನವಾಗಿದೆ, ಅಂದರೆ ವಿಮಾನ ಹಾರಾಟದ ಕಾರ್ಯವೈಖರಿ ಬಗ್ಗೆ ಆಸಕ್ತಿ ಇರುವವರಿಗೆ ಅವರ ಕುತೂಹಲ ತಣಿಸಲು ಹಾರಾಟದ ಬಗ್ಗೆ  ಪ್ರದರ್ಶಿಸಲ್ಪಡುವ ಪರಿಚಯಾತ್ಮಕ ವಿಮಾನ ಎಂದು ಡ್ಯಾನಿ ವೈಜ್‌ಮನ್ ಫ್ಲೈಟ್ ಸ್ಕೂಲ್‌ನ (Danny Waizman Flight School) ವಕೀಲ ಡೆಕಾಜ್ಲೋ  ತಿಳಿಸಿದ್ದಾರೆ.  ಸಫೊಲ್ಕ್ ಕೌಂಟಿ ಪೊಲೀಸರು ಹೇಳುವಂತೆ ಈ ವಿಮಾನವೂ ದಕ್ಷಿಣದ ಕಡಲತೀರಗಳ ಮೇಲೆ ಸಾಗಿದೆ. ನಂತರ ಪೈಲಟ್ ಕ್ಯಾಬಿನ್‌ನಲ್ಲಿ ಹೊಗೆ ಬಂದಿದ್ದನ್ನು ಗಮನಿಸಿದ್ದು  ಆ ಬಗ್ಗೆ ರಿಪಬ್ಲಿಕ್ ಏರ್‌ಪೋರ್ಟ್ ಏರ್ ಟ್ರಾಫಿಕ್ ಕಂಟ್ರೋಲರ್‌ಗಳಿಗೆ (traffic controller) ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ ಬೆಂಕಿಯ ಜ್ವಾಲೆ: 30 ವರ್ಷಗಳಲ್ಲಿ ನೂರಾರು ದುರಂತಗಳು, ಕಾರಣ ಏನು ಗೊತ್ತಾ?

ಅಲ್ಲದೇ ಇತ್ತೀಚೆಗಷ್ಟೇ ವಿಮಾನವು ಹಲವಾರು ತಪಾಸಣೆಗಳನ್ನು ನಡೆಸಿದೆ ಎಂದು ವಿಮಾನದ ಮಾಲೀಕರ ಪರ ವಕೀಲರೂ ಹೇಳಿದ್ದಾರೆ. ಅಪಘಾತದ ಕಾರಣವನ್ನು ನಿರ್ಧರಿಸಲು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು (National Transportation Safety Board) ತನಿಖೆಯನ್ನು ಆರಂಭಿಸಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಕೂಡ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ. ಹೆಚ್ಚಿನ ವಿಶ್ಲೇಷಣೆಗಾಗಿ ಅವಶೇಷಗಳನ್ನು ತೆಗೆದುಹಾಕಲು ಫೆಡರಲ್ ತನಿಖಾಧಿಕಾರಿಗಳು ಮೂರನೇ ಬಾರಿಗೆ ಕ್ರ್ಯಾಶ್ ಸೈಟ್‌ಗೆ ಮರಳುವ ನಿರೀಕ್ಷೆಯಿದೆ. ಇತ್ತ ಗುಪ್ತಾ ಕುಟುಂಬಕ್ಕಾಗಿ ರಚಿಸಲಾದ GoFundMeಯಿಂದ  USD 60,000 ಕ್ಕಿಂತ ಹೆಚ್ಚು ಸಂಗ್ರಹಿಸಿದೆ. 
 

Follow Us:
Download App:
  • android
  • ios