ಲಗೇಜ್ ಶುಲ್ಕ ತಪ್ಪಿಸಲು ಒಂದರ ಮೇಲೊಂದು 2.5 ಕೇಜಿ ಬಟ್ಟೆ ಧರಿಸಿದ ಯುವತಿ
ವಿಮಾನದಲ್ಲಿ ಪ್ರಯಾಣಿಸುವಾಗ 7 ಕೆಜಿ ಭಾರವಿರುವ ಲಗೇಜ್ ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋಗಬೇಕಾದರೆ ಪ್ರಯಾಣಿಕರು ಅದಕ್ಕೆ ಶುಲ್ಕ ಪಾವತಿಸಬೇಕು. ಈ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು ಯುವತಿ ಉಪಯೋಗಿಸಿದ ಪ್ಲ್ಯಾನ್ ಅಂತಿಂತದಲ್ಲ.
ನವದೆಹಲಿ, [ಅ.19]: ವಿಮಾನ ನಿಲ್ದಾಣದಲ್ಲಿ ನಿಗದಿಗಿಂತ ಹೆಚ್ಚಿನ ತೂಕದ ಲಗೇಜ್ ಒಯ್ದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಇದನ್ನು ತಪ್ಪಿಸುವ ಸಲುವಾಗಿ ಫಿಲಿಪ್ಪೀನ್ಸ್‌ನ ಮಹಿಳೆಯೊಬ್ಬಳು ಮೈ ಮೇಲೆ 2.5 ಕೆ.ಜಿ. ತೂಕದ ಬಟ್ಟೆಯನ್ನು ಧರಿಸಿಕೊಂಡಿದ್ದಾಳೆ.
ಅಚ್ಚರಿಯಾದರೂ ಸತ್ಯ. ವಿಮಾನ ನಿಲ್ದಾಣದಲ್ಲಿ ಕೇವಲ 7 ಕೆ.ಜಿ.ಯಷ್ಟು ತೂಕದ ಲಗೇಜ್ ಒಯ್ಯಲು ಅವಕಾಶ ಇದೆ. ಆದರೆ, ಆಕೆಯ ಲಗೇಜ್ ತೂಕ 9.5 ಕೆ.ಜಿ. ಇದ್ದಿದ್ದರಿಂದ ಉಳಿದ ಬಟ್ಟೆಯನ್ನು ವಿಮಾನ ನಿಲ್ದಾಣದಲ್ಲೇ ಧರಿಸಿಕೊಂಡು ಶುಲ್ಕ ಕಟ್ಟುವುದರಿಂದ ತಪ್ಪಿಸಿಕೊಂಡಿದ್ದಾಳೆ.
ಸಿದ್ದು-ರವಿ ಟ್ವಿಟ್ ವಾರ್, ಕೈ ಪ್ರಣಾಳಿಕೆ ಕದ್ದೊಯ್ಯಲು ಮೋದಿಗೆ ಮನವಿ: ಅ.19ರ ಟಾಪ್ 10 ಸುದ್ದಿ!
ಜೆಲ್ ರೊಡ್ರಿಗಸ್ ಎನ್ನುವ ಯುವತಿ, ಅಕ್ಟೋಬರ್ 2ರಂದು ಒನ್ ಏರ್ ಲೈನ್ಸ್‌ನಲ್ಲಿ ನಡೆದ ಪ್ರಸಂಗವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೆಲ್ ರೊಡ್ರಿಗಸ್ 9 ಕೆಜಿ ತೂಕದ ಲಗೇಜ್ ಹಿಡಿದು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ವಿಮಾನಯಾನ ಸಿಬ್ಬಂದಿ, ಲಗೇಜ್ 7 ಕೆಜಿ ಗಿಂತ ಹೆಚ್ಚು ಭಾರವಾಗಿದೆ. ಹೀಗಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಸೂಚಿಸಿದರು.
ಇದರಿಂದ ಪ್ಲ್ಯಾನ್ ಮಾಡಿದ ಜೆಲ್ ರೊಡ್ರಿಗಸ್, ಬ್ಯಾಗ್ ನಲ್ಲಿದ್ದ ಬಟ್ಟೆಯನ್ನು ಹೊರ ತೆಗೆದು ಒಂದರಮೇಲೊಂದು 2.5 ಕೆಜಿ ಬಟ್ಟೆ ಹಾಕಿಕೊಂಡಿದ್ದಾರೆ. ಈ ಮೂಲಕ ಬ್ಯಾಗ್ ನ ತೂಕ ಮಾಡಿಕೊಂಡು ಶುಲ್ಕದಿಂದ ಬಚಾವ್ ಆಗಿದ್ದಾರೆ.
ಬಳಿಕ ತಾನು ಹಾಕಿಕೊಂಡಿರುವ ಬಟ್ಟೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣ ಫೇಸ್‍ಬುಕ್ ನಲ್ಲಿ ಶೇರ್ ಮಾಡಿದ್ದಾರೆ.
ಕೇವಲ 2 ಕೆಜಿ ಬಟ್ಟೆಗೆ ನಾನು ಹೆಚ್ಚುವರಿಯಾಗಿ ಶುಲ್ಕ ನೀಡಲು ಇಷ್ಟಪಡುವುದಿಲ್ಲ. ಹೀಗಾಗಿ ಈ ರೀತಿಯಾಗಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದು ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.