ಒಂದು ಕುಟುಂಬ ನಿರಂತರ ಅನಾರೋಗ್ಯದಿಂದ ಬಳಲುತ್ತಿತ್ತು. ಔಷಧಿಗಳಿಂದಲೂ ಪರಿಹಾರ ಸಿಗದೇ ಕೊನೆಗೆ ಮನೆಗೆ ಸಿಸಿಟಿವಿ ಅಳವಡಿಸಿದಾಗ ಬೆಚ್ಚಿಬೀಳಿಸುವ ಸತ್ಯ ಬಯಲಾಯಿತು. ಹಾಗಿದ್ರೆ ಆ ಮನೆಯವವರಿಗೆ ಆಗಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ

ಮನೆ ಮಂದಿಗೆ ಆರೋಗ್ಯವೇ ಸರಿ ಇಲ್ಲದಿದ್ದರೆ ಎಷ್ಟು ಹಣವಿದ್ದರೂ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಕೆಲವೊಮ್ಮೆ ಔಷಧಿಗಳಿಂದಲೂ ಇದಕ್ಕೆ ಪರಿಹಾರ ಸಿಗುವುದಿಲ್ಲ. ಹೀಗಾದಾಗ ಕೆಲವರು ದೇವರ ಮೊರೆ ಹೋಗುತ್ತಾರೆ. ಮಾಟ ಮಂತ್ರದ ಮೊರೆ ಹೋಗುತ್ತಾರೆ. ಇನ್ನೂ ಏನೇನೋ ಮಾಡುತ್ತಾರೆ. ಆದರೆ ಪರಿಹಾರ ಕೆಲವೊಮ್ಮೆ ಶೂನ್ಯವಾಗಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಮನೆ ಮಂದಿಯ ನಿರಂತರ ಆರೋಗ್ಯ ಸಮಸ್ಯೆಯಿಂದ ಬೇಸತ್ತ ಕುಟುಂಬ ಬೇಕಾದಷ್ಟು ಕಡೆ ಔಷಧಿ ಮಾಡಿ ಕೊನೆಗೆ ಮನೆಗೆ ಸಿಸಿಟಿವಿ ಹಾಕುವುದಕ್ಕೆ ನಿರ್ಧಾರ ಮಾಡಿತ್ತು. ಸಿಸಿಟಿವಿ ಹಾಕಿದ ನಂತರ ಅದರಲ್ಲಿ ಸೆರೆಯಾದ ದೃಶ್ಯ ಕಂಡು ಮನೆ ಮಂದಿ ಬೆಚ್ಚಿ ಬಿದ್ದಿದ್ದರು ಹಾಗಿದ್ದರೆ ಮನೆಯಲ್ಲಿ ಆಗಿದ್ದೇನು? ಮನೆಯವವರಿಗೆ ಸಮಸ್ಯೆಯಾಗಿದ್ದು ಯಾವ ಕಾರಣಕ್ಕೆ ಈ ಎಲ್ಲಾ ನಿಗೂಢ ರಹಸ್ಯಗಳ ಅನಾವರಣ ಈ ಸ್ಟೋರಿಯಲ್ಲಿದೆ ನೋಡಿ...

ಇದು 2023ರ ಆರಂಭದಲ್ಲಿ ಅಮೆರಿಕಾದ ಫ್ಲೋರಿಡಾದ ತಂಪಾ ಎಂಬಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದ ಘಟನೆ. ಉಮರ್ ಅಬ್ದುಲ್ಲಾ ಎಂಬುವವರು ಇಲ್ಲಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದರು. ಮನೆಯಲ್ಲಿ ಏನೋ ವಿಚಿತ್ರ ಅನುಭವ ಅವರಿಗೆ ಆಗುತ್ತಿತ್ತು. ಅವರ ಮಗಳು ಹಾಗೂ ಗರ್ಭಿಣಿ ಹೆಂಡ್ತಿ ದಿನವೂ ನಿರಂತರ ತಲೆನೋವು, ವಾಕರಿಕೆ, ತಲೆತಿರುಗುವಿಕೆ ಮತ್ತು ಮೂಗಿನ ರಕ್ತಸ್ರಾವ ಮುಂತಾದ ಸಮಸ್ಯೆಯಿಂದ ಬಳಲುತ್ತಿದ್ದರು.

ಮನೆಯಲ್ಲಿನ ಈ ವಿಲಕ್ಷಣ ಅನುಭವದ ಜೊತೆ ಹೆಂಡತಿ ಮಕ್ಕಳು ಅನಾರೋಗ್ಯಕ್ಕೆ ಇಡಾಗುತ್ತಿರುವುದನ್ನು ನೋಡಿದ ಅಬ್ದುಲ್ಲಾ ಅವರು ಅನೇಕ ವೈದ್ಯರನ್ನು ನೋಡಿ ವೈದ್ಯಕೀಯ ಪರಿಹಾರ ಪಡೆಯಲು ಯತ್ನಿಸಿದರು. ಮನೆಯಲ್ಲಿ ಕ್ಲೀನಿಂಗ್‌ಗೆ ಒಬ್ಬರನ್ನು ನೇಮಿಸುವುದರಿಂದ ಹಿಡಿದು ಮನೆಯ ಉಪಕರಣ ಬದಲಾಯಿಸುವುದರಿಂದ ಹಿಡಿದು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಏನು ಸಾಧ್ಯವೋ ಅದೆಲ್ಲವನ್ನು ಮಾಡಿದರು. ಆದರೆ ಅನಾರೋಗ್ಯ ಮರುಕಳಿಸುತ್ತಿತ್ತು. ಹಾಗೂ ಮನೆಯಲ್ಲಿ ಬರುತ್ತಿದ್ದ ವಿಚಿತ್ರ ವಾಸನೆಗೆ ಇದು ಪರಿಹಾರ ನೀಡಲಿಲ್ಲ.

ಹೀಗಾಗಿ ಇದಕ್ಕೊಂದು ಪರಿಹಾರ ಕಂಡು ಹಿಡಿಯಲೇಬೇಕು ಎಂದು ಹಠಕ್ಕೆ ಬಿದ್ದ ಅಬ್ದುಲ್ಲಾ ಅವರು ಮನೆಯ ಮುಂದೆ ರಹಸ್ಯ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಿದರು. ಈ ಸಿಸಿಟಿವಿ ಅವರ ಆ ಅವರಿಗಿನ ಸಮಸ್ಯೆಗೆ ಕಾರಣ ಏನು ಎಂಬುದನ್ನು ತಿಳಿಸುವುದರ ಜೊತೆಗೆ ಕುಟುಂಬ ಈ ಆಘಾತಕಾರಿ ದೃಶ್ಯ ನೋಡಿ ಬೆಚ್ಚಿ ಬಿದ್ದಿತ್ತು.

ಹಾಗಿದ್ದರೆ ಸಿಸಿಟಿವಿಯಲ್ಲಿ ಇದ್ದಿದ್ದೇನು?

ಆ ಸಿಸಿಟಿವಿ ದೃಶ್ಯಾವಳಿಯಲ್ಲಿ ಅವರ ಮನೆಯ ಕೆಳಮಹಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ರೆಕಾರ್ಡ್ ಆಗಿದ್ದ. ಆತ ದಕ್ಷಿಣ ಫ್ಲೋರಿಡಾದ ವಿಶ್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರದಲ್ಲಿ ಪಿಹೆಚ್‌ಡಿ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುತ್ತಿದ್ದ. ಸಿಸಿಟಿವಿಯಲ್ಲಿ ಸೆರೆಯಾದಂತೆ ಚೀನಾ ಮೂಲದ 36 ವರ್ಷದ ಈ ಪಿಹೆಚ್‌ಡಿ ವಿದ್ಯಾರ್ಥಿ ಕ್ಸುಮಿಂಗ್ ಲಿ ಎಂಬಾತ ಅಬ್ದುಲ್ಲಾ ಅವರ ಮನೆಯ ಮುಂಭಾಗಿಲಿನ ಮೇಲೆ ಸಿರಿಂಜ್ ಬಳಸಿ ಏನೋ ರಾಸಾಯನಿಕವನ್ನು ಇಂಜೆಕ್ಟ್‌ ಮಾಡುತ್ತಿದ್ದಿದ್ದು ರೆಕಾರ್ಡ್ ಆಗಿತ್ತು.

ಆದರೆ ಪರೀಕ್ಷೆಯ ನಂತರ ಈ ವಸ್ತುವು ಮೆಥಡೋನ್ ಮತ್ತು ಹೈಡ್ರೋಕೊಡೋನ್ (methadone and hydrocodone)ಮಿಶ್ರಣವಾಗಿದೆ ಎಂಬುದು ತಿಳಿದು ಬಂತು. ಇದೊಂದು ರೀತಿಯ ತೀವ್ರವಾದ ನೋವು ನಿವಾರಕ ಡ್ರಗ್(opioids)ಆಗಿತ್ತು. ರಾಸಾಯನಿಕಗಳ ಮಿಶ್ರಣದ ಪರಿಣಾಮದ ಅರಿವಿದ್ದ ಕ್ಸುಮಿಂಗ್ ಲಿ, ತಮ್ಮ ಚಿಕ್ಕ ಮಗುವಿನ ಗಲಾಟೆಯ ಬಗ್ಗೆ ದೂರು ನೀಡಿದ್ದಕ್ಕೆ ಪ್ರತೀಕಾರವಾಗಿ ಅಬ್ದುಲ್ಲಾ ಅವರ ಕುಟುಂಬಕ್ಕೆ ಈ ರೀತಿಯಾಗಿ ವಿಷಪ್ರಾಶನ ಮಾಡುತ್ತಿದ್ದ. ಆತ ಅಬ್ದುಲ್ಲಾ ಕುಟುಂಬಕ್ಕೆ ಇದನ್ನು ಪ್ರತಿದಿನವೂ ಮಾಡುತ್ತಿದ್ದ, ಆತನ ಪಾತಕ ಕೃತ್ಯ ಸಾಬೀತಾದ ಹಿನ್ನೆಲೆ ಕೂಡಲೇ ಆತನನ್ನು ಬಂಧಿಸಲಾಯ್ತು.

ಆತನ ವಿರುದ್ಧ ಕೆಮಿಕಲ್ ಏಜೆಂಟ್ ಹೊಂದಿರುವ ಬ್ಯಾಟರಿ, ತೀವ್ರತರದ ಕಿರುಕುಳ ಹಾಗೂ ನಿಷೇಧಿತ ರಾಸಾಯನಿಕಗಳನ್ನು ಇಟ್ಟುಕೊಂಡಿರುವುದು ಸೇರಿದಂತೆ ಹಲವು ಆರೋಪಗಳು ಸಾಬೀತಾದವು. ಚೀನಾ ಮೂಲದವನಾಗಿದ್ದ ಲೀಯ ವಿದ್ಯಾರ್ಥಿ ವೀಸಾವನ್ನು ರದ್ದುಗೊಳಿಸಲಾಯ್ತು ಹಾಗೂ ಆತನನ್ನು ಫ್ಲೋರಿಡಾ ವಿವಿಯಿಂದ ಹೊರಗೆ ಹಾಕಲಾಯ್ತು. ಆದರೆ ಆತನಿಗೆ ದೊಡ್ಡ ಶಿಕ್ಷೆಯನ್ನು ನೀಡುವ ಬದಲು ಕೇವಲ ಚೀನಾಗೆ ಗಡೀಪಾರು ಮಾಡಲಾಯ್ತು.

ಕ್ರಿಮಿನಲ್ ಮನಸ್ತಿತಿಯ ವ್ಯಕ್ತಿಗಳಿಗೆ ಈ ರೀತಿಯ ರಾಸಾಯನಿಕ ವಸ್ತುಗಳ ಬಳಕೆಯ ಜ್ಞಾನ ಸಿಕ್ಕರೆ ಅವರು ಅದನ್ನು ದ್ವೇಷಕ್ಕಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

View post on Instagram