ನ್ಯೂ​ಯಾ​ರ್ಕ್(ಫೆ.26): ಕೊರೋನಾ ವಿರುದ್ಧ ವಿಶ್ವದ ಬಹುತೇಕ ಕಂಪನಿಗಳು ಅಭಿವೃದ್ಧಿಪಡಿಸಿರುವ ಲಸಿಕೆ 2 ಡೋಸ್‌ನದ್ದಾಗಿದ್ದರೆ, ಮೂರನೇ ಡೋಸ್‌ ನೀಡಿದರೆ ಅದರ ಪರಿಣಾಮ ಹೇಗಿರಲಿದೆ ಎಂಬುದರ ಅಧ್ಯಯನಕ್ಕೆ ಅಮೆರಿಕ ಮೂಲದ ಫೈಝರ್‌ ಕಂಪನಿ ಮುಂದಾಗಿದೆ.

ಕಳೆದ ವರ್ಷ ಲಸಿ​ಕೆಯ ಪರೀ​ಕ್ಷೆ​ಯಲ್ಲಿ ಭಾಗಿ​ಯಾ​ಗಿದ್ದ ಸ್ವಯಂಸೇ​ವ​ಕರ ಪೈಕಿ 144 ಸ್ವಯಂ ಸೇವ​ಕ​ರಿಗೆ ಫೈಝರ್‌ ಲಸಿ​ಕೆಯ 3ನೇ ಡೋಸ್‌ ಅನ್ನು ನೀಡ​ಲಾ​ಗು​ತ್ತದೆ. ಆ ಮೂಲಕ ಅವರ ಆರೋ​ಗ್ಯದ ಮೇಲೆ ಲಸಿಕೆ ಏನೆಲ್ಲಾ ಪರಿ​ಣಾಮ ಬೀರ​ಲಿದೆ ಎಂಬು​ದರ ಬಗ್ಗೆ ಅಧ್ಯ​ಯನ ನಡೆ​ಸ​ಲಾ​ಗು​ತ್ತದೆ ಎಂದು ಅಮೆ​ರಿ​ಕದ ಫೈಝರ್‌ ಮತ್ತು ಜರ್ಮ​ನಿಯ ಬಯೋ​ಎ​ನ್‌​ಟೆಕ್‌ ತಿಳಿ​ಸಿದೆ.

ವಿಶ್ವದಲ್ಲಿ ಕೊರೋನಾ ವಿರುದ್ಧ ಬಳಸಲು ಅನುಮತಿ ಪಡೆದ ಮೊದಲ ಲಸಿಕೆ ಎಂಬ ಹಿರಿಮೆ ಫೈಝರ್‌ ಕಂಪನಿಯದ್ದಾಗಿದೆ.