Asianet Suvarna News Asianet Suvarna News

ಲಸಿಕೆ ಪಡೆದ 2-3 ತಿಂಗಳಲ್ಲಿ ಪ್ರತಿಕಾಯಗಳ ಪ್ರಮಾಣ ಇಳಿಕೆ!

* 6 ವಾರದ ನಂತರ ಪ್ರತಿಕಾಯ ಇಳಿಕೆ ಆರಂಭ

* 10 ವಾರದ ಅವಧಿಯಲ್ಲಿ ಶೇ.50ರಷ್ಟು ಇಳಿಕೆ: ಅಧ್ಯಯನ

* ಲಸಿಕೆ ಪಡೆದ 2-3 ತಿಂಗಳಲ್ಲಿ ಪ್ರತಿಕಾಯಗಳ ಪ್ರಮಾಣ ಇಳಿಕೆ

* ಕೋವಿಶೀಲ್ಡ್‌ಗಿಂತ ಫೈಝರ್‌ನಿಂದ ಹೆಚ್ಚು ಅವಧಿಗೆ ಸುರಕ್ಷತೆ

Pfizer AstraZeneca Vaccine Antibody Levels May Decline In 2 3 Months Lancet Study pod
Author
Bangalore, First Published Jul 28, 2021, 8:29 AM IST

ಲಂಡನ್‌(ಜು.28): ಆಸ್ಟ್ರಾಜೆನೆಕಾ ಮತ್ತು ಫೈಝರ್‌ನ ಎರಡೂ ಡೋಸ್‌ ಪಡೆದ 6 ವಾರಗಳ ಬಳಿಕ ದೇಹದಲ್ಲಿ ಒಟ್ಟಾರೆ ಪ್ರತಿಕಾಯಗಳ ಪ್ರಮಾಣದಲ್ಲಿ ಇಳಿಕೆಯಾಗಲು ಆರಂಭಿಸಿ, 10 ವಾರಗಳ ಅವಧಿಯಲ್ಲಿ ಒಟ್ಟಾರೆ ಪ್ರಮಾಣದಲ್ಲಿ ಶೇ.50ರಷ್ಟುಕುಸಿತ ಕಾಣುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ.

ಸೋಂಕಿನಿಂದ ರಕ್ಷಣೆ ನೀಡುವ ಪ್ರತಿಕಾಯಗಳು ಈ ವೇಗದಲ್ಲಿ ಇಳಿಕೆಯಾದರೆ, ಸೋಂಕಿನಿಂದ ರಕ್ಷಣೆ ನೀಡುವ ಪ್ರಮಾಣ ಕೂಡಾ ಇಳಿಕೆಯಾಗುವ ಆತಂಕ ವ್ಯಕ್ತವಾಗಿದೆ ಎಂದು ಯುನಿವರ್ಸಿಟಿ ಕಾಲೇಜು ಆಫ್‌ ಲಂಡನ್‌ನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಈ ಕುರಿತ ವರದಿ ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ವರದಿಯಲ್ಲೇನಿದೆ?:

- 18 ವರ್ಷ ಮೇಲ್ಪಟ್ಟವಯೋಮಾನದ ಪುರುಷರು, ಮಹಿಳೆಯರು, ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 600 ಜನರ ಮೇಲೆ ನಡೆಸಿದ ಸಂಶೋಧನೆ ಇದು.

- ಆಸ್ಟ್ರಾಜೆನೆÜಕಾ ಮತ್ತು ಫೈಝರ್‌ ಲಸಿಕೆ ಪಡೆದ ಆರಂಭದಲ್ಲಿ, ಲಸಿಕೆ ಪಡೆದವರ ದೇಹದಲ್ಲಿ ಪ್ರತಿಕಾಯಗಳ ಪ್ರಮಾಣ ಅತ್ಯಂತ ಹೆಚ್ಚೇ ಕಂಡುಬಂದಿದೆ. ಈ ಅಂಶವೇ ಸೋಂಕಿನ ವಿರುದ್ಧ ಲಸಿಕೆಗಳು ಅತ್ಯಂತ ಪರಿಣಾಮ ಎಂದು ಸಾಬೀತಾಗಲು ಕಾರಣವಾಗಿದೆ.

- ಆದರೆ 2-3 ತಿಂಗಳಲ್ಲಿ ಪ್ರತಿಕಾಯಗಳ ಪ್ರಮಾಣ ಇಳಿಕೆಯಾಗಿರುವುದು ಕಂಡುಬಂದಿದೆ.

- ಫೈಝರ್‌ ಲಸಿಕೆ ಪಡೆದವರಲ್ಲಿ 21-41 ದಿನಗಳ ಅವಧಿಯಲ್ಲಿ ಸರಾಸರಿ ಪ್ರತಿ ಮಿ.ಲೀಗೆ 7506 ಯುನಿಟ್‌ ಪ್ರತಿಕಾಯ ಕಂಡುಬಂದಿದ್ದರೆ, 70 ಮತ್ತು ಅದಕ್ಕಿಂತ ಹೆಚ್ಚಿನ ದಿನಗಳಲ್ಲಿ ಪ್ರಮಾಣವು 3320ಕ್ಕೆ ಕುಸಿತವಾಗಿದ್ದು ಕಂಡುಬಂದಿದೆ.

- ಆಸ್ಟ್ರಾಜೆನೆಕಾ ಲಸಿಕೆ ಪಡೆದವರಲ್ಲಿ 0-20 ದಿನಗಳಲ್ಲಿ ಸರಾಸರಿ ಪ್ರತಿ ಮಿ.ಲೀ.ಗೆ 1201 ಯುನಿಟ್‌ ಪ್ರತಿಕಾಯ ಕಂಡುಬಂದಿದ್ದರೆ, 70 ಮತ್ತು ಅದಕ್ಕಿಂತ ಹೆಚ್ಚಿನ ದಿನಗಳಲ್ಲಿ 190 ಯುನಿಟ್‌ ಮಾತ್ರ ಕಂಡುಬಂದಿದೆ. ಅಂದರೆ 5 ಪಟ್ಟು ಕುಸಿತ ದಾಖಲಾಗಿದೆ.

- ಹೀಗಾಗಿ 70 ವರ್ಷ ಮೇಲ್ಪಟ್ಟವರು, ಆರೈಕೆ ಕೇಂದ್ರಗಳಲ್ಲಿ ಇರುವವರಿಗೆ ಆದ್ಯತೆ ಮೇಲೆ ಬೂಸ್ಟರ್‌ ನೀಡಬೇಕಾದ ಅಗತ್ಯವಿದೆ.

- ಆದರೂ, ಒಬ್ಬೊಬ್ಬರಲ್ಲಿ ರೋಗನಿರೋಧಕ ಶಕ್ತಿ ಒಂದೊಂದು ರೀತಿಯಲ್ಲಿ ಇರುವ ಕಾರಣ, ಪ್ರತಿಕಾಯಗಳ ಶಕ್ತಿ ಕಡಿಮೆ ಇದ್ದರೂ, ಕೆಲವರಲ್ಲಿ ಇರುವ ಪ್ರತಿಕಾಯಗಳ ಶಕ್ತಿ ಹೆಚ್ಚಿರಬಹುದು ಮತ್ತು ಅವು ಸುದೀರ್ಘ ಅವಧಿಗೆ ದೇಹಕ್ಕೆ ಸೋಂಕಿನಿಂದ ರಕ್ಷಣೆ ನೀಡಬಹುದು.

Follow Us:
Download App:
  • android
  • ios