ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

* ಮಹಾ​ಮಾರಿ ಕೋವಿ​ಡ್‌​ನಿಂದ ಬಚಾವ್‌ ಮಾಡಲು 12-15 ವಯೋ​ಮಾ​ನದ ಮಕ್ಕ​ಳಿಗೂ ಅಮೆ​ರಿ​ಕದ ಫೈಝರ್‌ 

* ಫೈಝರ್‌ ಲಸಿಕೆ ನೀಡಲು ಜಪಾನ್‌ ಸರ್ಕಾರ ಅನು​ಮೋ​ದನೆ 

* 2,260 ಮಕ್ಕಳ ಮೇಲೆ ಫೈಝರ್‌ ಲಸಿಕೆ ಪ್ರಯೋಗ

Pfizer approves COVID 19 shots for 12 to 15 year-olds in Japan pod

ಟೋಕಿ​ಯೋ(ಜೂ.02): ಕೋವಿ​ಡ್‌​ನಿಂದ ಬಚಾವ್‌ ಮಾಡಲು 12-15 ವಯೋ​ಮಾ​ನದ ಮಕ್ಕ​ಳಿಗೂ ಅಮೆ​ರಿ​ಕದ ಫೈಝರ್‌ ಲಸಿಕೆ ನೀಡಲು ಜಪಾನ್‌ ಸರ್ಕಾರ ಅನು​ಮೋ​ದನೆ ನೀಡಿದೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

2,260 ಮಕ್ಕಳ ಮೇಲೆ ಫೈಝರ್‌ ಲಸಿಕೆ ಪ್ರಯೋಗಿಸಲಾಗಿತ್ತು. 18 ಮಕ್ಕಳ ಹೊರತುಪಡಿಸಿ ಇವರಲ್ಲಿ ಯಾರ ಮೇಲೂ ಅಡ್ಡಪರಿಣಾಮ ಕಂಡುಬಂದಿರಲಿಲ್ಲ. ಹೀಗಾಗಿ ಮಕ್ಕಳಿಗೆ ತನ್ನ ಲಸಿಕೆ ಸುರಕ್ಷಿತ ಎಂದು ಫೈಝರ್‌ ಹೇಳಿತ್ತು. ಈಗಾಗಲೇ ಐರೋಪ್ಯ ಒಕ್ಕೂಟ ಹಾಗೂ ಅಮೆರಿಕದಲ್ಲಿ ಈ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ಲಭಿಸಿದೆ. ಇದರ ಬೆನ್ನಲ್ಲೇ ಜಪಾನ್‌ ಕೂಡ ಅನುಮೋದಿಸಿದೆ.

ಜಪಾ​ನ್‌​ನಲ್ಲಿ ಸದ್ಯ ವೈದ್ಯ​ಕೀಯ ಸಿಬ್ಬಂದಿ, ಹಿರಿಯ ನಾಗ​ರಿ​ಕರು ಸೇರಿ ಇನ್ನಿ​ತರ ವರ್ಗ​ಗ​ಳಿಗೆ ಲಸಿಕೆ ಅಭಿ​ಯಾನ ನಡೆ​ಯು​ತ್ತಿದೆ. ಜೊತೆಗೆ ಜಪಾ​ನ್‌ನ ಒಟ್ಟಾರೆ ಜನ​ಸಂಖ್ಯೆ ಪೈಕಿ ಕೇವಲ ಶೇ.6ರಷ್ಟುಮಂದಿ ಮಾತ್ರವೇ ಎರಡೂ ಡೋಸ್‌ ಲಸಿಕೆ ಪಡೆ​ದಿ​ದ್ದಾರೆ.

ಉದ್ದಿಮೆಗಳಿಗೆ ಆಕ್ಸಿಜನ್‌ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ!

ಏತ​ನ್ಮಧ್ಯೆ, ಜುಲೈ​ನಲ್ಲಿ ಆರಂಭ​ವಾ​ಗ​ಲಿ​ರುವ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾ​ಕೂ​ಟದ ಅವ​ಧಿ ಒಳ​ಗಾಗಿ ಹಿರಿಯ ನಾಗ​ರಿ​ಕ​ರೆ​ಲ್ಲ​ರಿಗೂ ಲಸಿಕೆ ನೀಡ​ಲಾ​ಗು​ತ್ತದೆ ಎಂದು ಜಪಾನ್‌ ಪ್ರಧಾನಿ ಯೊಶಿ​ಹಿದೆ ಸುಗಾ ಹೇಳಿ​ದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios