ಅಮೆರಿಕಾಗೆ ತೆರಳಬೇಕಾದ ಶ್ವಾನವನ್ನು ಸೌದಿಗೆ ಕಳಿಸಿದ ಬ್ರಿಟಿಷ್ ಏರ್‌ವೇಸ್
ವಿಮಾನದಲ್ಲಿ ಶ್ವಾನವನ್ನು ಹೊತ್ತು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೊರಟ್ಟಿದ್ದ ಕುಟುಂಬವೊಂದಕ್ಕೆ ಶಾಕ್ ಆಗಿದೆ. ಇದಕ್ಕೆ ಕಾರಣವಾಗಿದ್ದು, ಬ್ರಿಟಿಷ್ ಏರ್‌ವೇಸ್‌ನ ಎಡವಟ್ಟು.
ಲಂಡನ್ : ಭಾರತದಲ್ಲಿ ಏರ್ ಇಂಡಿಯಾ ಹೊರತುಪಡಿಸಿ ಬೇರೆ ಯಾವುದೇ ವಿಮಾನದಲ್ಲಿ ಸಾಕುಪ್ರಾಣಿಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ, ಅದರಲ್ಲೂ ಕೂಡ ಶ್ವಾನ ಅಥವಾ ಸಾಕು ಪ್ರಾಣಿಗಳನ್ನು ಸಾಗಿಸಲು ಹಲವು ನಿಯಮಗಳಿವೆ. ಶ್ವಾನವಿರುವ ಲಗೇಜ್ ಸೇರಿದಂತೆ ಒಟ್ಟು ಐದು ಕೆಜಿಇಂತ ಹೆಚ್ಚು ತೂಕವಿರಬಾರದು ಎಂಬೆಲ್ಲಾ ನಿಯಮಗಳಿವೆ. ಇನ್ನು ಇತರ ಏರ್ ಲೈನ್ಸ್‌ಗಳಾದ ಇಂಡಿಗೋ, ಏರ್ ಏಸಿಯಾ, ಸ್ಪೈಸ್ ಜೆಟ್, ವಿಸ್ತಾರ ಮುಂತಾದವುಗಳಲ್ಲಿ ಇಷ್ಟು ಕೂಡ ಅವಕಾಶವಿಲ್ಲ. ಆದರೆ ವಿದೇಶಗಳಲ್ಲಿ ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ ಹಾಗಿಲ್ಲ. ಅಲ್ಲಿ ಬಹುತೇಕ ಎಲ್ಲಾ ವಿಮಾನಗಳಲ್ಲಿಯೂ ಶ್ವಾನಗಳನ್ನು ಸಾಗಿಸಲು ಅವಕಾಶವಿದೆ. ಹೀಗೆ ವಿಮಾನದಲ್ಲಿ ಶ್ವಾನವನ್ನು ಹೊತ್ತು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೊರಟ್ಟಿದ್ದ ಕುಟುಂಬವೊಂದಕ್ಕೆ ಶಾಕ್ ಆಗಿದೆ. ಇದಕ್ಕೆ ಕಾರಣವಾಗಿದ್ದು, ಬ್ರಿಟಿಷ್ ಏರ್‌ವೇಸ್‌ನ ಎಡವಟ್ಟು.
ಶ್ವಾನಗಳಿಗೆ ಇತ್ತೀಚೆಗೆ ಮನುಷ್ಯರಿಗಿಂತಲೂ ಹೆಚ್ಚಿನ ಮರ್ಯಾದೆ ನೀಡಲಾಗುತ್ತಿದೆ. ಅನೇಕರು ತಮ್ಮ ಮನೆ ಮಕ್ಕಳಂತೆ ಶ್ವಾನಗಳನ್ನು ನೋಡಿಕೊಳ್ಳುತ್ತಾರೆ. ಅವುಗಳಿಗೆ ಊಟ ಮಾಡಿಸುವುದು ಶ್ವಾನ ಮಾಡಿಸುವುದರಿಂದ ಹಿಡಿದು ಅದನ್ನು ತಾವು ಹೋಗುವಲ್ಲೆಲ್ಲಾ ಕರೆದುಕೊಂಡು ಮನೆ ಮಗನಂತೆ ನೋಡಿಕೊಳ್ಳುತ್ತಾರೆ. ಹೀಗೆಯೇ ಲಂಡನ್‌ನಿಂದ ಅಮೆರಿಕಾದ ಟೆನಿಸ್ಸಿ (Tennessee) ರಾಜ್ಯದ ನಶ್ವಿಲ್ಲೆ ( Nashville) ಯಲ್ಲಿರುವ ತಮ್ಮ ನಿವಾಸಕ್ಕೆ ಕುಟುಂಬವೊಂದು ಶಿಫ್ಟ್ ಆಗುತ್ತಿದ್ದು, ಜೊತೆಯಲ್ಲಿ ತಮ್ಮ ಮುದ್ದಿನ ಶ್ವಾನವನ್ನು ಕರೆದುಕೊಂಡು ಬ್ರಿಟಿಷ್ ಏರ್‌ವೇಸ್‌ನಲ್ಲಿ ಹೊರಟ್ಟಿದ್ದರು. ಆದರೆ ಬ್ರಿಟಿಷ್ ಏರ್‌ವೇಸ್‌ನ ಎಡವಟ್ಟಿನಿಂದಾಗಿ ಈ ಶ್ವಾನ ಅಮೆರಿಕಾಗೆ ತಲುಪುವ ಬದಲು ಸೌದಿ ಅರೇಬಿಯಾವನ್ನು ತಲುಪಿದೆ.
ಏರ್ ಇಂಡಿಯಾ ವಿಮಾನದಲ್ಲಿ ಶ್ವಾನಕ್ಕೆ ನಿರಾಕರಣೆ: ಬೆಂಗಳೂರು ಕುಟುಂಬದ ವಿಡಿಯೋ ವೈರಲ್
ಸಾಮಾನ್ಯವಾಗಿ ಶ್ವಾನಗಳನ್ನು ಮನುಷ್ಯರ ಜೊತೆ ಜೊತೆಯೇ ಸಾಗಿಸುವುದಿಲ್ಲ, ಅವುಗಳನ್ನು ಪ್ರತ್ಯೇಕವಾದ ವಿಮಾನದ ಕ್ಯಾಬೀನ್‌ನಲ್ಲಿ ಇಡಲಾಗುತ್ತದೆ. ಹೀಗಾಗಿ ಇಲ್ಲಿ ಎಡವಟ್ಟಾಗಿದೆ. ತಮ್ಮ ಪ್ರೀತಿಯ ಶ್ವಾನ ಬ್ಲುಬೆಲ್(Bluebell)ನನ್ನು ಕರ್ಗೋ(ಸರಕುಯ ಸಾಗಣೆ ವಿಮಾನ)ದಲ್ಲಿ ಬಿಟ್ಟು ಇವರು ಲಂಡನ್‌ನ (London) ಹೀಥ್ರೂ ವಿಮಾನ (Heathrow Airport.) ನಿಲ್ದಾಣದಿಂದ ಬ್ರಿಟೀಷ್ ಏರ್‌ವೇಸ್ ವಿಮಾನವೇರಿದ್ದಾರೆ. ಆದರೆ ಈ ಕುಟುಂಬ ಅಮೆರಿಕಾದ ಟೆನ್ನಿಸ್ಸೆ (Tennessee) ತಲುಪಿದಾಗ ಅಲ್ಲಿನ ಏರ್‌ಪೋರ್ಟ್ ಸಿಬ್ಬಂದಿ ಈ ಕುಟುಂಬಕ್ಕೆ ಬೇರೆಯೇ ಶ್ವಾನವನ್ನು ನೀಡಿದ್ದಾರೆ.
5 ವರ್ಷದ ಶ್ವಾನ ಇದಾಗಿದ್ದು, ಈ ಬಗ್ಗೆ ಮಾತನಾಡಿದ ಶ್ವಾನದ ಮಾಲಕಿ ಮಡಿಸ್ನ್ ಮಿಲ್ಲೆರ್(Madison Miller) ಈ ಬಗ್ಗೆ ಮಾತನಾಡಿದ್ದು, ಈ ಶ್ವಾನ ನಶ್ವಿಲ್ಲೆಯಲ್ಲಿ ಇಲ್ಲ. ಅವರ ಪ್ರಕಾರ ಅದು ಸೌದಿ ಅರೇಬಿಯಾಗೆ ತೆರಳಿದೆ. ಈ ಬಗ್ಗೆ ವಿಚಾರಿಸುತ್ತಿದ್ದಂತೆ, ಬ್ರಿಟಿಷ್ ಏರ್‌ಲೈನ್‌ನ ಸಿಬ್ಬಂದಿ, ಆಕೆಗೆ ಫೋಟೋವೊಂದನ್ನು ಕಳುಹಿಸಿದ್ದು, ಅದರಲ್ಲಿ ಕ್ರೇಟ್ ಒಂದರಲ್ಲಿ ಆಕೆಯ ಶ್ವಾನವನ್ನು ಲಾಕ್ ಮಾಡಿ ಇಡಲಾಗಿದೆ. ಅಲ್ಲದೇ ಅದು ಮಧ್ಯಪ್ರಾಚ್ಯ ದೇಶದಲ್ಲಿ ಇದೇ ಎಂಬುದು ಖಚಿತವಾಗಿದೆ ಎಂದು ಶ್ವಾನದ ಮಾಲಕಿ ನ್ಯೂಯಾರ್ಕ್ ಫೋಸ್ಟ್‌ಗೆ ತಿಳಿಸಿದ್ದಾರೆ.
ಮುದ್ದಿನ ಶ್ವಾನಕ್ಕೆ ಸೀಮಂತ ಮಾಡಿದ ಕುಟುಂಬ
ಇತ್ತ ಶ್ವಾನ ಎಲ್ಲಿ ಹೋಯಿತು ಎಂಬ ಸುಳಿವು ಇಲ್ಲದೇ ಈ ಕುಟುಂಬ ಸುಮಾರು ಮೂರು ದಿನಗಳ ಕಾಲ ವಿಶ್ರಾಂತಿ ಇಲ್ಲದೇ ಹುಡುಕಾಟ ನಡೆಸಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಕೊನೆಯದಾಗಿ ಅವರಿಗೆ ಶ್ವಾನ ಸಿಕ್ಕಾಗ ಅದು ಮೊದಲಿನಂತೆ ಇರಲಿಲ್ಲ. ಶ್ವಾನ ಸಂಪೂರ್ಣವಾಗಿ ಬದಲಾಗಿತ್ತು. ನಾನು ಶ್ವಾನಗಳು ಬಹಳ ಕಾಲದ ನಂತರ ತಮ್ಮ ಬಳಿ ಬಂದಾಗ ಅವು ಬಹಳ ಭಾವುಕವಾಗಿರುವಂತಹ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ನೋಡಿದ್ದೆ. ಆದರೆ ಇಲ್ಲಿ ಎಲ್ಲವೂ ತದ್ವಿರುದ್ಧವಾಗಿತ್ತು. ಅದು ಬಹಳ ಹೆದರಿತ್ತು. ಅಲ್ಲದೇ ಶ್ವಾನವೂ ಒತ್ತಡದ ಜೊತೆ ಹೆದರಿ ಹೋಗಿತ್ತು ಎಂದು ಶ್ವಾನದ ಮಾಲಕಿ ಹೇಳಿಕೊಂಡಿದ್ದಾರೆ. ಇತ್ತಿಚೆಗೆ ಶ್ವಾನಗಳಿಗೆ ಇರುವ ಬೆಲೆ ಮನುಷ್ಯರಿಗೆ ಇಲ್ಲ. ಅದರಲ್ಲೂ ಇತ್ತೀಚೆಗೆ ಮೂವರು ವ್ಯಕ್ತಿಗಳು ದುಬಾರಿ ಶ್ವಾನಕ್ಕಾಗಿ ಶ್ವಾನದ ಮಾಲೀಕನನ್ನೇ ಕಿಡ್ನಾಪ್ ಮಾಡಿದಂತಹ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿತ್ತು.