Asianet Suvarna News Asianet Suvarna News

ಶೀತ-ಜ್ವರ ಬಂದು ಕಮ್ಮಿ ಆದವರಿಗೆ ಕೊರೋನಾ ಸೋಂಕಿಂದ ರಕ್ಷಣೆ: ಅಚ್ಚರಿಯ ವರದಿ!

ಹಿಂದೆ ಶೀತ-ಜ್ವರ ಬಂದು ಕಮ್ಮಿ ಆದವರಿಗೆ ಕೊರೋನಾ ಸೋಂಕಿಂದ ರಕ್ಷಣೆ| ಅಮೆರಿಕದ ರೊಚೆಸ್ಟರ್‌ ಮೆಡಿಕಲ್‌ ಸೆಂಟರ್‌ನ ಸಂಶೋಧಕರು ನಡೆಸಿದ ಅಧ್ಯಯನ ವರದಿ 

People who recoved From Fever and cold will get prevention from covid 19 pod
Author
Bangalore, First Published Oct 1, 2020, 8:52 AM IST
  • Facebook
  • Twitter
  • Whatsapp

ವಾಷಿಂಗ್ಟನ್(ಅ.01)‌: ಸಾಮಾನ್ಯವಾಗಿ ಕಂಡುಬರುವ ಶೀತ- ಜ್ವರದಿಂದ ಈ ಹಿಂದೆ ಚೇತರಿಸಿಕೊಂಡವರಲ್ಲಿ ಕೊರೋನಾ ವೈರಸ್‌ನಿಂದ ಕೆಲ ಮಟ್ಟಿನ ರಕ್ಷಣೆಯನ್ನು ಪಡೆದುಕೊಂಡಿರಬಹುದಾದ ಸಾಧ್ಯತೆಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ಅಮೆರಿಕದ ರೊಚೆಸ್ಟರ್‌ ಮೆಡಿಕಲ್‌ ಸೆಂಟರ್‌ನ ಸಂಶೋಧಕರು ನಡೆಸಿದ ಅಧ್ಯಯನ ವರದಿ ಎಂ-ಬಯೋ ಎಂಬ ಜರ್ನಲ್‌ನಲ್ಲಿ ಈ ವಿಚಾರ ಉಲ್ಲೇಖವಾಗಿದೆ. ಈ ವರದಿ ಪ್ರಕಾರ, ದೇಹದಲ್ಲಿ ದೀರ್ಘಕಾಲ ಉಳಿಯುವ ಪ್ರತಿರಕ್ಷಣಾ ಕೋಶ ಬಿ ಸೆಲ್‌ಗಳು ಕೊರೋನಾ ವೈರಸ್‌ ಅನ್ನು ಪತ್ತೆಹಚ್ಚಿ ಅವುಗಳ ವಿರುದ್ಧ ಪ್ರತಿಕಾಯಗಳನ್ನು ದೀರ್ಘಾವಧಿಯವರೆಗೆ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ.

ಈಗಾಗಲೇ ಸಾಮಾನ್ಯ ವೈರಸ್‌ಗಳಿಗೆ ತುತ್ತಾಗಿರುವವರಲ್ಲಿ ಕೊರೋನಾ ವೈರಸ್‌ ವಿರುದ್ಧ ಹೋರಾಡುವ ಪ್ರತಿರಕ್ಷಣಾ ವ್ಯವಸ್ಥೆ ಕೆಲ ಮಟ್ಟಿಗೆ ವೃದ್ಧಿ ಆಗಿರಬಹುದಾದ ಸಾಧ್ಯತೆ ಇದೆ. ಬಿ ಕೋಶಗಳು ದಶಕಗಳ ಕಾಲ ಉಳಿಯಬಲ್ಲವು. ಅಲ್ಲದೆ ಅವು ಕೊರೋನಾ ವೈರಸ್‌ನಿಂದ ಚೇತರಿಸಿಕೊಂಡವರನ್ನು ಸೋಂಕಿನಿಂದ ರಕ್ಷಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಸಂಶೊಧನೆಗಳನ್ನು ನಡೆಸುವ ಅಗತ್ಯವಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

Follow Us:
Download App:
  • android
  • ios