ವಾಷಿಂಗ್ಟನ್(ಏ.26)‌: ಸೋಂಕು ಹರಡದಂತೆ ತಡೆಯಲು ಸಿಂಪಡಿಸಲಾಗುವ ಸೋಂಕು ನಿವಾರಕಗಳನ್ನು ರೋಗಿಯ ದೇಹಕ್ಕೆ ಚುಚ್ಚಿದರೆ ಅಥವಾ ನೇರಳಾತೀತ ಕಿರಣಗಳನ್ನು ಹಾಯಿಸಿದರೆ ಕೊರೋನಾ ವೈರಸ್‌ ಅನ್ನು ಕೊಲ್ಲಬಹುದು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತು ನಂಬಿ, ನ್ಯೂಯಾರ್ಕ್ನಲ್ಲಿ 30 ಜನರು ಆ ಪ್ರಯೋಗ ಮಾಡಿದ್ದಾರೆ.

ಮನೆ ಸ್ವಚ್ಛ ಮಾಡಲು ಬಳಸುವ ಸೋಂಕುನಾಶಕ ದ್ರಾವಣವನ್ನು ಚುಚ್ಚುಮದ್ದು ರೂಪದಲ್ಲಿ ದೇಹಕ್ಕೆ ತೆಗೆದುಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಕೊರೋನಾ ಪೀಡಿತರಿಗೆ ಸೋಂಕುನಾಶಕ ದ್ರವ ಚುಚ್ಚಿ: ಟ್ರಂಪ್ ಭಯಾನಕ ಐಡಿಯಾ!

ತಮಾಷೆಗೆ ಹೇಳಿದ್ದು:

ಸೋಂಕು ಹರಡದಂತೆ ಸಿಂಪಡಿಸಲಾಗುವ ಸೋಂಕು ನಿವಾರಕಗಳನ್ನು ರೋಗಿಯ ದೇಹಕ್ಕೆ ಚುಚ್ಚಿದರೆ ಅಥವಾ ನೇರಳಾತೀತ ಕಿರಣಗಳನ್ನು ಹಾಯಿಸಿದರೆ ಕೊರೋನಾ ವೈರಸ್‌ ಅನ್ನು ಕೊಲ್ಲಬಹುದು ಎಂದು ಹೇಳಿಕೆ ನೀಡಿ ನಗೆಪಾಟಲಿಗೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಾವು ವ್ಯಂಗ್ಯ ಮಾಡಲು ಈ ರೀತಿಯ ಹೇಳಿಕೆ ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ವರ್ಷಾಂತ್ಯಕ್ಕೆ ಅಮೆರಿಕದಲ್ಲಿ ಇನ್ನೂ ಭೀಕರ ಕೊರೋನಾ ದಾಳಿ: ತಜ್ಞರ ಎಚ್ಚರಿಕೆ!

ತಮ್ಮ ಹೇಳಿಕೆಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್‌, ಸೋಂಕು ನಿವಾರಕಗಳನ್ನು ರೋಗಿಯ ದೇಹಕ್ಕೆ ಚುಚ್ಚಿದರೆ ಏನಾಗಬಹುದೆಂದು ಸುದ್ದಿಗಾರರನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದೆ. ಸೋಂಕು ನಾಶಕಗಳನ್ನು ಕೈಗಳಿಗೆ ಹಚ್ಚಿದರೆ ರೋಗಾಣುಗಳು ಸಾಯುತ್ತವೆ. ಅದೇ ರೀತಿ ದೇಹಕ್ಕೆ ಬಳಸಿದರೆ ಹೇಗೆ ಎಂದು ತಮಾಷೆ ಮಾಡಿದ್ದೆ ಎಂದು ಹೇಳಿದ್ದಾರೆ.