Asianet Suvarna News Asianet Suvarna News

ಸೌದಿ ಅರೇಬಿಯಾದಲ್ಲಿ ಛಡಿಯೇಟು ಶಿಕ್ಷೆ ರದ್ದು!

ಸೌದಿ ಅರೇಬಿಯಾದಲ್ಲಿ ಛಡಿಯೇಟು ಶಿಕ್ಷೆ ರದ್ದು|  ಇನ್ನು ದಂಡ, ಜೈಲು, ಸೇವೆಯಂತಹ ಶಿಕ್ಷೆ

Saudi Arabia Abolishes Flogging As Punishment
Author
Bangalore, First Published Apr 26, 2020, 5:03 PM IST

ರಿಯಾದ್(ಏ.26): ಇಸ್ಲಾಮಿಕ್‌ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ತಪ್ಪಿತಸ್ಥರಿಗೆ ನೀಡಲಾಗುತ್ತಿದ್ದ ಛಡಿಯೇಟು ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್‌ ಶನಿವಾರ ಆದೇಶ ಹೊರಡಿಸಿದೆ.

ಛಡಿಯೇಟು ಶಿಕ್ಷೆ ಎಷ್ಟುಕ್ರೂರವಾಗಿ ಇರುತ್ತಿತ್ತು ಎಂದರೆ, ತಪ್ಪಿತಸ್ಥನನ್ನು ಬಹಿರಂಗವಾಗಿ ನಿಲ್ಲಿಸಿ ಬೆನ್ನ ಮೇಲೆ ಬಾಸುಂಡೆ ಮೂಡುವಂತೆ ಛಡಿಯಿಂದ ನೂರಾರು ಏಟು ಬಾರಿಸಲಾಗುತ್ತಿತ್ತು. ಇದರಿಂದ ಶಿಕ್ಷೆಗೆ ಒಳಗಾಗುತ್ತಿದ್ದ ವ್ಯಕ್ತಿ ತೀವ್ರ ಯಾತನೆ ಅನುಭವಿಸುತ್ತಿದ್ದ. ಅನೈತಿಕ ಸಂಬಂಧ ಹೊಂದಿದವರಿಗೆ, ಧರ್ಮನಿಂದನೆ ಮಾಡಿದವರಿಗೆ ಹಾಗೂ ಹತ್ಯೆಯ ಉದ್ದೇಶಕ್ಕೆ ಶಾಂತಿ ಭಂಗ ಮಾಡಿದವರಿಗೆ ಈ ಶಿಕ್ಷೆ ನೀಡಲಾಗುತ್ತಿತ್ತು. ಮಾನವ ಹಕ್ಕು ಸಂಘಟನೆಗಳು ಈ ಶಿಕ್ಷೆಯನ್ನು ತೀವ್ರವಾಗಿ ವಿರೋಧಿಸಿದ್ದವು.

ದುಬೈ To ಕೊಡಗು: ಕೊರೋನಾ ವೈರಸ್ ಸೋಂಕಿತನ ಸುತ್ತಾಟ ಪತ್ತೆ

ಇದಕ್ಕೆ ಮಣಿದಿರುವ ಸುಪ್ರೀಂ ಕೋರ್ಟ್‌, ‘ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಸೌದಿಯನ್ನು ತರುವ ಉದ್ದೇಶದಿಂದ ಛಡಿಯೇಟು ಶಿಕ್ಷೆ ತೆಗೆದು ಹಾಕಲಾಗಿದೆ. ಅಲ್ಲದೆ, ಸೌದಿ ದೊರೆ ಕೂಡ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದಿದೆ.

ಛಡಿಯೇಟು ಶಿಕ್ಷೆ ಇನ್ನು ಮುಂದೆ ಇಲ್ಲದ ಕಾರಣ ನ್ಯಾಯಾಧೀಶರು ದಂಡ, ಜೈಲು ಶಿಕ್ಷೆ, ಸಮುದಾಯ ಸೇವೆಯಂಥ ಸಜೆ ನೀಡಲಿದ್ದಾರೆ ಎಂದು ಕೋರ್ಟ್‌ ಹೇಳಿದೆ.

ಸೌದಿಯಿಂದ ಬಂದ 40 ಮಂದಿ: ವಿಜಯಪುರದಿಂದ 10 ಕಿ.ಮೀ. ದೂರದಲ್ಲೇ ಆರೋಗ್ಯ ತಪಾಸಣೆ

ಸೌದಿಯ ಬ್ಲಾಗರ್‌ ರೈಫ್‌ ಬದಾವಿ ಅವರು ಇಸ್ಲಾಂಗೆ ಅವಮಾನ ಮಾಡಿದರು ಎಂದು 2014ರಲ್ಲಿ 10 ವರ್ಷ ಜೈಲು ಶಿಕ್ಷೆ ಹಾಗೂ 1000 ಛಡಿಯೇಟಿನ ಶಿಕ್ಷೆಗೆ ಗುರಿಯಾಗಿದ್ದರು. ಇದು ಭಾರೀ ಸುದ್ದಿ ಮಾಡಿತ್ತು.

Follow Us:
Download App:
  • android
  • ios