ಬಸ್ ಕಿಟಕಿ ಹೊರಗೆ ಹಾಕಿದ 'ಕೈ' ಎರಡು ತುಂಡಾಯ್ತು; ಕ್ಯಾಮೆರಾದಲ್ಲಿ ವಿಡಿಯೋ ಸೆರೆ

ಕೈ ತುಂಡಾದ ಘಟನೆಯ ದೃಶ್ಯಗಳು ಬಸ್‌ನಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ವೈರಲ್ ಆಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

passenger putting hand outside window another-bus-hit elbow mrq

ಬಸ್ ಪ್ರಯಾಣದ ವೇಳೆ ಪ್ರಯಾಣಿಕರು ಕೆಲವು ನಿಯಮಗಳನ್ನು ಪಾಲನೆ ಮಾಡೋದನ್ನು ಮರೆಯುತ್ತಾರೆ. ಬಸ್ ಪ್ರಯಾಣದ ವೇಳೆ ಕಿಟಕಿಯ ಹೊರಗೆ ಕೈ, ತಲೆ ಹಾಕಬಾರದು ಎಂಬ ಸೂಚನೆಯ ಫಲಕಗಳನ್ನು ಗಮನಿಸಿದರೂ ನಿಯಮಗಳನ್ನು ಪಾಲನೆ ಮಾಡಲ್ಲ. ನಿಯಮ ಪಾಲನೆ ಮಾಡದೇ ಬೇಜಾವಾಬ್ದಾರಿ ತೋರಿದ ಪ್ರಯಾಣಿಕನೋರ್ವ ತನ್ನ  ಕೈಯನ್ನು ಕಳೆದುಕೊಂಡಿದ್ದಾರೆ. ಕೈ ತುಂಡಾದ ಘಟನೆಯ ದೃಶ್ಯಗಳು ಬಸ್‌ನಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ವೈರಲ್ ಆಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಯಾಣದ ಸಂದರ್ಭದಲ್ಲಿ ಅಪ್ಪಿತಪ್ಪಿಯನ್ನು ಹೊರಗೆ ಹಾಕಬೇಡಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. 

ವೈರಲ್ ವಿಡಿಯೋದಲ್ಲಿ ಏನಿದೆ? 

ಪ್ರಯಾಣಿಕನೋರ್ವ ಬಸ್‌ ಕಿಟಕಿ ಬದಿಯ ಆಸನದಲ್ಲಿ ಕುಳಿತಿರೋದನ್ನು ಕಾಣಬಹುದು. ವ್ಯಕ್ತಿ ತನ್ನ ಎಡಗೈಯನ್ನು ಕಿಟಕಿಯಾಚೆ ಹಾಕಿ ಹೊರಗೆ ನೋಡುತ್ತಿರುತ್ತಾನೆ. ಈ ವೇಳೆ ಮತ್ತೊಂದು ವಾಹನ, ಬಸ್‌ ಬದಿಯಲ್ಲಿಯೇ ಹೋಗಿದೆ. ವಾಹನದ ವೇಗಕ್ಕೆ ಪ್ರಯಾಣಿಕನ ಕೈ ಕಟ್ ಆಗಿದೆ. ಮೊಣಕೈಯವರೆಗೆ ಕೈ ಬೇರ್ಪಟ್ಟಿದೆ ಎಂದು ವರದಿಯಾಗಿದೆ. ಆದ್ರೆ ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ನಿಖರವಾಗಿ ವರದಿಯಾಗಿಲ್ಲ. 

ಉಗುಳಲು ಹೋಗಿ ಬಸ್ ಕಿಟಕಿಯೊಳಗೆ ಗೃಹಲಕ್ಷ್ಮೀ ತಲೆ ಲಾಕ್, ಇದು ನಿನಗೆ ಬೇಕಿತ್ತಾ ಎಂದ ನೆಟ್ಟಿಗರು

@Deadlykales ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇದುವರೆಗೂ ಈ ವಿಡಿಯೋಗೆ 41 ಸಾವಿರಕ್ಕೂ ಹೆಚ್ಚು ವ್ಯೂವ್ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ಬಳಿಕ, ನಾವೆಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಅದರಲ್ಲಿಯೂ ಮಕ್ಕಳನ್ನು ಕಿಟಕಿ ಆಸನದಲ್ಲಿ ಕೂರಿಸಿದಾಗ ಗ್ಲಾಸ್‌ಗಳನ್ನು ಹಾಕಬೇಕು. ಮುಂಜಾಗ್ರತ ಕ್ರಮವಾಗಿ ಪೋಷಕರೇ ಕಿಟಕಿ ಪಕ್ಕ ಕುಳಿತುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. 

ಇನ್ನು ಬಸ್ ಅಥವಾ ಯಾವುದೇ ವಾಹನದಲ್ಲಿ ಪ್ರಯಾಣಿಸುವಾಗ ಕೆಲವರು ಪದೇ ಪದೇ ಉಗಳಲು ತಲೆಯನ್ನು ಹೊರಗೆ ಹಾಕುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ಗುಟ್ಕಾ ಉಗಳಲು ಹೋಗಿದ್ದ ವ್ಯಕ್ತಿಯ ತಲೆ ಕಟ್ ಆಗಿತ್ತು. ಕೆಲವರಿಗೆ ಬಸ್ ಪ್ರಯಾಣದ ವೇಳೆ ವಾಂತಿ ಬರುತ್ತೆ ಅಂತ ಪದೇ ಪದೇ ತಲೆಯನ್ನು ಹೊರಗೆ ಹಾಕುತ್ತಿರುತ್ತಾರೆ. ಇಂತಹವರು ಸಹ ಈ ವಿಡಿಯೋ ನೋಡಿ ಎಚ್ಚೆತ್ತುಕೊಳ್ಳಬೇಕು. ಇತ್ತೀಚೆಗೆ ಮಹಿಳೆ ಪ್ರಯಾಣಿಕರ ಕತ್ತು ಕಿಟಕಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.  

ಗುಟ್ಕಾ ಉಗುಳಲು ಲಾರಿಯಿಂದ ತಲೆ ಹೊರ ಹಾಕಿದವನ ತಲೆಯೇ ಹಾರಿಹೋಯ್ತು

Latest Videos
Follow Us:
Download App:
  • android
  • ios