ಉಗುಳಲು ಹೋಗಿ ಬಸ್ ಕಿಟಕಿಯೊಳಗೆ ಗೃಹಲಕ್ಷ್ಮೀ ತಲೆ ಲಾಕ್, ಇದು ನಿನಗೆ ಬೇಕಿತ್ತಾ ಎಂದ ನೆಟ್ಟಿಗರು

ಬಡಪಾಯಿ ಬೆಕ್ಕು, ನಾಯಿಗಳು ನೀರನ್ನು ಕುಡಿಯಲೋ, ಆಹಾರ ತಿನ್ನಲು ಚಿಕ್ಕದಾದ ಡಬ್ಬಿಯೊಳಗೆ ತಲೆ ತೂರಿಸಿ ಹೊರತೆಗೆಯಲಾಗದೆ ಫಜೀತಿ ಅನುಭವಿಸಿದ ದೃಶ್ಯಗಳನ್ನೂ ಸೊಷಿಯಲ್ ಮೀಡಿಯಾಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಬ್ಬಳು ಗೃಹಲಕ್ಷ್ಮಿ ಉಚಿತ ಬಸ್ ಪ್ರಯಾಣದ ವೇಳೆ ಕಿಟಕಿಯೊಳಗೆ ಉಗುಳಲು ಯತ್ನಿಸಿ ತಲೆ ಲಾಕ್ ಮಾಡಿಕೊಂಡು ಪರದಾಡಿದ್ದಾಳೆ.

Woman head stuck in KSRTC bus window video went viral in social media rav

ಬೆಂಗಳೂರು (ಮೇ.17) ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತನ್ನ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಉದ್ದೇಶದಿಂದ ಜಾರಿಗೆ ತಂದ ಶಕ್ತಿ ಯೋಜನೆಯಿಂದ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಳವಾಗಿದೆ. ಈ ಹಿನ್ನೆಲೆ ದಿನನಿತ್ಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸೀಟು ಹಿಡಿಯಲು, ಟಿಕೆಟ್ ವಿಚಾರವಾಗಿ ಮಹಿಳೆಯರ ಕಿರಿಕ್ ದಿನನಿತ್ಯ ಸಾಮಾನ್ಯವಾಗಿದೆ. ಕೆಲವು ಘಟನೆಗಳು ರಾಜ್ಯದ ಗಮನ ಸೆಳೆದಿವೆ, ಇನ್ನು ಕೆಲವು ಸೋಷಿಯಲ್ ಮಿಡಿಯಾಗಳಲ್ಲಿ ಭಾರೀ ವೈರಲ್ ಆಗಿವೆ. ಅಂತಹದ್ದೊಂದು ಘಟನೆ  ನಡೆದಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಡಪಾಯಿ ಬೆಕ್ಕು, ನಾಯಿಗಳು ನೀರನ್ನು ಕುಡಿಯಲು ಆಹಾರ ತಿನ್ನಲು ಚಿಕ್ಕದಾದ ಡಬ್ಬಿಯೊಳಗೆ ತಲೆ ತೂರಿಸಿ ಹೊರತೆಗೆಯಲಾಗದೆ ಫಜೀತಿ ಅನುಭವಿಸಿದ ದೃಶ್ಯಗಳನ್ನೂ ಸೊಷಿಯಲ್ ಮೀಡಿಯಾಗಳಲ್ಲಿ ನೋಡಿ ನಕ್ಕಿರುತ್ತಿರಿ, ಇಲ್ಲಾ 'ಆಯ್ಯೋ ಪಾಪ' ಎಂದು ಮರುಗಿರುತ್ತೀರಿ ಅಲ್ಲವೇ?ಪ್ರಾಣಿಗಳಿಗೋ ಪಾಪ ಮನುಷ್ಯರಂತೆ ಯೋಚಿಸುವ ಶಕ್ತಿ ಇಲ್ಲ, ಚಿಕ್ಕದು ದೊಡ್ಡದು ಎಂಬ ಅಳತೆ ಮಾಡುವಷ್ಟು ಜ್ಞಾನ ಇರೋದಿಲ್ಲ. ಆದರೆ ಕೆಎಸ್‌ಆರ್ಟಿಸಿ ಬಸ್‌ನಲ್ಲಿ ಅರ್ಧ ಗಾಜು ಮುಚ್ಚಿದ ಚಿಕ್ಕ ಕಿಟಕಿಯೊಳಗೆ ಮಹಿಳೆಯೊಬ್ಬಳು ತಲೆ ತೂರಿಸಿ ಪರದಾಡಿದರೆ ಏನೆನ್ನೋಣ?

ಮೆಟ್ರೋ ರೈಲು ಹತ್ತುವ ರೀಲ್ಸ್ ಹುಚ್ಚಾಟದಲ್ಲಿ ಯುವತಿ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲೇ ಬಾಕಿ!

ಹೌದು ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಪ್ರಯಾಸುತ್ತಿದ್ದ ಗೃಹಲಕ್ಷ್ಮೀಯೊಬ್ಬಳು ಬಸ್ ರಸ್ತೆಯ ಮೇಲೆ ಚಲಿಸುತ್ತಿದ್ದಾಗಲೇ ಕಿಟಕಿಯೊಳಗೆ ತಲೆತೂರಿಸಿ ಉಗುಳಲು ಯತ್ನಿ ತಲೆಯೇ ಲಾಕ್ ಆಗಿ ಅವಾಂತರ ಮಾಡಿಕೊಂಡಿದ್ದಾಳೆ. ಉಗುಳುವ ಬರದಲ್ಲಿ ಕಿಟಕಿಯೊಳಗೆ ತಲೆ ತೂರಿಸಿರುವ ಮಹಿಳೆ ಹಿಂದಕ್ಕೆ ಎಳೆಯಲು ಹರಸಾಹಸ ಪಟ್ಟಿದ್ದಾಳೆ. ಅದೃಷ್ಟವಶಾತ್ ಆಚೀಚೆ ಬಸ್ ಲಾರಿ ಓವರ್ ಟೇಕ್ ಮಾಡುವ ತಾಗಿದ್ರೆ ತಲೆಯೇ ಹೋಗುತ್ತಿತ್ತೇನೋ. ಎಷ್ಟೇ ಪ್ರಯತ್ನಿಸಿದರೂ ಮಹಿಳೆ ತಲೆಯನ್ನ ಕಿಟಕಿಯಿಂದ ಹಿಂದಕ್ಕೆ ತೆಗೆಯಲು ಆಗಿಲ್ಲ. ಈ ವೇಳೆ ಮಹಿಳೆ ಪರದಾಡುತ್ತಿರುವುದನ್ನ ಗಮನಿಸಿದ ಕೆಎಸ್‌ಅರ್‌ಟಿಸಿ ಬಸ್‌ನ ಚಾಲಕ, ಕಾರ್ಯನಿರ್ವಾಹಕ ದಾರಿ ಮಧ್ಯೆ ಬಸ್ ನಿಲ್ಲಿಸಿ ಬಳಿಕ ಜಾಗರೂಕತೆಯಿಂದ ಮಹಿಳೆಯನ್ನ ಕಿಟಕಿಯಿಂದ ಸುರಕ್ಷಿತವಾಗಿ ತೆಗೆದಿದ್ದಾರೆ.

ಶಕ್ತಿ ಯೋಜನೆ ಅವಾಂತರ: ಫ್ರೀ ಬಸ್ ಹತ್ತಿ ನಾಪತ್ತೆಯಾಗಿದ್ದ ನಾಲ್ವರು ಅಪ್ರಾಪ್ತ ಬಾಲಕಿಯರು ತಿಂಥಿಣಿ ಜಾತ್ರೆಯಲ್ಲಿ ಪತ್ತೆ!

ಘಟನೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲ ಬೇಕಿತ್ತಾ ನಿನಗೆ ಎಂದು ತಿವಿದಿದ್ದಾರೆ, ಇನ್ನು ಕೆಲವರು, ಟಿಕೆಟ್ ಇಲ್ಲ ಅಂತಾ ಬಸ್ ನಲ್ಲಿ ಹೋಗಿ ಟಿಕೆಟ್ ತೆಗೆಸಿಕೊಳ್ತಿದ್ದಳಲ್ಲ ಅಂದಿದ್ದಾರೆ. ಎಲ್ಲದರೂ ಮೂಗು ತೂರಿಸೋದು ನೋಡಿದ್ದೀರಿ ಆದರೆ ಚಿಕ್ಕ ಕಿಟಕಿಯಲ್ಲೂ ತಲೆತೂರಿಸೋ ಮಹಿಳೆಯರು ಇದ್ದಾರಲ್ಲಪ್ಪ ಅಂತಾ ನೆಟ್ಟಿಗರ 

Latest Videos
Follow Us:
Download App:
  • android
  • ios