ಗುಟ್ಕಾ ಉಗುಳಲು ಲಾರಿಯಿಂದ ತಲೆ ಹೊರ ಹಾಕಿದವನ ತಲೆಯೇ ಹಾರಿಹೋಯ್ತು
ವಾಹನಗಳಲ್ಲಿ ಪ್ರಯಾಣಿಸುವಾಗ ಉಗಿಯುವುದಕ್ಕೋ ಅಥವಾ ವಾಂತಿ ಮಾಡುವುದಕ್ಕೋ ತಲೆ ಆಚೆ ಹಾಕುವ ಅಭ್ಯಾಸ ಇರುವವರು ಈ ಸ್ಟೋರಿಯನ್ನು ಓದಲೇ ಬೇಕು.
ಭೋಪಾಲ್: ವಾಹನಗಳಲ್ಲಿ ಪ್ರಯಾಣಿಸುವಾಗ ಉಗಿಯುವುದಕ್ಕೋ ಅಥವಾ ವಾಂತಿ ಮಾಡುವುದಕ್ಕೋ ತಲೆ ಆಚೆ ಹಾಕುವ ಅಭ್ಯಾಸ ಇರುವವರು ಈ ಸ್ಟೋರಿಯನ್ನು ಓದಲೇ ಬೇಕು. ಗುಟ್ಕಾ ಉಗಿಯುವುದಕ್ಕಾಗಿ ಲಾರಿಯಿಂದ ತಲೆ ಹೊರ ಹಾಕಿದ ವ್ಯಕ್ತಿಯೊಬ್ಬ ತಲೆಯನ್ನೇ ಕಳೆದುಕೊಂಡಿದ್ದಾನೆ. ಗುಟ್ಕಾ ಜಗಿಯುತ್ತಿದ್ದ ವ್ಯಕ್ತಿಯೊಬ್ಬ ಮಿನಿ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗುಟ್ಕಾ ಉಗಿಯುವುದಕ್ಕೆ ತಲೆ ಹೊರಗೆ ಹಾಕಿದ್ದಾಗ ಮತ್ತೊಂದುವ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ವಾಹನ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ತಲೆಯೇ ಕತ್ತರಿಸಿ ಹೋಗಿದೆ. ಮಧ್ಯಪ್ರದೇಶದ ಖಾರ್ಗೋನೆಯಲ್ಲಿಈ ಆಘಾತಕಾರಿ ಘಟನೆ ಸಂಭವಿಸಿದೆ. ಬರ್ವಾನಿ ಜಿಲ್ಲೆಯ ತಳವಾರ ಡ್ಯಾಮ ನಿವಾಸಿ ಆಕಾಶ್ ಮಕಸಾರೆ(22) ಅಪಘಾತಕ್ಕೀಡಾದ ದುರ್ದೈವಿ. ಜಬಲ್‌ಪುರದಿಂದ ಪಿಕಪ್ ವಾಹನದಲ್ಲಿ ತರಕಾರಿ ತುಂಬಿಸಿ ಖಾರ್ಗೋನೆ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಮಹಿಳೆ ಮೈಮೇಲೆ ಆವರಿಸಿಕೊಂಡು ವಿಮಲ್ ಗುಟ್ಕಾ ಕೇಳಿದ ದೆವ್ವ!
ಭೀಕರ ಅಪಘಾತದಲ್ಲಿ ಚಾಲಕನ ತಲೆ, ಮತ್ತು ಕೈ ದೇಹದಿಂದ ಬೇರ್ಪಟ್ಟಿದೆ. ತಲೆ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದನ್ನು ನೋಡಿದ ಪ್ರಯಾಣಿಕರು ಭಯಗೊಂಡು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ ಸುತಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪಘಾತ ಮಾಡಿರುವ ಚಾಲಕ ತಲೆ ಮರೆಸಿಕೊಂಡಿದ್ದು. ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಗಂಡಂದಿರಿಗೆ ಮನೆಯಲ್ಲೇ ಕುಡಿಯಲು ಪ್ರೋತ್ಸಾಹಿಸಿ: ಸಚಿವರ ವಿಚಿತ್ರ ಸಲಹೆ!
ಭೋಪಾಲ್: ಮದ್ಯವ್ಯಸನಿ ಗಂಡಸರಿಗೆ ಮನೆಯಲ್ಲೇ ಕುಡಿಯಲು ಹೇಳಿ. ಆಗ ಪರಿವಾರದೆದುರು ಕುಡಿಯಲು ಹಿಂಜರಿಯುವ ಅವರು ಕ್ರಮೇಣ ಅಭ್ಯಾಸವನ್ನೇ ಬಿಟ್ಟುಬಿಡುತ್ತಾರೆ ಎಂದು ಮಧ್ಯಪ್ರದೇಶದ ಸಚಿವ ನಾರಾಯಣ್ ಸಿಂಗ್ ಕುಶ್ವಾಹ ಮಹಿಳೆಯರಿಗೆ ಸಲಹೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ವ್ಯಸನಮುಕ್ತಿ ಅಭಿಯಾನದಲ್ಲಿ ಅವರು ಕೊಟ್ಟ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಸಂಗೀತಾ ಶರ್ಮಾ ಪ್ರತಿಕ್ರಿಯಿಸಿದ್ದು, ‘ಕೌಟುಂಬಿಕ ಹಿಂಸೆಗೆ ಕುಡಿತವೇ ಮುಖ್ಯ ಕಾರಣ. ಮದ್ಯವ್ಯಸನಿಗಳಿಂದ ಆದ ಪಾರಿವಾರಿಕ ಹಿಂಸೆಯ 17,000 ಪ್ರಕರಣಗಳು ಮಧ್ಯಪ್ರದೇಶದ ಮಹಿಳಾ ಆಯೋಗದಲ್ಲಿ ದಾಖಲಾಗಿದೆ. ಸಚಿವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಗುಟ್ಕಾ ಹಾಕಿ ಬುಲೆಟ್ ಓಡಿಸೋ ಮಡದಿಗೆ ಡಿವೋರ್ಸ್ ಕೊಟ್ಟ ಪತಿರಾಯ!