ನನ್ನ ಅನುಮತಿ ಇಲ್ಲದೆ ತಂದೆ-ತಾಯಿ ನನ್ನ ಹುಟ್ಟಿಸಿದ್ದೇಕೆ? ಮಹಿಳೆಯ ವಿಡಂಬನೆಗೆ ನೆಟ್ಟಿಗರು ತಬ್ಬಿಬ್ಬು!
ನನ್ನ ಹುಟ್ಟಿಸುವ ಮೊದಲು ನನ್ನನ್ನು ಕೇಳಬೇಕಿತ್ತು? ನನ್ನ ಅನುಮತಿ ಇಲ್ಲದೆ ನನ್ನ ಹುಟ್ಟಿಸಿ ಬೆಳೆಸಿದ್ದೀರಿ. ನನ್ನನ್ನು ಸಂಪರ್ಕಿಸದೆ ನೀವೇ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ತಂದೆ ತಾಯಿ ವಿರುದ್ಧ ಮಗಳು ದೂರಿದ್ದಾಳೆ. ವಿಡಂಬನೆಯ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ.
ನ್ಯೂಜರ್ಸಿ(ಮೇ.12) ಪುಟ್ಟ ಮಕ್ಕಳು ಪೋಷಕರ ಮದುವೆ ಫೋಟೋ ನೋಡಿ ನಾನಿಲ್ಲಿ ಎಂದು ಪ್ರಶ್ನಿಸುವುದು ಸಾಮಾನ್ಯ. ಆದರೆ ದೊಡ್ಡವರಾಗುತ್ತಲೇ ಎಲ್ಲವೂ ಅರಿವಾಗುತ್ತದೆ. ಆದರೆ ಇಲ್ಲೊಬ್ಬಳಿಗೆ ದೊಡ್ಡವಳಾಗಿ ತನಗೆ ಮಕ್ಕಳಿದ್ದರೂ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಮುಂದಿಟ್ಟು ತಂದೆ ತಾಯಿ ವಿರುದ್ಧ ಆರೋಪ ಮಾಡಿದ್ದಾಳೆ.
ನನ್ನ ಅನುಮತಿ ಇಲ್ಲದೆ ನನ್ನನ್ನು ಹುಟ್ಟಿಸಿದ್ದೇಕೆ ಅನ್ನೋದು ಈಕೆಯ ಮೂಲಭೂತ ಪ್ರಶ್ನೆ. ಕನಿಷ್ಠ ನನ್ನನ್ನು ಸಂಪರ್ಕಿಸಿ ಈ ಭೂಮಿಗೆ ಬರಲು ಇಷ್ಟವಿದೆಯಾ ಅನ್ನೋದನ್ನು ಕೇಳಬೇಕಿತ್ತು. ಪೋಷಕರ ಸ್ವಂತ ನಿರ್ಧಾರ ತೆಗೆದುಕೊಂಡು ಹುಟ್ಟಿಸಿದ್ದೀರಿ ಎಂದು ಅಮೆರಿದ ನ್ಯೂ ಜರ್ಸಿಯ ಟಿಕ್‌ಟಾಕ್ ಥಿಯಾಜ್ ಅನ್ನೋ ಮಹಿಳೆ ಪ್ರಶ್ನಿಸಿದ್ದಾಳೆ. ಇದು ಥಿಯಾಜ್‌ಳ ವಿಡಂಬನೆಯ ವಿಡಿಯೋ. ಚಿತ್ರ ವಿಚಿತ್ರ ಪ್ರಶ್ನೆಗಳ ಮೂಲಕ ವಿಡಂಬನೆ ಮಾಡುವ ಥಿಯಾಜ್ ಊಹೆಗೂ ನಿಲುಕ ಪ್ರಶ್ನೆ ಮುಂದಿಟ್ಟು ಭಾರಿ ಲೈಕ್ಸ್ ,ಕಮೆಂಟ್ ಪಡೆದು ಜನಪ್ರಿಯಳಾಗಿದ್ದಾಳೆ.
ಮಿಸ್ ಥಿಯಾಜ್ ಟಿಕ್‌ಟಾಕ್ ಮೂಲಕ ಅಸಂಬದ್ಧ ಪ್ರಶ್ನೆಗಳನ್ನು ಮುಂದಿಟ್ಟು ಭಾರಿ ಜನಪ್ರಿಯಗೊಂಡಿದ್ದಾರೆ. ಈ ಬಾರಿ ಪೋಷಕರನ್ನು ಪ್ರಶ್ನಿಸಿರುವ ವಿಡಿಯೋ ಹರಿಬಿಟ್ಟಿದ್ದಾರೆ. ಈಕೆಯ ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ವಿಡಂಬನೆಯನ್ನು ಸತ್ಯ ಘಟನೆಯಂತೆ ವಿವರಿಸುವ ಈಕೆ ನ್ಯೂಜರ್ಸಿಯಲ್ಲಿ ಟಿಕ್‌ಟಾಕ್ ಸ್ಟಾರ್ ಆಗಿ ಮೆರೆಯುತ್ತಿದ್ದಾಳೆ.
ಧೋನಿ ರೀತಿ ರಾಹುಲ್ ಗಾಂಧಿ ಬೆಸ್ಟ್ ‘ಫಿನಿಶರ್’: ರಾಜನಾಥ ಸಿಂಗ್ ವ್ಯಂಗ್ಯ
ತಂದೆ ತಾಯಿ ಹಾಗೂ ಹುಟ್ಟಿನ ಕುರಿತು ಜೋಕ್ ಮಾಡುತ್ತಾ ಮಾತು ಮುಂದುವರಿಸಿರುವ ಥಿಯಾಜ್, ತಾಯಿ ಗರ್ಭಧರಿಸುವ ಮೊದಲ ಅನುಮತಿ ಪಡೆಯಬೇಕು. ಹುಟ್ಟಿಸಿ ಬೆಳೆಸಿದ್ದೀರಿ. ಆದರೆ ನನ್ನಲ್ಲಿ ಯಾವತ್ತೂ ಅನುಮತಿ ಕೇಳಲೇ ಇಲ್ಲ. ನಾನು ಇಲ್ಲಿಗೆ ಬರುತ್ತೇನೆ, ಬೆಳೆಯುತ್ತೇನೆ, ಕೆಲಸ ಹುಡುಕಿ ನನಗೆ ನಾನೆ ಬೆಂಬಲಾಗಿ ನಿಲ್ಲುತ್ತೇನೆ ಅನ್ನೋ ಅರಿವು ನನಗೆ ಇರಲಿಲ್ಲ ಎಂದಿದ್ದಾಳೆ. ಹೇಗಾದರೂ ಮಾಡಿ ತಾಯಿ ನನ್ನನ್ನು ಸಂಪರ್ಕಿಸಬೇಕಿತ್ತು ಎಂದಿದ್ದಾಳೆ.
isatandstared ಅನ್ನೋ ಇನ್‌ಸ್ಟಾ ಖಾತೆಯಲ್ಲಿ ಈಕೆ ವಿಡಿಯೋಗಳನ್ನು ಹಂಚಿಕೊಂಡಿದ್ದಾಳೆ. ಇದು ತಮಾಷೆ, ವಿಡಂಬನೆಯ ವಿಡಿಯೋಗಳಾಗಿದೆ. ಆದರೆ ಈಕೆಯ ವಿಡಿಯೋ ನೋಡಿ ಹಲವರು ಕಮೆಂಟ್ ಮಾಡಿದ್ದಾರೆ. ಈಕೆಯನ್ನು ಆಸ್ಪತ್ರೆ ಸೇರಿಸಿ ಎಂದು ಸಲಹೆ ನೀಡಿದ್ದಾರೆ. ಕಮೆಂಟ್ ಮಾಡುವ ಮುನ್ನ ಸರಿಯಾಗಿ ಓದಿಕೊಳ್ಳಿ ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ವ್ಯಂಗ್ಯ ಲೇಖನ ಬರೆದಿದ್ದ ಪತ್ರಕರ್ತ ಬಿಲಾಸ್ಪುರ ಜೈಲಿಗೆ!