ಭಾರತದ ಕ್ರಿಕೆಟ್‌ಗೆ ಮಹೇಂದ್ರ ಸಿಂಗ್‌ ಧೋನಿಯಂತೆ ಕಾಂಗ್ರೆಸ್‌ ಪಾಲಿಗೆ ಅದರ ಮುಖಂಡ ರಾಹುಲ್‌ ಗಾಂಧಿ ಬೆಸ್ಟ್‌ ಫಿನಿಶರ್‌ (ಪಕ್ಷವನ್ನು ಸಮಾಧಿ ಮಾಡುವ ವ್ಯಕ್ತಿ) ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಲೇವಡಿ ಮಾಡಿದ್ದಾರೆ.

ಭೋಪಾಲ್‌: ಭಾರತದ ಕ್ರಿಕೆಟ್‌ಗೆ ಮಹೇಂದ್ರ ಸಿಂಗ್‌ ಧೋನಿಯಂತೆ ಕಾಂಗ್ರೆಸ್‌ ಪಾಲಿಗೆ ಅದರ ಮುಖಂಡ ರಾಹುಲ್‌ ಗಾಂಧಿ ಬೆಸ್ಟ್‌ ಫಿನಿಶರ್‌ (ಪಕ್ಷವನ್ನು ಸಮಾಧಿ ಮಾಡುವ ವ್ಯಕ್ತಿ) ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಲೇವಡಿ ಮಾಡಿದ್ದಾರೆ.

ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತದ ಕ್ರಿಕೆಟ್‌ನ ಬೆಸ್ಟ್‌ ಫಿನಿಶರ್‌ ಯಾರು? ಧೋನಿ ಎಂದು ಎಲ್ಲರಿಗೂ ಗೊತ್ತು. ಆದರೆ ಭಾರತದ ರಾಜಕೀಯದಲ್ಲಿ ಅತ್ಯುತ್ತಮ ಫಿನಿಶರ್‌ ಯಾರು ಎಂದು ಯಾರಾದರೂ ನನ್ನನ್ನು ಕೇಳಿದರೆ ನಾನು ರಾಹುಲ್‌ ಗಾಂಧಿ ಎಂದು ಹೇಳುತ್ತೇನೆ, ಏಕೆಂದರೆ ಕಾಂಗ್ರೆಸ್ಸನ್ನು ಈಗ ಎಲ್ಲರೂ ಬಿಟ್ಟು ಹೋಗುತ್ತಿದ್ದು ಕೊನೆಯದಾಗಿ ಉಳಿಯುವುದು ರಾಹುಲ್‌ ಮಾತ್ರ. ಅಲ್ಲಿಗೆ ಪಕ್ಷ ಅವಸಾನ ಆಗಿ ಹೋಗಿರುತ್ತದೆ’ ಎಂದು ವ್ಯಂಗ್ಯವಾಡಿದರು.

ಇಂಡಿಯಾ ಮೈತ್ರಿ VS ಇಂಡಿಯಾ ಮೈತ್ರಿ: ವಯನಾಡ್‌ನಲ್ಲಿ ರಾಹುಲ್‌ ಗಾಂಧಿ ಸ್ಪರ್ಧೆಗೆ ಕೇರಳ ಸಿಎಂ ಕಿಡಿ!

ರಾಹುಲ್‌ ಮ್ಯಾಚ್‌ ಫಿಕ್ಸಿಂಗ್‌ ಹೇಳಿಕೆ ವಿರುದ್ಧ ಕ್ರಮ ಕೋರಿ ಆಯೋಗಕ್ಕೆ ಬಿಜೆಪಿ ದೂರು