ಕ್ರೈಸ್ತರನ್ನು ಹಿಂದಿಕ್ಕಿ ಇಸ್ಲಾಂ ವಿಶ್ವದ ಅತಿದೊಡ್ಡ ಧರ್ಮ; ಜನಸಂಖ್ಯೆ ಏರಿಕೆಗೆ ಕಾರಣ ಏನು?
ಪ್ಯೂ ಸಂಶೋಧನಾ ಕೇಂದ್ರದ ವರದಿಯ ಪ್ರಕಾರ, 2035ರ ವೇಳೆಗೆ ಇಸ್ಲಾಂ ಧರ್ಮವು ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಲಿದೆ. ಹೆಚ್ಚಿನ ಫಲವತ್ತತೆ ದರದಿಂದಾಗಿ ಮುಸ್ಲಿಂ ಮತ್ತು ಕ್ರೈಸ್ತ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ವಿಶ್ವದ ಅತಿದೊಡ್ಡ ಧರ್ಮ
ನ್ಯೂಯಾರ್ಕ್: 2035ರ ವೇಳೆಗೆ ಇಸ್ಲಾಂ (Islam) ಧರ್ಮವು ಕ್ರೈಸ್ತ ಧರ್ಮವನ್ನು (Christianity) ಹಿಂದಿಕ್ಕಿ ವಿಶ್ವದ ಅತಿದೊಡ್ಡ ಧರ್ಮವಾಗಿ (World's largest religion) ಹೊರಹೊಮ್ಮಲಿದೆ ಎಂದು ಪ್ಯೂ ಸಂಶೋಧನಾ ಕೇಂದ್ರವು (Pew Research Center) ಬುಧವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.
ಶೇ.29ರಷ್ಟು ಏರಿಕೆ ನಿರೀಕ್ಷೆ
2020 ಮತ್ತು 2070ರ ನಡುವೆ ವಿಶ್ವದ ಒಟ್ಟು ಜನಸಂಖ್ಯೆಯು ಶೇ.29ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಮುಸ್ಲಿಮರು ಮತ್ತು ಕ್ರೈಸ್ತರು (Islam and Christianity) ಮಾತ್ರ ಜನಸಂಖ್ಯಾ ಬೆಳವಣಿಗೆಗೆ ತಕ್ಕಂತೆ ವೃದ್ಧಿಯಾಗಲಿದ್ದಾರೆ.
ಎಷ್ಟು ಬೆಣವಣಿಗೆ?
ಈ ಅವಧಿಯಲ್ಲಿ ಕ್ರೈಸ್ತರು ಶೇ.30ರಷ್ಟು ಮತ್ತು ಮುಸ್ಲಿಮರು ಶೇ.80ರಷ್ಟು ಬೆಳವಣಿಗೆ ಕಾಣಲಿದ್ದಾರೆ. ಹಿಂದೂಗಳು ಮತ್ತು ಯಹೂದಿಗಳ ಒಟ್ಟು ಸಂಖ್ಯೆ ಹೆಚ್ಚಾಗುತ್ತಿದ್ದರೂ, ಜಾಗತಿಕ ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಅವರ ಪಾಲು ಕಡಿಮೆಯಾಗಲಿದೆ ಎಂದು ಪ್ಯೂ ವಿಶ್ಲೇಷಿಸಿದೆ.
ಫಲವತ್ತತೆ ದರವೇ ಬೆಳವಣಿಗೆಗೆ ಕಾರಣ!
ಮತಾಂತರಕ್ಕಿಂತ ಹೆಚ್ಚಾಗಿ ಫಲವತ್ತತೆ ದರವೇ ಈ ಬೆಳವಣಿಗೆಗೆ ಮುಖ್ಯ ಕಾರಣ. 2020-2025ರ ಅವಧಿಯಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆ ದರ 3.1ರಷ್ಟಿದ್ದರೆ, ಕ್ರೈಸ್ತ ಮಹಿಳೆಯರ ದರ 2.5ರಷ್ಟಿತ್ತು. ಉಳಿದ ಎಲ್ಲಾ ಧರ್ಮಗಳ ಮಹಿಳೆಯರ ಸರಾಸರಿ ಫಲವತ್ತತೆ ದರ 1.6ರಷ್ಟಿದ್ದು, ಇದು ಜನಸಂಖ್ಯೆಯ ಸಮತೋಲನ ಕಾಯ್ದುಕೊಳ್ಳಲು ಅಗತ್ಯವಿರುವ 2.1 ಕ್ಕಿಂತ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ











