Asianet Suvarna News Asianet Suvarna News

ವಧುವಿಗೆ ಕತ್ತೆ ಗಿಫ್ಟ್ ನೀಡಿದ ಮದುಮಗ...

ಪಾಕಿಸ್ತಾನದಲ್ಲೊಬ್ಬ ವರ ವಧುವಿಗೆ ಕತ್ತೆ ಗಿಫ್ಟ್ ನೀಡಿದ್ದಾನೆ. ಹೌದು ವಿಚಿತ್ರವಾದರೂ ಇದು ಸತ್ಯ ವರನೊರ್ವ ತನ್ನ ಪ್ರೀತಿಯ ವಧುವಿಗೆ ಕತ್ತೆ ಗಿಫ್ಟ್ ನೀಡಿದ್ದು, ಇದನ್ನು ನೋಡಿ ವಧುವೂ ಫುಲ್ ಖುಷಿಯಾಗಿದ್ದಾಳೆ.  

Pakistani Groom gift donkey to bride in their wedding watch viral video akb
Author
First Published Dec 12, 2022, 4:58 PM IST

ಸಾಮಾನ್ಯವಾಗಿ ಮದುವೆಯ ಸಮಯದಲ್ಲಿ ವರ ವಧುವಿಗೆ ವಧು ವರನಿಗೆ ಏನೇನೋ ಗಿಫ್ಟ್‌ಗಳನ್ನು ನೀಡುತ್ತಾರೆ. ಮದುವೆಯ ಸಮಯದಲ್ಲಿ ಅತಿಥಿಗಳು ನೀಡುವ ಗಿಫ್ಟ್ ಒಂದು ಕಡೆಯಾದರೆ ಬಾಳ ಸಂಗಾತಿ ನೀಡುವ ಗಿಫ್ಟ್‌ಗೆ ವಿಶೇಷ ಮಾನ್ಯತೆ ಇರುತ್ತದೆ. ಆ ಗಿಫ್ಟ್ ಚಿರಕಾಲ ನೆನಪಿನಲ್ಲುಳಿಯಬೇಕು ಎಂಬ ಕಾರಣಕ್ಕೆ ಬಹುತೇಕರು ತಮ್ಮ ಬಾಳ ಸಂಗಾತಿಗೆ ವಿಶೇಷವಾದ ಗಿಫ್ಟ್‌ಗಳನ್ನು ನೀಡುತ್ತಾರೆ. ಆದರೆ ಪಾಕಿಸ್ತಾನದಲ್ಲೊಬ್ಬ ವರ ವಧುವಿಗೆ ಕತ್ತೆ ಗಿಫ್ಟ್ ನೀಡಿದ್ದಾನೆ. ಹೌದು ವಿಚಿತ್ರವಾದರೂ ಇದು ಸತ್ಯ ವರನೊರ್ವ ತನ್ನ ಪ್ರೀತಿಯ ವಧುವಿಗೆ ಕತ್ತೆ ಗಿಫ್ಟ್ ನೀಡಿದ್ದು, ಇದನ್ನು ನೋಡಿ ವಧುವೂ ಫುಲ್ ಖುಷಿಯಾಗಿದ್ದಾಳೆ.  

ಅಂದಹಾಗೆ ಹೀಗೆ ವಧುವಿಗೆ ಕತ್ತೆಯನ್ನು ಗಿಫ್ಟ್ ನೀಡಿದ ವರನ ಹೆಸರು ಅಜ್ಲಾನ್ (Azlan) ಇವರು ತಮ್ಮ ವಧಯ ವರಿಶಾಗೆ (Warisha) ಕತ್ತೆಯೊಂದನ್ನು ಗಿಫ್ಟ್ ನೀಡಿದ್ದಾರೆ. ಕತ್ತೆಯನ್ನು ನೀಡಲು ಕಾರಣ ಏನು ಎಂದು ವರ (Groom) ಅಜ್ಲಾನ್‌ನನ್ನು ಕೇಳಿದಾಗ, ಅವರು, ವಧು (bride) ವರಿಶಾ ಕತ್ತೆಯನ್ನು ತುಂಬಾ ಇಷ್ಟಪಡುತ್ತಾಳೆ. ಅವುಗಳು ಶ್ರಮವಹಿಸಿ ದುಡಿಯುವ ಕಾರಣಕ್ಕೆ ವಧು ವರಿಶಾ ಅವುಗಳನ್ನು ತುಂಬಾ ಇಷ್ಟಪಡುತ್ತಾರಂತೆ ಹೀಗಾಗಿ ಕತ್ತೆಯನ್ನೇ ಆಕೆಗೆ ಗಿಫ್ಟ್ ನೀಡಲು ವರ ಅಜ್ಲಾನ್ ನಿರ್ಧರಿಸಿದ್ದಾರೆ. ವರ ವಧುವಿಗೆ ಕತ್ತೆ ಗಿಫ್ಟ್ (Gift) ನೀಡುತ್ತಿರುವ ಕ್ಷಣವನ್ನು ಕ್ಯಾಮರಾಗಳು ಸೆರೆ ಹಿಡಿದಿದ್ದು, ಅಬ್ದುಲ್ ಸಮಾದ್ ಜಿಯಾ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವರನ ರಕ್ಷಣೆಯಲ್ಲಿ ಈ ಪುಟಾಣಿ ಕತ್ತೆ ಬಹಳ ಚೆನ್ನಾಗಿ ಕಾಣಿಸುತ್ತಿದೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಅನೇಕರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. 

ಅನೇಕರು ನವ ವಿವಾಹಿತರಿಗೆ ಶುಭಾಶಯ ತಿಳಿಸಿದ್ದಾರೆ. ಮತ್ತೆ ಕೆಲವರು ಈ ಕತ್ತೆ ತುಂಬಾ ಚೆನ್ನಾಗಿದೆ. ತುಂಬಾ ಅಮೂಲ್ಯವಾದ ಗಿಫ್ಟ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಶ್ವಾನದೊಂದಿಗೆ ಮದ್ವೆ ಮನೆಗೆ ಎಂಟ್ರಿ ಕೊಟ್ಟ ವರ

ಇತ್ತೀಚೆಗೆ ಮಧುಮಗನೋರ್ವ ಶ್ವಾನದೊಂದಿಗೆ ಮದುವೆ ಮನೆ ಪ್ರವೇಶಿಸಿದ ವಿಡಿಯೋವೊಂದು ವೈರಲ್ ಆಗಿತ್ತು. ಬೈಕ್‌ನಲ್ಲಿ ಶ್ವಾನವನ್ನು ಕೂರಿಸಿಕೊಂಡು ಮದುಮಗ ಮದ್ವೆ ಮನೆ ಪ್ರವೇಶಿಸುತ್ತಿದ್ದರೆ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ. ಇತ್ತ ಶ್ವಾನ ಮದುಮಗಳಂತೆ ಬೈಕ್ ಮುಂದೆ ಕುತುಕೊಂಡು ಸಖತ್ ಆಗಿ ಫೋಸ್ ನೀಡಿದೆ. ವಿಡಿಯೋದಲ್ಲಿ ಕಾಣಿಸುವಂತೆ ಶೇರ್ವಾನಿ (Sherwani) ಧರಿಸಿ ಸಿಂಗಾರಗೊಂಡಿರುವ ಮದುಮಗ(Groom) ಬೈಕ್‌ನಲ್ಲಿ ಮುಂದೆ ಶ್ವಾನವನ್ನು(Dog) ಕೂರಿಸಿಕೊಂಡು ಮದ್ವೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಶ್ವಾನಕ್ಕೂ ಮಿರಿ ಮಿರಿ ಮಿಂಚುವಂತಹ ಮೆರೂನ್ ಹಾಗೂ ಚಿನ್ನದ ಬಣ್ಣದ ಸಂಯೋಜನೆಯ ಬಟ್ಟೆಯನ್ನು ತೊಡಿಸಲಾಗಿದೆ. ಈ ವಿಡಿಯೋ ನೋಡಿದ ಅನೇಕರು  ಹೃದಯದ ಇಮೋಜಿಗಳಿಂದ ಮೆಚ್ಚುಗೆ ಸೂಚಿಸಿದ್ದಾರೆ. ಸುಪ್ರೀಂ ಬಕರ್ವಾಡಿ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಇತ್ತೀಚೆಗೆ ಮದುವೆ ಮನೆಗೆ ವಧು ವರರು ಪ್ರವೇಶಿಸುವ ರೀತಿಯೇ ಒಂದು ಟ್ರೆಂಡ್ ಆಗಿದೆ. ಎಲ್ಲರಿಗಿಂತ ತಮ್ಮ ಮದುವೆ ತುಂಬಾ ವಿಭಿನ್ನವಾಗಿರಬೇಕು. ನಾವು ಹೊಸದಾಗಿ ಏನಾದರೊಂದು ಟ್ರೆಂಡ್ ಶುರು ಮಾಡಬೇಕು ಎಂದು ಅನೇಕ ವಧು ವರರು ಇನ್ನಿಲ್ಲದ ಸಾಹಸ ಮಾಡುತ್ತಾರೆ. ಇದಕ್ಕಾಗಿ ಕೆಲವರು ಹೆಲಿಕಾಪ್ಟರ್ ಮೂಲಕ ಮದ್ವೆ ಮನೆಗೆ ಬಂದರೆ ಮತ್ತೆ ಕೆಲವರು ಜೆಸಿಬಿ, ಟ್ರಾಕ್ಟರ್, ಬುಲೆಟ್, ಕುದುರೆ, ಕತ್ತೆಯ ಮೂಲಕವೂ ಮದ್ವೆ  ಮನೆಗೆ ಎಂಟ್ರಿ ಕೊಡುತ್ತಾರೆ. ಆದರೆ ಇಲ್ಲಿ ಒಬ್ಬ ಮಧುಮಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ತನ್ನ ಶ್ವಾನದೊಂದಿಗೆ ಮದ್ವೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

 

 

Follow Us:
Download App:
  • android
  • ios