Asianet Suvarna News Asianet Suvarna News

ಭಾರತ, ಮೋದಿಯನ್ನು ಕೊಂಡಾಡಿದ ಪಾಕ್ ರಕ್ಷಣಾ ವಿಶ್ಲೇಷಕ ಶಹ್ಜಾದ್

ಪಾಕಿಸ್ತಾನದ ರಾಜಕೀಯ ಭದ್ರತೆ ಹಾಗೂ ರಕ್ಷಣಾ ವಿಶ್ಲೇಷಕ ಶಹ್ಜಾದ್ ಚೌಧರಿ,  ಪಾಕಿಸ್ತಾನದ ಟ್ರಿಬ್ಯೂನ್ ಎಂಬ ವೆಬ್‌ಸೈಟ್‌ಗೆ ಲೇಖನವೊಂದನ್ನು ಬರೆದಿದ್ದು, ಸಮಕಾಲೀನ ಜಗತ್ತಿನಲ್ಲಿ ಭಾರತದ ಸ್ಥಾನಮಾನದ ಬಗ್ಗೆ ಬರೆದಿದ್ದಾರೆ

Pakistani defense analyst Shahzad praised India and Modi akb
Author
First Published Jan 15, 2023, 1:46 PM IST

ಕರಾಚಿ: ಪಾಕಿಸ್ತಾನದ ರಾಜಕೀಯ ಭದ್ರತೆ ಹಾಗೂ ರಕ್ಷಣಾ ವಿಶ್ಲೇಷಕ ಶಹ್ಜಾದ್ ಚೌಧರಿ,  ಪಾಕಿಸ್ತಾನದ ಟ್ರಿಬ್ಯೂನ್ ಎಂಬ ವೆಬ್‌ಸೈಟ್‌ಗೆ ಲೇಖನವೊಂದನ್ನು ಬರೆದಿದ್ದು, ಸಮಕಾಲೀನ ಜಗತ್ತಿನಲ್ಲಿ ಭಾರತದ ಸ್ಥಾನಮಾನದ ಬಗ್ಗೆ ಬರೆದಿದ್ದಾರೆ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬೆನ್ನು ತಟ್ಟಿದ್ದಾರೆ.  ನಾನು ಹೆನ್ರಿ ಕಿಸ್ಸಿಂಜರ್ ಆಗಿದ್ದರೆ( ಹೆನ್ರಿ ಕಿಸ್ಸಿಂಜರ್ ಜರ್ಮನ್‌ನಲ್ಲಿ ಹುಟ್ಟಿ ಅಮೆರಿಕಾದಲ್ಲಿ ಬೆಳೆದ ರಾಜಕಾರಣಿ, ಅಮೆರಿಕಾದ ರಾಜತಾಂತ್ರಿಕ ಸಲಹೆಗಾರ ಹಾಗೂ ಭೂ ರಾಜಕೀಯ ಸಲಹೆಗಾರ) ಭಾರತದ ಬಗ್ಗೆ ಒಂದು ಗ್ರಂಥವನ್ನೇ ಬರೆಯುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.   ಅವರ ಲೇಖನದ ಸಾರಾಂಶ ಇಲ್ಲಿದೆ. 

ಭಾರತದ ಭೂಮಿಯ ಅದೃಷ್ಟದಲ್ಲಿ ಅಂತಹದೊಂದು ದೊಡ್ಡ ಮಟ್ಟದ ಬದಲಾವಣೆಯಾಗಿದೆ.  ಮುಖ್ಯವಾಗಿ ಏಷ್ಯಾದಲ್ಲಿ(Asia) ಹಾಗೂ ವಿಶಾಲ ಜಾಗತಿಕ ವೇದಿಕೆಯಲ್ಲಿ ಭಾರತದ ಬಗೆಗಿನ ನೋಟ ಬದಲಾಗಿದೆ.  ಮೋದಿ ಪಾಕಿಸ್ತಾನದಲ್ಲಿ (Pakistan) ತಿರಸ್ಕಾರದಿಂದ ಕಾಣುವ ಹೆಸರಾಗಿರಬಹುದು, ಆದರೆ ಅವರು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬ್ರಾಂಡ್ (India Brand) ಮಾಡಿದ್ದಾರೆ.  ಇದನ್ನು ಈ ಹಿಂದೆಂದೂ ಯಾವ ನಾಯಕರು ಮಾಡಿರಲಿಲ್ಲ.  ಅದರಲ್ಲೂ ಮುಖ್ಯವಾಗಿ ಭಾರತ ತನಗೆ ಅನಿಸಿದ್ದನ್ನು ಹೇಳಲು ಮಾಡಲು ಹಿಂಜರಿಯುವುದಿಲ್ಲ.  ಮತ್ತು ಮಾಡುವ ಎಲ್ಲಾ ಕಾರ್ಯವೂ ನ್ಯಾಯಸಮ್ಮತವಾಗಿರುತ್ತದೆ.   ಅದು ಅಮೆರಿಕಾದ (America) ಪಾಲಿಗೆ ಗೆಳೆಯನಾಗಿದೆ.  ಆದರೆ ಪಾಕಿಸ್ತಾನಿಯರು ಅಮೆರಿಕಾದ ಜೊತೆಗೆ ಇದ್ದು ಪಟ್ಟು ಬಿಡದೇ ದೂರುತ್ತಾರೆ.  ನಾವು ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವಲ್ಲಿ ನಾವು ಭ್ರಮೆಗೆ ಒಳಗಾಗಿದ್ದೇವೆ. ಅಮೆರಿಕಾ ನಮ್ಮ ನಿಲುವು ಮತ್ತು ಇಬ್ಬಗೆಯ ನೀತಿಯನ್ನು ಬಳಸಿಕೊಳ್ಳುತ್ತದೆ.

ಜಾಗತಿಕ ದುರಂತವನ್ನು ಮೋದಿ ತಪ್ಪಿಸಿದರು: ಅಮೆರಿಕ ಪ್ರಶಂಸೆ

ಪ್ರಸ್ತುತ  ರಷ್ಯಾ (Russia) ಅಮೆರಿಕದ ನಿರ್ಬಂಧಗಳ ಅಡಿಯಲ್ಲಿದೆ ಮತ್ತು ಯಾರೂ ಕೂಡ ರಷ್ಯಾದೊಂದಿಗೆ ಮುಕ್ತವಾಗಿ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಆದರೆ ಭಾರತ ಈ ನಿರ್ಬಂಧದಿಂದ ಹೊರತಾಗಿದೆ. ಆದ್ಯತೆಯ ಮೇಲೆ ರಷ್ಯಾದ (Russia) ತೈಲವನ್ನು ಖರೀದಿಸುವ ಭಾರತ ಅದನ್ನು ಅಮೆರಿಕಾಗೆ ಮರು ರಪ್ತು ಮಾಡಿ ಅಮೆರಿಕಾ (America) ಡಾಲರ್ ಗಳಿಸಲು ಸಹಾಯ ಮಾಡುತ್ತದೆ. ಪರೋಕ್ಷವಾಗಿ  ವಿಶ್ವದ ಎರಡು ಎದುರಾಳಿ ಹಾಗೂ ಬಲಿಷ್ಠ ಮಿಲಿಟರಿ ಮಹಾಶಕ್ತಿಗಳು ಭಾರತವನ್ನು ತನ್ನ ಮಿತ್ರ ಎಂದು ಹೇಳಿಕೊಳ್ಳುತ್ತಾರೆ. ಇದೊಂದು ರಾಜತಾಂತ್ರಿಕ ಪರಿಣಿತ ನಡೆ ಅಲ್ಲದೇ ಮತ್ತೇನು?

ಇದೆಲ್ಲವೂ ಒಂದು ಪದದಿಂದ ಬಂದಿದೆ  ಅದುವೇ ಪ್ರಸ್ತುತತೆ.  ಭಾರತವು ಈಗ ಜಗತ್ತಿಗೆ ಪ್ರಸ್ತುತವಾಗಿದೆ,  ಕೇವಲ ಅದರ ಗಾತ್ರ ಹಾಗೂ ಸುತ್ತಳತೆಯಿಂದಲ್ಲ.  ಅದರ ಹೆಜ್ಜೆಗುರುತುಗಳು ಹಾಗೂ ಜಗತ್ತಿಗೆ ಯಾವುದು ಮುಖ್ಯ ಎಂಬುದನ್ನು ಪರಿಗಣಿಸುವುದರಿಂದ.  ಭಾರತ ಇಂದು ಬ್ರಿಟನ್‌ಗಿಂತ ಮುಂದಿರುವ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದೆ.  ಅಲ್ಲದೇ 2037ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಗುರಿಯನ್ನು ಹೊಂದಿದೆ. ಇದು ಪ್ರಸ್ತುತ ಆರ್ಥಿಕತೆಯಲ್ಲಿ 600 ಶತಕೋಟಿ ಡಾಲರ್‌ ನೊಂದಿಗೆ ಇದು ಪೂರ್ಣ ಉದ್ಯೋಗ ರೇಖೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಜಿಡಿಪಿಯಲ್ಲಿನ (JDP) ಬೆಳವಣಿಗೆ ದರವೂ ಉತ್ತಮ ಕಾರ್ಯಕ್ಷಮತೆಯ ಆರ್ಥಿಕತೆಗೆ ಹೊಂದಿಕೆಯಾಗುತ್ತದೆ.  ಅಲ್ಲದೇ ಭಾರತ ವಿಶ್ವದ ಎರಡನೇ ಅತೀದೊಡ್ಡ ಸೈನ್ಯ ಹಾಗೂ ಮೂರನೇ ಅತಿದೊಡ್ಡ ಮಿಲಿಟರಿ ಪಡೆಯನ್ನು ಹೊಂದಿದೆ.  ಒಂದು ವೇಳೆ ಇದು ಇಲ್ಲದಿದ್ದರೂ ಆ ಸಾಮರ್ಥ್ಯದ ಗುರಿಯ ಹಾದಿಯಲ್ಲಿದೆ.  ಅಲ್ಲದೇ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಭಾರತದ ನಾಲ್ವರು ಅಗ್ರಸ್ಥಾನದಲ್ಲಿದ್ದಾರೆ.

ವಿದೇಶಾಂಗ ನೀತಿ ಹೆಸರಲ್ಲಿ ಭಯೋತ್ಪಾದನೆ ಬೆಂಬಲಿಸುವ ದೇಶಗಳಿಗೆ ತಕ್ಕ ಪಾಠ, ಪಾಕ್-ಚೀನಾಗೆ ಮೋದಿ ಎಚ್ಚರಿಕೆ!

ಭಾರತದ ಲಕ್ಷ್ಮಿ ಮಿತ್ತಲ್ (Laxmi Mittal) ಉಕ್ಕಿನ ವ್ಯವಹಾರದ ದೈತ್ಯರಾಗಿದ್ದರೆ, ಅಂಬಾನಿ ರಕ್ಷಣಾ ಕ್ಷೇತ್ರದಿಂದ ಹಿಡಿದು ದೂರ ಸಂಪರ್ಕ ಕ್ಷೇತ್ರದವರೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ಐಟಿ ದಿಗ್ಗಜ ಇನ್ಫೋಸಿಸ್  (Infosys) ಒಂದು ಜಾಗತಿಕ ಹೆಸರು. ಹೀಗೆ ಭಾರತ ಕೃಷಿ ಉತ್ಪನ್ನಗಳು ಮತ್ತು ಐಟಿ (IT)ಉದ್ಯಮದಲ್ಲಿ ಅಗ್ರ ಉತ್ಪಾದಕರ ನಡುವೆ ನಿಂತಿದೆ. ಕೃಷಿಯಲ್ಲಿ ಪ್ರತಿ ಎಕರೆಗೆ ಅವರ ಇಳುವರಿ ಪ್ರಪಂಚದಲ್ಲೇ ಅತ್ಯುತ್ತಮವಾಗಿದೆ. ಇದರ ಹೊರತಾಗಿ 1.4 ಶತಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವುದರಿಂದ, ಇದು ತುಲನಾತ್ಮಕವಾಗಿ ಸ್ಥಿರವಾಗಿದೆ. ಸಶಕ್ತ, ಕ್ರಿಯಾತ್ಮಕ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆ ಅದನ್ನು ತಡೆದುಕೊಂಡಿದೆ. ಸಮಯದ ಪರೀಕ್ಷೆ ಮತ್ತು ದೃಢವಾದ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಮೂಲಭೂತ ಅಂಶಗಳ ಸುತ್ತ ಅದರ ಸ್ಥಿತಿಸ್ಥಾಪಕತ್ವವನ್ನು ಸಾಬೀತುಪಡಿಸಿದ್ದು,. ಇದು ರಾಷ್ಟ್ರವನ್ನು ಗಟ್ಟಿಗೊಳಿಸಿದೆ.

ಅನೇಕರಿಗೆ ಭಾರತ ಸಾಕಷ್ಟು ಜಾತ್ಯತೀತವಾಗಿಲ್ಲ ಎನಿಸಿರಬಹುದು.  ಅಧಿಕಾರ ಹಿಡಿದವರ ಧೋರಣೆ ಇಲ್ಲದಿದ್ದರೂ ಅಲ್ಲಿನ್ನೂ ಸಂವಿಧಾನವಿದೆ. ಮೋದಿ ಆಡಳಿತದಲ್ಲಿ ಅಲ್ಲಿ ಹೊಸ ಪ್ರತಿಪಾದನೆಯ ಧಾರ್ಮಿಕ ರಾಷ್ಟ್ರೀಯವಾದದ ಹಲಗೆಯನ್ನು ದೇಶ ರೂಪಿಸಿದೆ. ಮುಖ್ಯವಾಗಿ, ಇದು ಮೋದಿ ಮತ್ತು ಭಾರತಕ್ಕಾಗಿ ಕೆಲಸ ಮಾಡುವಂತಿದೆ. ಆದರೆ ಈ ವಿಚಾರದಲ್ಲಿ ಪಾಕಿಸ್ಥಾನಕ್ಕೆ ತನ್ನದೇ ಆದ ಸವಾಲುಗಳಿವೆ.  

ಭಾರತವು ಮನಮೋಹನ್ ಸಿಂಗ್ (Manmohan singh) ಆಡಳಿತಾವಧಿಯಲ್ಲಿ 2004 ರಲ್ಲಿ 100 ಶತಕೋಟಿ ಡಾಲರ ಆರ್ಥಿಕತೆಗೆ ಜಿಗಿದಿತ್ತು.  ಆದರೆ ಮೋದಿಯವರ ಆಡಳಿತದಲ್ಲಿ ಇದು 600 ಶತಕೋಟಿಗಿಂತಲೂ ಹೆಚ್ಚಿದೆ ಮತ್ತು ದೇಶದ ಜಿಡಿಪಿ ಮೂರು ಟ್ರಿಲಿಯನ್ ಡಾಲರ್ ಗಳಷ್ಟು ಗಾತ್ರದಲ್ಲಿದೆ. ಇದೊಂದು ಮೈಲಿಗಲ್ಲಿನ ಪ್ರಗತಿಯಾಗಿದೆ. ಇದು ಭಾರತವನ್ನು ಎಲ್ಲಾ ಹೂಡಿಕೆದಾರರಿಗೆ ಆದ್ಯತೆಯ ತಾಣವನ್ನಾಗಿ ಮಾಡಿದೆ.  ಸೌದಿ ಅರೇಬಿಯಾ (Saudi Arabia), ಪಾಕಿಸ್ತಾನದ ಸಹೋದರ ದೇಶ ನಾವು ನಮ್ಮ ದೇಶದಲ್ಲಿ 7 ಶತಕೋಟಿ ಹಣವನ್ನು ಹೂಡಿಕೆ ಮಾಡಲು ಬೇಡಿಕೊಂಡ ನಂತರವೂ ಅವರು ಭಾರತದಲ್ಲಿ 72 ಬಿಲಿಯನ್‌ಗಿಂತಲೂ ಹೆಚ್ಚು ಹೂಡಿಕೆಯನ್ನು ಮಾಡಿದರು. 

ಭಾರತದ ಬರಹಗಾರರ ಅಭಿಪ್ರಾಯದಂತೆ ಚೀನಾ ಹಾಗೂ ಭಾರತ ಆರ್ಥಿಕ ಶಕ್ತಿ, ಮಿಲಿಟರಿ ಸಾಮರ್ಥ್ಯ ಹಾಗೂ ಹೆಚ್ಚಿನ ರಾಜಕೀಯ ಪ್ರಾಬಲ್ಯ ಹೊಂದಿರುವ  ಎರಡು ದೊಡ್ಡ ರಾಷ್ಟ್ರಗಳಾಗಿವೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಆಗಿರುವ  ಅಂತರಕ್ಕೆ ಈಗ ಸೇತುವೆ ಇಲ್ಲದಂತಾಗಿದೆ. ಭಾರತವೂ ಇಂದು ಎಲ್ಲಾ ಸಂಕೋಲೆಗಳಿಂದ ಮುಕ್ತವಾಗಿದೆ. ರಾಜೀವ್ ಗಾಂಧಿಯಿಂದ ಮೋದಿಯವರೆಗೆ ಅಲ್ಲಿನ ವಿದೇಶಾಂಗ ನೀತಿಯಲ್ಲಿ ಸ್ಪಷ್ಟವಾದ ಅಂತರವಿದ್ದು, ಅದೂ ಪಾಕಿಸ್ತಾನದಿಂದ ಬಹಳ ದೂರವಿದೆ. ಅದು ಭಾರತವನ್ನು ದಕ್ಷಿಣ ಏಷ್ಯಾಕ್ಕಿಂತ ಇಡೀ ಏಷ್ಯಾದತ್ತ ತಿರುಗಿಸುತ್ತದೆ. ದಕ್ಷಿಣ ಏಷ್ಯಾ ಸಾಕಷ್ಟು ಪ್ರಭಾವಶಾಲಿಯಾಗಿದೆ. ಚೀನಾ (China) ವರ್ಸಸ್ ಭಾರತ ಎಂಬ ದಾಳವನ್ನು ಎಷ್ಟು ಆಡುತ್ತೇವೆ ಎಂದು ಲೆಕ್ಕಿಸದೇ ಈ ಎರಡು ದೇಶವನ್ನು ಎದುರಿಸಲು  100 ಶತಕೋಟಿ ಡಾಲರ್ ವ್ಯವಹಾರ ಬೇಕು. 500 ಮಿಲಿಯನ್ ಡಾಲರ್ ತ್ವರಿತವಾಗಿ ಚಲಿಸುವ ಸಾಮಾನ್ಯ ಗುರಿ ಬೇಕು. 

ಆದರೆ ಭಾರತ ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನವನ್ನು ರಾಜಕೀಯವಾಗಿ ಮೀರಿಸಿದೆ. ಆದರೆ ಪಾಕಿಸ್ತಾನ ಇದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಭಾರತ ತನ್ನ ಸಂವಿಧಾನದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿತ್ತು. ಇದನ್ನು ಧಿಕ್ಕರಿಸುವ ಕಾಶ್ಮೀರದ ಹಳೆ ಪೀಳಿಗೆಯಂತೆ ಈಗಿನ ಯುವ ಪೀಳಿಗೆ ಈ ಬಗ್ಗೆ ಭಾವನಾತ್ಮಕವಾಗಿಲ್ಲ. 
ಇತ್ತ ಭಾರತದ ಜಾಗತಿಕ ಹೆಜ್ಜೆ ಗುರುತು ಗಮನಾರ್ಹವಾಗಿದೆ. ಭಾರತವನ್ನು  G7ಗೆ ಆಹ್ವಾನಿಸಲಾಗಿದೆ. ಅಲ್ಲದೇ ಜಿ20ಯಲ್ಲಿ ಸದಸ್ಯ ರಾಷ್ಟವಾಗಿದೆ. ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆ, ಸಮಾನ ಪ್ರಗತಿಗೆ ಯಾವುದು ನಿರ್ಣಾಯಕ,  ಸಾಂಕ್ರಾಮಿಕ ರೋಗಗಳ ತಡೆ ಮತ್ತು ತಂತ್ರಜ್ಞಾನದ ಬಳಕೆ ಈ ವಿಚಾರಗಳಲ್ಲಿ ಇದು ಜಾಗತಿಕವಾಗಿ  ದಕ್ಷಿಣದ ಚಳುವಳಿಯನ್ನು ಮುನ್ನಡೆಸುತ್ತಿದೆ.  ಇವೆಲ್ಲವೂ  ಭಾರತವನ್ನು ವಿದೇಶಾಂಗ ನೀತಿಯ ಮುಂಭಾಗದಲ್ಲಿ ಸ್ಥಾಪಿಸುವ ಸ್ವಂತ ನೀಲನಕ್ಷೆಯನ್ನು ನಿರ್ಮಿಸಿದೆ.

ಒಮ್ಮೊಮ್ಮೆ ಭಾರತ ದುರಹಂಕಾರಿಯಾಗಿ ಕಾಣಿಸಬಹುದು. ಆದರೆ ಅದು ತನ್ನ ಇರುವಿಕೆಯನ್ನು ಬಹಳ ಸಧೃಡವಾಗಿ ಪ್ರತಿಪಾದಿಸುತ್ತಿದೆ. ವಿದೇಶಾಂಗ ನೀತಿಯನ್ನು ಭಾರತ ಬಹಳ ಕೌಶಲ್ಯದಿಂದ ನಡೆಸುತ್ತಿದೆ. ಮೋದಿ ಭಾರತವನ್ನು, ಅದರ ಪ್ರಭಾವ ಮತ್ತು ಪ್ರಭಾವದ ವ್ಯಾಪಕತೆಯನ್ನು ಬಿತ್ತರಿಸಲು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.  ಇದು ನಿಜವಾದ ಎಲೆಗಳ ವಾಸನೆ ನೋಡುವ ಸಮಯ. ಭಾರತದತ್ತ ನಮ್ಮ ಯೋಜನೆಗಳನ್ನು ಮರುಮಾಪನ ಮಾಡುವ ಸಮಯ ಇದಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

Follow Us:
Download App:
  • android
  • ios