ಇಸ್ಲಾಮಾಬಾದ್(ಮಾ.04):  ಪಾಕಿಸ್ತಾನದ ರಾಜಕೀಯದಲ್ಲಿ ಮತ್ತೆ ಬಿಕ್ಕಟ್ಟು ಎದುರಾಗಿದೆ.  ಪ್ರಧಾನಿ ಇಮ್ರಾನ್ ಖಾನ್ ಗೌರವಯುತವಾಗಿ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವಂತೆ ವಿಪಕ್ಷಗಳು ಆಗ್ರಹಿಸಿದೆ. ಸೆನೆಟ್ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ತೆಹ್ರಿಕ್  ಇನ್ಸಾಫ್ ಪಕ್ಷ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಇದೀಗ ಪಾಕಿಸ್ತಾನದಲ್ಲಿ ಆಡಳಿತ ಪಕ್ಷ ತೀವ್ರ ಸಂಕಷ್ಟ ಅನುಭವಿಸುತ್ತಿದೆ.

ಇಮ್ರಾನ್‌ ಖಾನ್‌ ಭಾಷ​ಣಕ್ಕೆಲಂಕಾ ಕೊಕ್!

ರಾಜೀನಾಮೆ ಒತ್ತಡ ತೀವ್ರಗೊಳ್ಳುತ್ತಿದ್ದಂತೆ ಇಮ್ರಾನ್ ಖಾನ್ ದೇಶವನ್ನುದ್ದೇಶಿ ಭಾಷಣಕ್ಕೆ ಮುಂದಾಗಿದ್ದಾರೆ. ಇಂದು(ಮಾ04) ಸಂಜೆ 7.30ಕ್ಕೆ ಇಮ್ರಾನ್ ಖಾನ್ ಭಾಷಣ ಮಾಡಲಿದ್ದಾರೆ. ಈ ವೇಳೆ ರಾಜೀನಾಮೆ ಘೋಷಿಸುವು ಸಾಧ್ಯತೆ ಇದೆ. ಭಾಷಣಕ್ಕೂ ಮುನ್ನ ಇದೀಗ ಇಮ್ರಾನ್ ಖಾನ್ ಸೇನಾ ಮುಖ್ಯಸ್ಥರ ಜೊತೆ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ.

ಬಾಲಾಕೋಟ್‌ ವಾಯುದಾಳಿಗೆ 300 ಬಲಿ ನಿಜ: ಇಮ್ರಾನ್‌ ಸರ್ಕಾರದ ಬಣ್ಣ ಬಯಲು!.

ಇಮ್ರಾನ್ ಖಾನ್ ರಾಜೀನಾಮೆ ಘೋಷಿಸಿದರೆ ಪಾಕಿಸ್ತಾನ ಸೇನೆ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ.  ಈ ಹಿಂದೆ ಸೇನಾ ಮುಖ್ಯಸ್ಥ ಪರ್ವೇಜ್ ಮುಶ್ರಫ್, ಸರ್ಕಾರ ಕೆಡವಿ ಅಧಿಕಾರ ಹಿಡಿದ ಘಟನೆಯನ್ನು ನೆನೆಪಿಸಿಕೊಳ್ಳಬಹುದು.

ಇಮ್ರಾನ್ ಖಾನ್ ಈ ಸಂಷ್ಟಕ್ಕೆ ಸಿಲುಕಲು ಮುಖ್ಯ ಕಾರಣ ಸಂಸತ್ ಚುನಾವಣೆಯಲ್ಲಿ ಇಮ್ರಾನ್ ಸರ್ಕಾರದ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಕ್ ಸೋಲು ಕಂಡಿದ್ದರು. ಪಾಕಿಸ್ತಾನ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ವಿರುದ್ಧ ಮುಗ್ಗರಿಸಿದ್ದರು. ಗಿಲಾನಿ ಗೆಲುವು ಕಾಣುತ್ತಿದ್ದಂತೆ, ವಿರೋಧ ಪಕ್ಷಗಳು ಇಮ್ರಾನ್ ರಾಜೀನಾಮೆಗೆ ಆಗ್ರಹಿಸಿದೆ.

ಆದರೆ ಇಮ್ರಾನ್ ಖಾನ್ ವಿಶ್ವಾಸ ಮತ ಯಾಚನೆಗೆ ನಿರ್ಧರಿಸಿದ್ದಾರೆ. ವಿಶ್ವಾಸ ಮತ ಯಾಚನೆ ಪ್ರಹಸನಕ್ಕೂ ಮುನ್ನ ಇದೀಗ ಭಾಷಣ ಮಾಡಲು ಇಮ್ರಾನ್ ನಿರ್ಧರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.