14ರ ಬಾಲಕಿ ವರಿಸಿದ 50 ವರ್ಷದ ಸಂಸದ: ತನಿಖೆ ಶುರು| ಪಾಕಿಸ್ತಾನದ ಬಲೂಚಿಸ್ತಾನ ಕ್ಷೇತ್ರದ ಸಂಸದ ಮತ್ತು ಜಮೈತ್ ಉಲೇಮಾ-ಇ-ಇಸ್ಲಾಂ ನಾಯಕ ಮೌಲಾನಾ ಸಲಾಹುದ್ದೀನ್ ಅಯೂಬಿ
ಚಿತ್ರಾಲ್(ಫೆ.24): ಪಾಕಿಸ್ತಾನದ ಬಲೂಚಿಸ್ತಾನ ಕ್ಷೇತ್ರದ ಸಂಸದ ಮತ್ತು ಜಮೈತ್ ಉಲೇಮಾ-ಇ-ಇಸ್ಲಾಂ ನಾಯಕ ಮೌಲಾನಾ ಸಲಾಹುದ್ದೀನ್ ಅಯೂಬಿ, 14 ವರ್ಷದ ಅಪ್ರಾಪ್ತೆಯನ್ನು ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಭಾರೀ ವಿವಾದಕ್ಕೆ ಕಾರಣವಾಗಿದೆ.
ಜಘೂರಿನ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಬಾಲಕಿಯನ್ನು 50 ವರ್ಷದ ಸಂಸದ ಸಲಾಹುದ್ದೀನ್ ವಿವಾಹವಾಗಿದ್ದಾರೆ ಎನ್ನಲಾಗಿತ್ತು. ಈ ಕುರಿತು ತನಿಖೆಗೆ ಆದೇಶಿಸಿ ಸರ್ಕಾರೇತರ ಸಂಸ್ಥೆಯೊಂದು ದೂರು ನೀಡಿತ್ತು.
ಪ್ರಕರಣ ಸಂಬಂಧ ಬಾಲಕಿ ಮನೆಗೆ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದಾಗ ಬಾಲಕಿಯ ತಂದೆ ವಿವಾಹದ ವಿಷಯವನ್ನು ಅಲ್ಲಗಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
