ಇಸ್ಲಾಮಾಬಾದ್(ಜೂ. 23)  ಇಂಥ ತರೇವಾರಿ ಹೇಳಿಕೆಗಳು ಪಾಕಿಸ್ತಾನದಿಂದ ಮಾತ್ರ ಬರಲು ಸಾಧ್ಯ. ಪಾಕಿಸ್ತಾನದ ಈ ಸಚಿವರಿಗೆ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣದ ನಡುವಿನ ವ್ಯತ್ಯಾಸವೇ ಗೊತ್ತಾಗಿಲ್ಲ!

ಜೂನ್  21  ರಂದು ಇಡೀ ಪ್ರಪಂಚ ಸೂರ್ಯ ಗ್ರಹಣ ನೋಡಿದೆ. ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ  ಚೌಧರಿ ಪಾವದ್  ಹುಸೇನ್ ದೊಡ್ಡ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.  ಸೂರ್ಯ ಗ್ರಹಣದ ಸಂದರ್ಭ ಚಂದ್ರ ಗ್ರಹಣದ ಮಾಹಿತಿ ಹಂಚಿಕೊಂಡು ನಗೆಪಾಟಿಲಿಗೆ ಗುರಿಯಾಗಿದ್ದಾರೆ.

ಪ್ರಪಂಚದ ವಿವಿಧ ಕಡೆ ಸೂರ್ಯ ಗ್ರಹಣ ಹೇಗಿತ್ತು?

ಸೂರ್ಯ ಗ್ರಹಣಕ್ಕೆ ಕೆಲವು ದಿನ ಇರುವಾಗ ಸೋಶಿಯಲ್ ಮೀಡಿಯಾದಲ್ಲಿ ಪಾಕ್ ಸಚಿವರು ಚಂದ್ರ ಗ್ರಹಣದ ಬಗ್ಗೆ ತಿಳಿದುಕೊಳ್ಳಿ ಎಂದು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.  ಆದರೆ ಇದು ಸೂರ್ಯ ಗ್ರಹಣದ ಕಾಲ ಎಂಬುದು ಅವರ ಅರಿವಿಗೆ ಬಂದಿಲ್ಲ.

ಸಚಿವರು ಶೇರ್ ಮಾಡಿಕೊಂಡ ನಂತರನ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ಪೋಸ್ಟ್ ಹರಿದಾಡಿದೆ. ಕೆಲವರು ಇದು ಸೂರ್ಯ ಗ್ರಹಣ ಚಂದ್ರ ಗ್ರಹಣ ಅಲ್ಲ ಎಂದು ತಿಳಿ ಹೇಳುವ ಕೆಲಸ ಮಾಡಿದ್ದಾರೆ.

ಸೂರ್ಯಗ್ರಹಣ ಪಾಕಿಸ್ತಾನದಲ್ಲಿ ಶೇ. 98 ರಷ್ಟು ಗೋಚರವಾಗಿದೆ.  ಕೊರೋನಾ ಕಾಲದಲ್ಲಿ ಎದುರಾದ ಗ್ರಹಣ ಪ್ರಪಂಚದ ಮೇಲೆ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಮಾಡಬಲ್ಲದು ಎಂದು ಜ್ಯೋತಿಷಿಗಳು ಅಭಿಪ್ರಾಯ ಪಟ್ಟಿದ್ದರು.