Asianet Suvarna News Asianet Suvarna News

ಯೋಗದ ಮಹತ್ವ ಸಾರುವ ಪಾಕಿಸ್ತಾನ ಸರ್ಕಾರದ ಪೋಸ್ಟ್ ಗೆ ಪಾಕ್ ನೆಟ್ಟಿಗರು ಗರಂ

*ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಟ್ವಿಟರ್ ನಲ್ಲಿ ಪೋಸ್ಟ್ ಹಾಕಿದ್ದ ಪಾಕಿಸ್ತಾನ ಸರ್ಕಾರ
*ಯೋಗದ ಮಹತ್ವ ಸಾರುವ ಪೋಸ್ಟ್ 
*ಭಾರತದ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಿದ್ದೀರಿ ಎಂದು ಸರ್ಕಾರದ ವಿರುದ್ಧ ಪಾಕ್ ನೆಟ್ಟಿಗರು ಗರಂ 

Pakistan governments International Yoga Day post draws ire from own citizens why details here
Author
Bangalore, First Published Jun 23, 2022, 1:35 PM IST

ನವದೆಹಲಿ (ಜೂ.23): ಅಂತಾರಾಷ್ಟ್ರೀಯ ಯೋಗ ದಿನದ (International Yoga Day) ಪ್ರಯುಕ್ತ ಪಾಕಿಸ್ತಾನ (Pakistan) ಸರ್ಕಾರ (government) ಟ್ವಿಟರ್ ನಲ್ಲಿ (Twitter) ಹಂಚಿಕೊಂಡ ಪೋಸ್ಟ್ ಗೆ (Post) ಅಲ್ಲಿನ ನಾಗರಿಕರು (Citizens) ಟೀಕೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, 'ಭಾರತೀಯ ಸಂಸ್ಕೃತಿ'ಯನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಅಲ್ಲಿನ ನೆಟ್ಟಿಗರು (netizens) ಸರ್ಕಾರವನ್ನು ಕೋರಿದ್ದಾರೆ.

ಜೂನ್ 21ರಂದು ಜಗತ್ತಿನಾದ್ಯಂತ ಜನರು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಜನರಿಗೆ ಯೋಗದ (Yoga) ಮಹತ್ವದ ಬಗ್ಗೆ ಅರಿವು (awareness)  ಮೂಡಿಸುವ ಪ್ರಯತ್ನ ಮಾಡಲಾಯಿತು. ಇದೇ ಉದ್ದೇಶದಿಂದ ಪಾಕಿಸ್ತಾನ ಸರ್ಕಾರ (Pakistan Government) ಕೂಡ ಯೋಗದ ಮಹತ್ವದ ಕುರಿತ ಪೋಸ್ಟ್ ವೊಂದನ್ನು (Post) ಟ್ವೀಟ್ (Tweet) ಮಾಡಿತ್ತು. ಇದನ್ನು ಪಾಕಿಸ್ತಾನದ (Pakistan) ಅನೇಕ ನೆಟ್ಟಿಗರು (Netizens) ಟೀಕಿಸಿದ್ದಾರೆ.

29 ನಿಮಿಷ ವೃಶ್ಚಿಕಾಸನದಲ್ಲಿ ನಿಂತು ವಿಶ್ವ ದಾಖಲೆ ನಿರ್ಮಿಸಿದ ತರುಣ

'ಯೋಗದ (Yoga) ಪ್ರಯೋಜನಗಳು ತ್ವರಿತ ತೃಪ್ತಿ ಹಾಗೂ ಶಾಶ್ವತ ಪರಿವರ್ತನೆ ಎರಡನ್ನೂ ಒದಗಿಸುತ್ತವೆ. ಫಿಟ್ನೆಸ್ ಜಗತ್ತಿನಲ್ಲಿ ಇವೆರಡೂ ಮುಖ್ಯ. ಯೋಗವು ನಿಮ್ಮ ದೈಹಿಕ (Physical) ಹಾಗೂ ಮಾನಸಿಕ (Mental) ಸಾಮರ್ಥ್ಯವನ್ನು ತ್ವರಿತವಾಗಿ ಬದಲಾಯಿಸಬಲ್ಲದು. ಜೊತೆಗೆ ಮನಸ್ಸು ಹಾಗೂ ದೇಹ ಎರಡನ್ನೂ ಸುದೀರ್ಘ ಕಾಲ ಆರೋಗ್ಯವಾಗಿಡಬಲ್ಲದು' ಎಂದು ಪಾಕಿಸ್ತಾನ ಸರ್ಕಾರ ಟ್ವಿಟರ್ ನಲ್ಲಿ (Twitter) ಪೋಸ್ಟ್ ಹಾಕಿತ್ತು. 

ಇದಕ್ಕೆ ಒಬ್ಬರು ನೆಟ್ಟಿಗರು 'ಭಾರತದ ಪ್ರಧಾನಿ ಮೋದಿ ಅವರನ್ನು ಅನುಸರಿಸುತ್ತಿದ್ದೀರಾ? ಆಮದು ಮಾಡಿಕೊಂಡಿದ್ದರೂ ನೀವು ಪಾಕಿಸ್ತಾನ ಸರ್ಕಾರ ಎಂಬುದು ನೆನಪಿರಲಿ' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ನೆಟ್ಟಿಗರು 'ಭಾರತದ ಸಂಸ್ಕೃತಿಯನ್ನು ಪ್ರಚಾರ ಮಾಡೋದನ್ನು ನಿಲ್ಲಿಸಿ' ಎಂದು ಸರ್ಕಾರವನ್ನು ಕೇಳಿಕೊಂಡಿದ್ದಾರೆ. 

'ನನ್ನ ಪ್ರಕಾರ ಇದು ಭಾರತೀಯ ಮಾದರಿಯ ಧ್ಯಾನ. ಹೀಗಾಗಿ ಸರ್ಕಾರ ಈ ದಿನವನ್ನು ಆಚರಿಸಬಾರದು. ಮುಸ್ಲಿಮರಾದ ನಮಗೆ ಆಚರಿಸಲು ನಮ್ಮದೇ ಧ್ಯಾನ ಮಾರ್ಗಗಳಿವೆ. ಈ ಪೋಸ್ಟ್ ಅನ್ನು ದಯವಿಟ್ಟು ತೆಗೆದು ಹಾಕಿ. ಸಾರ್ವಜನಿಕ ವೇದಿಕೆಯಲ್ಲಿ ನೀವು ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಪ್ರಚಾರ ಮಾಡುತ್ತಿದ್ದೀರಿ. ಅಥವಾ ಇದು ಪಾವತಿ ಪ್ರಚಾರವೇ. ಇದು ಒಟ್ಟಾರೆ ಅಸಂಬದ್ಧ' ಎಂದು ಪ್ರಾಧ್ಯಾಪಕ ಪ್ರೊಫೆಸರ್ ಇಮ್ರಾನ್ ಅಲ್ಬಸ್ ಹೇಳಿದ್ದಾರೆ.ಇನ್ನೊಬ್ಬ ನೆಟ್ಟಿಗರಾದ ಆಯಿಷಾ ರಾಥೋರ್ 'ಇವೆಲ್ಲದರಿಂದ ನಿಮಗೆ ಸಮಯ ಸಿಕ್ಕರೆ ಬಡವರ ಬಗ್ಗೆಯೂ ಸ್ವಲ್ಪ ಆಲೋಚಿಸಿ' ಎಂದು ಪ್ರತಿಕ್ರಿಯಿಸಿದ್ದಾರೆ. 

ಯೋಗವನ್ನು ಸನಾತನ ಭಾರತದ ಋಷಿ ಮುನಿಗಳು ಪ್ರವರ್ಧಮಾನಕ್ಕೆ ತಂದರು. ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಿಸುತ್ತದೆ ಎಂಬುದನ್ನು ಭಾರತೀಯರು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿದ್ದು 2015ರಲ್ಲಿ. 2014ರ ಸೆಪ್ಟೆಂಬರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗದ ಮಹತ್ವದ ಕುರಿತಂತೆ ಭಾಷಣ ಮಾಡಿದ್ದರು. ಮೋದಿಯವರ ಭಾಷಣಕ್ಕೆ ಸಾಕಷ್ಟು ದೇಶಗಳು ಬೆಂಬಲ ಸೂಚಿಸಿದವು. ಇದರ ಪರಿಣಾಮ ಜೂನ್ 21ರ ದಿನವನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ವಿಶ್ವಸಂಸ್ಥೆಯು ಘೋಷಿಸಿತು. ಹೀಗಾಗಿ ಜಗತ್ತಿನಾದ್ಯಂತ ಹಲವು ದೇಶಗಳು ಜೂನ್ 21ರಂದು ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ. 

ಮಾಲ್ಡಿವ್ಸ್‌ನಲ್ಲಿ ಯೋಗ ಮಾಡುತ್ತಿದ್ದವರನ್ನ ಓಡಿಸಿದ ಮುಸ್ಲಿಮರು, ತನಿಖೆಗೆ ಆದೇಶಿಸಿದ ಅಧ್ಯಕ್ಷ!

ಯೋಗ ಭಾರತದ ಕೊಡುಗೆಯಾಗಿದ್ದರೂ ಇಂದು ಜಗತ್ತಿನ ನಾನಾ ರಾಷ್ಟ್ರಗಳ ಜನರು ಯೋಗವನ್ನು ಕಲಿತು ಅಭ್ಯಾಸ ಮಾಡುವ ಮೂಲಕ ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸದೃಢಪಡಿಸಿಕೊಳ್ಳುತ್ತಿದ್ದಾರೆ. ರಕ್ತದೊತ್ತಡ ಸೇರಿದಂತೆ ಕಾಯಿಲೆಗಳನ್ನು ಹತೋಟಿಯಲ್ಲಿಡಲು ಕೂಡ ಯೋಗ ನೆರವು ನೀಡುತ್ತದೆ. 
 

Follow Us:
Download App:
  • android
  • ios