ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆಪ್ತ, ತೆಹ್ರಿಕ್‌ ಎ ಇನ್ಸಾಫ್‌ ಪಕ್ಷದ ಮುಖಂಡ ಆಜಂ ಖಾನ್‌ ಸ್ವಾತಿ (75) ಅವರ ಅಶ್ಲೀಲ ವಿಡಿಯೋವೊಂದು ವೈರಲ್‌ ಆಗಿದೆ. ಈ ವಿಡಿಯೋವನ್ನು ಸ್ವಾತಿ ಅವರ ಪತ್ನಿಗೆ ಅನಾಮಧೇಯ ನಂಬರ್‌ನಿಂದ ಕಳುಹಿಸಲಾಗಿದೆ.

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆಪ್ತ, ತೆಹ್ರಿಕ್‌ ಎ ಇನ್ಸಾಫ್‌ ಪಕ್ಷದ ಮುಖಂಡ ಆಜಂ ಖಾನ್‌ ಸ್ವಾತಿ (75) ಅವರ ಅಶ್ಲೀಲ ವಿಡಿಯೋವೊಂದು ವೈರಲ್‌ ಆಗಿದೆ. ಈ ವಿಡಿಯೋವನ್ನು ಸ್ವಾತಿ ಅವರ ಪತ್ನಿಗೆ ಅನಾಮಧೇಯ ನಂಬರ್‌ನಿಂದ ಕಳುಹಿಸಲಾಗಿದೆ.

ಈ ಕುರಿತಾಗಿ ಭಾನುವಾರ ಪ್ರತಿಕ್ರಿಯಿಸಿರುವ ಅವರು, ‘ಈ ವಿಡಿಯೋವನ್ನು ಯಾರೋ ಕಳುಹಿಸಿರುವುದಾಗಿ ನನ್ನ ಪತ್ನಿ ನನಗೆ ಹೇಳಿದಳು. ಆದರೆ ನನ್ನ ದೇಶದ ಮಕ್ಕಳು ಮತ್ತು ಮೊಮ್ಮಕ್ಕಳು ಕೇಳುತ್ತಿರುವುದರಿಂದ ನಾನು ಹೆಚ್ಚಿಗೆ ಏನೂ ಹೇಳಲಾರೆ’ ಎಂದು ಹೇಳುತ್ತಾ ಅವರು ಅಳಲು ಆರಂಭಿಸಿದರು. ಈ ವಿಡಿಯೋವನ್ನು ಪತ್ನಿಯೊಂದಿಗೆ ಕ್ವೆಟ್ಟಾಗೆ ಭೇಟಿ ನೀಡಿದಾಗ ಮಾಡಲಾಗಿದೆ ಎಂದು ಅವರು ಹೇಳಿದರು. ಆದರೆ ಇದು ನಕಲಿ ವಿಡಿಯೋ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಘಟನೆಗೆ ಕ್ಷಮೆಯಾಚಿಸಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ‘ನಾನು ದೇಶದ ಪರವಾಗಿ ಸ್ವಾತಿ ಅವರ ಕ್ಷಮೆ ಕೇಳುತ್ತೇನೆ. ಇದೊಂದು ಖಾಸಗಿ ವಿಚಾರವಾಗಿದ್ದು, ಇದನ್ನು ಹಂಚಿಕೊಂಡಿರುವುದರಿಂದ ಅವರ ಪತ್ನಿ ಹೆಚ್ಚು ನೋವಿಗೆ ತುತ್ತಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ

.ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ, ಆಸ್ಪತ್ರೆ ದಾಖಲು!

ಪಾಕಿಸ್ತಾನಿಯರಿಗೇ ಬೇಡವಾದ ಇಮ್ರಾನ್ ಖಾನ್ ನಮ್ಮೊಳಗಿರುವ ಜಾತ್ಯಾತೀತರಿಗೆ ಜೀವಂತ ದಂತ ಕಥೆ ಆಗುತ್ತಾನೆ ಎಂದಾದರೆ!!