Asianet Suvarna News Asianet Suvarna News

ಪಾಕಿಸ್ತಾನಿಯರಿಗೇ ಬೇಡವಾದ ಇಮ್ರಾನ್ ಖಾನ್ ನಮ್ಮೊಳಗಿರುವ ಜಾತ್ಯಾತೀತರಿಗೆ ಜೀವಂತ ದಂತ ಕಥೆ ಆಗುತ್ತಾನೆ ಎಂದಾದರೆ!!

2018 ರಲ್ಲಿ ಟರ್ಕಿಯ ಗೃಹ ಸಚಿವ ಸುಲೈಮಾನ್ ಸೋಯ್ಲುವನ್ನು ಭೇಟಿ ಮಾಡಿ ರಹಸ್ಯ ಸೈಬರ್ ಪಡೆ ರಚೆನೆಗೆ ಇಮ್ರಾನ್ ಒಪ್ಪಿಗೆ ನೀಡಿ ಬಂದಿದ್ದ. ಇಂತಹ ಇಮ್ರಾನ್ ಭಾರತದ ಪಾಲಿಗೆ ಎಂದಿಗಾದರೂ ಲೆಜೆಂಡ್ ಆಗೋಕೆ ಸಾಧ್ಯವೇ ಹೇಳಿ. ಒಂದು ವೇಳೆ ಆತ ತನ್ನ ಅಧಿಕಾರ ಅವಧಿಯಲ್ಲಿ ಇಷ್ಟು ವರ್ಷ ಬೇರೆ ಯಾವ ಪ್ರಧಾನಿಗಳು ಮಾಡದ ಕೌಶಲ್ಯ, ರಾಜತಾಂತ್ರಿಕ ನಡೆ, ನೆರೆಯ ದೇಶದ ಜೊತೆ ವ್ಯಾಪಾರ ವ್ಯವಹಾರ ಆರ್ಥಿಕತೆ ಏರ್ಪಡಿಸಿ ಪಾಕಿಸ್ತಾನದವರ ಕೈಗೆ ಬಾಂಬ್ ನೀಡುವ ಬದಲು ಉದ್ಯೋಗ ನೀಡಿದ್ದರೆ ಆತ ನಿಶ್ಚಿತವಾಗಿ ದಂತಕಥೆ ಆಗುತ್ತಿದ್ದ. 

imran khan book release in Bengaluru cancelled after stir pakistan Indian Secularists India san
Author
First Published Oct 29, 2022, 3:48 PM IST

-Ravi Shivaram, Political Reporter, Asianet Suvarna News 

2019 ಫೆಬ್ರುವರಿ 14, 2019 ರಂದು ಪುಲ್ವಾಮಾದಲ್ಲಿ ಭಾರತೀಯ ಯೋಧರ ರಕ್ತ ನೆಲದಲ್ಲಿ ಹರಿದಿತ್ತು. ಪಾಕಿಸ್ತಾನ ಬೆಂಬಲಿತ ಉಗ್ರರ ಹಿಂಬಾಗಿಲ ಹೊಡೆತಕ್ಕೆ 40 ಯೋಧರು ವೀರ ಸ್ವರ್ಗ ಸೇರಿದ್ದರು. ಪಕ್ಕದಲ್ಲೇ ಕುಳಿತು ಆಡಳಿತ ನಡೆಸುತ್ತಿದ್ದ ಒಂದು ಕಾಲದ ಕ್ರಿಕೆಟರ್ ಅಂದಿನ ಪ್ರಧಾನಿ ಇಮ್ರಾನ್ ಖಾನ್ ಪುಲ್ವಾಮಾ ದಾಳಿಗೆ ಒಳಗೊಳಗೆ ವಿಕೃತ ಆನಂದ ಪಟ್ಟಿದ್ದ. ಅಷ್ಟೇ ಅಲ್ಲ, ಪುಲ್ವಾಮಾ ದಾಳಿಯ ವರ್ಷದ ಬಳಿಕ ಆತನ ಕ್ಯಾಬಿನೆಟ್ ಸಚಿವ(ಸೈನ್ಸ್ ಆ್ಯಂಡ್ ಟೆಕ್ನಾಲಜಿ ಮಿನಿಸ್ಟರ್) ಫವಾದ್ ಚೌಧರಿ ನ್ಯಾಷನಲ್ ಅಸೆಂಬ್ಲಿಯಲ್ಲಿ ನಿಂತು ಪುಲ್ವಾಮಾ ದಾಳಿಯನ್ನು ವರ್ಣಿಸಿದ್ದು ಹೀಗೆ. "ಹಮ್ನೆ ಹಿಂದುಸ್ಥಾನ್ ಕೊ ಗುಸ್ ಕೆ ಮಾರಾ" ( we hit inda in their home) our success in pulwama is success of this under the leadership of imran khan" ಅವರದ್ದೆ ನೆಲದಲ್ಲಿ ನಿಂತು ಹಿಂದುಸ್ಥಾನಿಯರಿಗೆ ಹೊಡೆದಿದ್ದೇವೆ. ಪುಲ್ವಾಮಾ ದಾಳಿಯ ಯಶಸ್ಸು, ಇಮ್ರಾನ್ ಖಾನ್ ನಾಯಕತ್ವದಡಿ ಸಿಕ್ಕ ಗೆಲುವು ಎಂದು ಭಾಷಣ ಮಾಡುತ್ತಿದ್ದ.

ಆತನ ಮಾತಿಗೆ ಮೇಜು ತಟ್ಟಿ ಸ್ವಾಗತ ಮಾಡಿದ್ದವರು ಪಾಕಿಸ್ತಾನ ಅಸೆಂಬ್ಲಿಯ ಇತರ ಸದಸ್ಯರು. ಚೌಧರಿಯ ಮಾತನ್ನು ಕೇಳಿಸಿಕೊಳ್ಳುತ್ತಿದ್ದರೆ ಭಾರತೀಯರ ರಕ್ತ ಕುದಿಯುತ್ತದೆ. ಪುಲ್ವಾಮಾ ದಾಳಿಯ ಜವಬ್ದಾರಿಯನ್ನು ಪಾಕಿಸ್ತಾನ ಮೂಲದ ಜೈಷ್ ಎ ಮೊಹಮದ್ ಹೊತ್ತುಕೊಂಡಿತ್ತು. ಒಂದು ಉಗ್ರ ಸಂಘಟನೆ ನಡೆಸುವ ದಾಳಿಯನ್ನು ಇಮ್ರಾನ್ ಖಾನ್ ಸಂಪುಟದ ಸಚಿವ ಸದನದಲ್ಲಿ ನಿಂತು, ಇದು ಇಮ್ರಾನ್ ಖಾನ್ ನಾಯಕತ್ವದ ಗೆಲುವು ಎಂದು ಎದೆ ತಟ್ಟಿ ಹೇಳುತ್ತಾನೆ ಎಂದಾದರೆ ಅಥವಾ ನೆರೆಯ ದೇಶದ ಮೇಲೆ ಭಯೋತ್ಪಾದಕ ದಾಳಿ ನಡೆಸಿ ಅದು ತಮ್ಮ ಸರ್ಕಾರದ ಗೆಲುವು ಎಂದು ಹೇಳಿಕೊಳ್ಳಬೇಕಾದರೆ, ಇಮ್ರಾನ್ ಖಾನ್ ಯಾವ ಮಟ್ಟದ ನಾಯಕ ಇರಬೇಕು‌. ದುರಂತ ಎಂದರೆ ಸದಾ ಕಾಲ ಭಾರತದ ಮೇಲೆ ಹಗೆ ಸಾಧಿಸುತ್ತಾ ಭಯೋತ್ಪಾದಕ ಕೃತ್ಯ ಎಸಗಲು ಸಹಕಾರ ನೀಡುತ್ತಾ, ಚೀನಾಗೆ ಕತ್ತೆ ನಾಯಿಗಳನ್ನು ಮಾರಾಟ ಮಾಡಿ ಹೊಟ್ಟೆ ತುಂಬಿಕೊಳ್ಳುವ ದಯನೀಯ ಸ್ಥಿತಿಗೆ ಪಾಕಿಸ್ತಾವನ್ನು ತಂದು ನಿಲ್ಲಿಸಿದ ಗೋಮುಖವ್ಯಾಘ್ರ ಇಮ್ರಾನ್ ತನ್ನ ಅಧಿಕಾರ ಅವದಿ ಮುಗಿಯುವುದರೊಳಗೆ ಪಾಕಿಸ್ತಾನಿಯರಿಗೆ ಬೇಡವಾದ. ಆದರೆ ಭಾರತದಲ್ಲಿ ಅದರಲ್ಲೂ ನಮ್ಮ ರಾಜ್ಯ ಕರ್ನಾಟಕದಲ್ಲಿ ಮಾರುವೇಷ ತೊಟ್ಟ ಕೆಲವು ಆತ್ಮಗಳಿಗೆ ಇಮ್ರಾನ್ ಖಾನ್ ಒಬ್ಬ ಜೀವಂತ ದಂತಕಥೆಯಾಗುತ್ತಾನೆ. ಮಾತ್ರವಲ್ಲ ಆತನ ಪುಸ್ತಕ ಹೊರ ತರುವಲ್ಲಿಗೆ ವೇದಿಕೆ ಸಿದ್ದ ಮಾಡುತ್ತಾರೆ ಎಂದರೆ ಆಹಾ..! ಅದ್ಯಾವ ಪರಿಯ ಜಾತ್ಯಾತೀತೆ? 

ಭಾರತೀಯರ ಇತಿಹಾಸ ಎಂತಹುದು?: ಹಾಗೆ ಸ್ವಲ್ಪ ಹಿಂದಕ್ಕೆ ಹೋಗಿ ಭಾರತವನ್ನು ನೋಡಿದಾಗ ಈ ಕ್ಷಣ ಉದಮ್ ಸಿಂಗ್ ನೆನಪಾಗುತ್ತಾನೆ. 1919 ಏಪ್ರಿಲ್ 13 ಪಂಜಾಬಿನ ಪ್ರಮುಖ ಹಬ್ಬವಾದ ಬೈಸಾಖಿ ಆಚರಿಸುವ ದಿನದಂದು ಜಲಿಯನ್ ವಾಲಾ ಬಾಗ್ ನಲ್ಲಿ  ಹತ್ಯಾಕಾಂಡ ನಡೆಸಿದ್ದ ಬ್ರಿಟಿಷ್ ಅಧಿಕಾರಿ ಎಂ.ಡಯರ್'. ಅಮಾಯಕರ ನೆತ್ತರು ಹರಿಸಿ ತನ್ನ ವಿಶ್ರಾಂತಿ ಜೀವನವನ್ನು ಇಂಗ್ಲೆಂಡ್ ನಲ್ಲಿ ಕಳೆಯುತ್ತಿದ್ದ. ಇಲ್ಲಿ ರಕ್ತ ಹರಿಸಿ ಡಯರ್ ಅಲ್ಲಿ ತನ್ನ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುವ ಬಿಟ್ಟಿ ಭಾಷಣ ಬೇರೆ ಮಾಡುತ್ತಿದ್ದ. ಆದರೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೇಹವನ್ನು ಎದೆಗಪ್ಪಿ ಬದುಕಿಸುವ ಪ್ರಯತ್ನ ಮಾಡಿದ್ದ ಉದಮ್ ಸಿಂಗ್'ಗೆ ಡಯರ್ ಮೇಲಿನ ಕೋಪ ಎಷ್ಟಿತ್ತೆಂದರೆ ಘಟನೆ ನಡೆದು ಬರೋಬ್ಬರಿ ಇಪ್ಪತ್ತು ವರ್ಷಗಳ ಬಳಿಕ  ಡಯರ್ ನನ್ನು 1940 ಮಾರ್ಚ್ 13 ರಂದು ಅಜಾನುಬಾಹು, ಅಪ್ಪಟ ದೇಶಭಕ್ತ ಉದಮ್ ಸಿಂಗ್ ಸಂಧ್ಯಾಕಾಲದಲ್ಲಿ ಡಯರ್'ನ ಹಣೆಗೆ ಗುಂಡಿಟ್ಟು ಕೊಲ್ಲುವ ಮೂಲಕ ಅಮಾಯಕರ ನೆತ್ತರು ಹರಿಸಿದ್ದ ಡಯರ್ ನ ಉಸಿರು ನಿಲ್ಲಿಸಿದ್ದ.  20 ವರ್ಷ ಕಾದು, ದೇಶ ವಿದೇಶವನ್ನು ಹುಚ್ಚರಂತೆ ಸುತ್ತಿ, ಮನೆ ಮಡದಿ ಮಕ್ಕಳು ಸಂಸಾರ ತ್ಯಾಗ ಮಾಡಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣವಾದವನ ಮೇಲೆ ಸೇಡು ತೀರಿಸಿಕೊಂಡಿದ್ದ. ಅಂತವರ ಹೆಸರಿನಲ್ಲಿ ಸ್ವಾತಂತ್ರ್ಯ ಪಡೆದ ನಾವು, ಉದಮ್ ಸಿಂಗ್ ನಂತ ರಾಷ್ಟ್ರ ಪ್ರೇಮಿಯ ಶೌರ್ಯದಿಂದ ಸ್ವಾತಂತ್ರ್ಯಗೊಂಡ ಭಾರತದಲ್ಲಿ, ನಮ್ಮ ವೀರಸೈನಿಕರ ಸಾವಿಗೆ ಕಾರಣರಾದವರ ತಲೆ ತೆಗೆಯಲು ಈಗ ಪಾಕಿಸ್ತಾನಕ್ಕೆ ಹೋಗಬೇಕೆಂದು ಹೇಳುತ್ತಿಲ್ಲ. ಆದರೆ ಇಮ್ರಾನ್ ನಮಗೆ ಜೀವಂತ ದಂತಕಥೆ ( living legend) ಆಗುತ್ತಾನೆ ಅನ್ನೋದನ್ನು ಸಹಿಸಿಕೊಳ್ಳೋದಕ್ಕೆ ರಾಷ್ಟ್ರ ಪ್ರೇಮಿಗಳಿಗೆ ಒಪ್ಪಿಕೊಳ್ಳಲು ಸಹಿಸಿಕೊಳ್ಳಲು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಇಮ್ರಾನ್ ಖಾನ್ ಪುಸ್ತಕ ಬಿಡುಗಡೆ ಆಯಿತೊ ಆಗಲಿಲ್ಲವೋ ಅನ್ನೋದು ಇಲ್ಲಿ ಮುಖ್ಯವಲ್ಲ. ಆದರೆ ಅಂಥದ್ದೊಂದು ಆಲೋಚನೆ ಭಾರತದಲ್ಲಿ ಮೊಳಕೆ ಒಡೆದಿದ್ದೆ "ಜೀವಂತ ದುರಂತ."

ಇಮ್ರಾನ್ ಖಾನ್ ಅಧಿಕಾರ ಹೇಗಿತ್ತು?: ಇಮ್ರಾನ್ ತನ್ನ ನಾಲ್ಕು ವರ್ಷಗಳ ಅಧಿಕಾರ ಅವಧಿಯಲ್ಲಿ ಏನು ಮಾಡಿದ. ಅಥವಾ ಏನೆಲ್ಲಾ ಮಾಡಬಹದುದಿತ್ತು. ಆತ ಒಂದು ವೇಳೆ ಭಾರತದ ಜೊತೆ ಸ್ನೇಹ ಮಿಲಿನ ಸಾಧಿಸಿದ್ದರೆ, ಆತ ಒಂದು ವೇಳೆ ತನ್ನ ರಾಜತಾಂತ್ರಿಕ ನಿಲುವುಗಳಿಂದ ತನ್ನ ದೇಶವನ್ನಾದರೂ ಸುಧಾರಣೆ ಮಾಡಿದ್ದರೆ, ಪಾಕಿಸ್ತಾನವನ್ನು ಹಸಿವಿನಿಂದ ಮುಕ್ತ ಮಾಡಿದ್ದರೆ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕಾರ್ಯ ಕೈಗೊಂಡಿದ್ದರೆ ಕೊನೆ ಪಕ್ಷ ಇಮ್ರಾನ್ ಖಾನ್ ಪಾಕಿಸ್ತಾನಿಯರಿಗಾದರೂ ಜೀವಂತ ದಂಕಥೆ ಆಗುತ್ತಿದ್ದನೇನೊ. ಆದರೆ ಇಮ್ರಾನ್ ಖಾನ್'ಗೆ ತನ್ನ ಅಧಿಕಾರನ್ನೇ ಪೂರ್ಣ ಮಾಡಲು ಪಾಕಿಸ್ತಾನಿಯರೇ ಬಿಡಲಿಲ್ಲ. ಆತನ ಆಡಳಿತಕ್ಕೆ ಜನರ ಬೆಂಬಲ ಕ್ಷೀಣಿಸುತ್ತಾ ಬರುವ ಜೊತೆಗೆ ವಿಶ್ವಾಸಗಳಿಸುವಲ್ಲಿ ವಿಫಲನಾಗಿ ಅಧಿಕಾರ ಕಳೆದುಕೊಂಡ. ಅಂತವನು ಭಾರತದಲ್ಲಿ ಜೀವಂತ ದಂತಕಥೆ ಹೇಗಾಗುತ್ತಾನೆ ? 

ಪಾಕಿಸ್ತಾನದ ಆಸ್ತಿ ಕತ್ತೆ, ನಾಯಿ ಮತ್ತು ಎಮ್ಮೆ: ಅತಿ ಹೆಚ್ಚು ಕತ್ತೆ ಇರುವ ದೇಶಗಳ ಪೈಕಿ ಪಾಕಿಸ್ತಾನ ಮೂರನೇ ಸ್ಥಾನದಲ್ಲಿ ಇದೆ. ಪಾಪ ಕತ್ತೆ ಒಂದು ಪ್ರಾಣಿ. ಅದು ಎಲ್ಲಾದರೂ ಇರಲೇಬೇಕು . ಕತ್ತೆಯ ದುರಾದೃಷ್ಟ ಅದು ಪಾಕಿಸ್ತಾನದಲ್ಲಿ ಹೆಚ್ಚಾಗಿದೆ. ಅದೇ ಕತ್ತೆಯನ್ನು ಚೀನಾ ದೇಶಕ್ಕೆ ವ್ಯಾಪಾರ ಮಾಡಿ ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಇಮ್ರಾನ್ ಖಾನ್ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಕತ್ತೆ ಜೊತೆಗೆ ನಾಯಿಯೂ ಪಾಕಿಸ್ತಾನದಲ್ಲಿ ವಿಪರೀತ ಇದೆ.  ನೆರೆಯ ಅಪಘಾನಿಸ್ತಾನದಲ್ಲಿ ಕತ್ತೆ ಅತೀ ಕಡಿಮೆ ಬೆಲೆಗೆ ಸಿಗುವುದರಿಂದ ಅಪಘಾನಿಸ್ತಾನದಿಂದ ಕತ್ತೆಗಳನ್ನು ಖರೀದಿಸಿ ಬಳಿಕ ಅದನ್ನು ಚೀನಾಗೆ ರಪ್ತು ಮಾಡಲು ಇಮ್ರಾನ್ ಖಾನ್ ಸರ್ಕಾರ ಮುಂದಾಗಿತ್ತು. ಇಮ್ರಾನ್ ಖಾನ್ ಅಧಿಕಾರಕ್ಕೆ ಏರಿದ ಮೇಲೆ ಆ ದೇಶದ ಆರ್ಥಿಕ ದುಸ್ಥಿತಿ ಹೇಗಾಯಿತು ಅಂದರೆ, ಪ್ರಧಾನಿ ನಿವಾಸದಲ್ಲಿ ಇದ್ದ ಎಂಟು ಎಮ್ಮೆಗಳನ್ನು 23 ಲಕ್ಷ ರೂಪಾಯಿಗೆ ಮಾರಲಾಯಿತು. ಸರ್ಕಾರದ 61 ಲಕ್ಸುರಿ ಕಾರುಗಳನ್ನು ಮಾರಾಟ ಮಾಡುವ ತೀರ್ಮಾನದ ಜೊತೆಗೆ ನಾಲ್ಕು ಹೆಲಿಕಾಪ್ಟರ್ ಕೂಡ ಸೇಲ್ ಮಾಡಲು ನಿರ್ಧಿರಿಸಿದವನು ಇಮ್ರಾನ್ ಖಾನ್. ಅಷ್ಟೇ ಅಲ್ಲ, ಸ್ವತಃ ಪ್ರಧಾನಿ ಅಧಿಕೃತ ನಿವಾಸವನ್ನು ಬಾಡಿಗೆಗೆ ನೀಡಿ ಅಲ್ಲಿ ಮದುವೆ ಮಾಡಿಸಿದ ಜಗತ್ತಿನ ಅತ್ಯಂತ ಕನಿಷ್ಠ ದೇಶ ಪಾಕಿಸ್ತಾನ. ಈ ಎಲ್ಲಾ ಐತಿಹಾಸಿಕ ತೀರ್ಮಾನ ಮಾಡಿದ್ದು ದಿ ಗ್ರೇಟ್ ಜೀವಂತ ದುರಂತ ಕತೆಯ ಪಾತ್ರಧಾರಿ ಇಮ್ರಾನ್ ಖಾನ್.! 

ಭಯೋತ್ಪಾದನೆಯ ಪಿಚ್' ನಲ್ಲಿ ಬಡತನ: ಕೇವಲ ಭಯೋತ್ಪಾದಕರಿಗೆ ಆಹಾರ ಬಡಿಸಿ ಬಡವಾಗಿರುವ ಪಾಕಿಸ್ತಾನದ ಇತ್ತೀಚಿನ ಹಸಿವನ ಪ್ರಮಾಣ 2.5% ರಿಂದ 4% ಗೆ ಹೆಚ್ಚಿದೆ. ಇದನ್ನು ಸ್ವತಃ ವರ್ಡ್ ಬ್ಯಾಂಕ್ ಹೇಳಿದೆ. 2022ರಲ್ಲಿ ಪಾಕಿಸ್ತಾನ ಈವರೆಗಿನ ಸಾಲ 49.2 ಲಕ್ಷ ಕೋಟಿ ಪಾಕಿಸ್ತಾನ ರೂಪಾಯಿ. ಅಲ್ಲಿಗೆ ನಮ್ಮ ದೇಶದ ಒಟ್ಟು ಬಜೆಟ್' ಸೇರಿ ಸುಮಾರು ಅರ್ಧದಷ್ಟು ಸಾಲ ಪಾಕಿಸ್ತಾನ ಮಾಡಿದೆ. 

ಹಿಂದುಗಳಿಗೆ ನರಕ: ಇನ್ನು ನಮ್ಮಲ್ಲಿ ಕೆಲವರ ಕಣ್ಣಿಗೆ ಜೀವಂತ ದಂತ ಕಥೆಯಂತೆ ಕಾಣುವ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ಮೇಲಾದರೂ ಜಾತ್ಯಾತೀತ ನಿಲುವು ಹೊಂದಿದ್ದೇನೆ ಖಂಡಿತ ಇಲ್ಲ. 1947ರ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಇದ್ದ ಹಿಂದುಗಳು 20.5%. ಈಗ ಪಾಕಿಸ್ತಾನದಲ್ಲಿ ಇರುವ ಹಿಂದುಗಳ ಸಂಖ್ಯೆ 2.14% ಮಾತ್ರ. 22 ಕೋಟಿ ಜನಸಂಖ್ಯೆ ಇರುವ ಪಾಕಿಸ್ತಾನದಲ್ಲಿ ಪ್ರಮುಖವಾಗಿ ನಾಲ್ಕು ಜಿಲ್ಲೆಗಳಲ್ಲಿ ಹಿಂದುಗಳು ಬಹುಸಂಖ್ಯಾತರು ಎನ್ನುವ ಮಟ್ಟಿಗೆ ಇದ್ದರು. ಉಮರ್ ಕೋಟ್, ತರ್'ಪಾರ್ಕರ್, ಮಿರ್ಪುರ್ಖಾಸ್, ಸಂಘಾರ್ ಆದ್ರೆ ಈಗ ಅಲ್ಲಿಯೂ ಯಥೇಚ್ಛವಾಗಿ ಹಿಂದುಗಳ ಸಂಖ್ಯೆ ಕ್ಷೀಣಿಸಿದೆ. ಅದಕ್ಕೆ ಕಾರಣ ಬಲವಂತದ ಮತಾಂತರ. ಹಿಂದು ಯುವತಿಯರ ಕಿಡ್ನಾಪ್. 2004 ರಿಂದ 2018 ರ ತನಕ ಬರೋಬ್ಬರಿ 7430 ಹಿಂದು ಹುಡುಗಿಯರ ಕಿಡ್ನಾಪ್ ಆಗಿದೆ. ಬಲವಂತವಾಗಿ ಮದುವೆ ಆಗೋದು ಧರ್ಮ ಬದಲಿಸಿ ಕೈ ತೊಳೆದುಕೊಳ್ಳುವುದು. ಇದು ಪಾಕಿಸ್ತಾನದ ದೇಶದ ಬಂಡವಾಳ. ಅದರ ಬಗ್ಗೆ ಇಲ್ಲಿರುವ ಜಾತ್ಯಾತೀತ ನಾಯಕರು ಯಾರಾದರೂ ದನಿ ಎತ್ತುವ ಎದೆಗಾರಿಕೆ ತೋರಿಸಿದ್ದಾರೆಯೆ. ಸಿಎಎ ಕಾನೂನು ತರಲು ಮುಂದಾದರೆ ಉಗ್ರ ಹೋರಾಟ ಹಾರಟ ಮಾಡುವ ವೇಷದಾರಿಗಳಿಗೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭೀಭತ್ಸದ ಬಗ್ಗೆ ಮಾತನಾಡುವಾಗ ಯಾಕೆ ಜಾತ್ಯಾತೀತ ನೆನಪಾಗೋದಿಲ್ಲ. 

ಬೆಂಗಳೂರು: ಕಲಾಗ್ರಾಮದಲ್ಲಿ ಪಾಕ್‌ ಮಾಜಿ ಪ್ರಧಾನಿ 'ಇಮ್ರಾನ್ ಖಾನ್' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ: ಹಿಂದೂ ಸಂಘಟನೆ ಆಕ್ರೋಶ

ವಿಭಜನೆಗೂ ಮುನ್ನ ಹೇಗಿತ್ತು: ಭಾರತ ಪಾಕಿಸ್ತಾನ ವಿಭಜನೆ ಆಗುವ ಮೊದಲು ಇಸ್ಲಾಂ 69% ,ಹಿಂದುಗಳು 24% ಕ್ರಿಶ್ಚಿಯನ್ 1.22% , ಸಿಖ್ 6% ಜನಸಂಖ್ಯೆ ಇತ್ತು. ಕ್ರಮೇಣ ಇಂತಹ ಚಟುವಟಿಕೆಗಳಿಂದ ಆ ಸಂಖ್ಯೆ ಕ್ಷೀಣಿಸಿ ಹಿಂದುಗಳು2.14% ಸಿಖ್ 0.01% ಮತ್ತು ಇಸ್ಲಾಂ ಧರ್ಮದವರು 96.47% ಗೆ ಬಂದು ನಿಂತಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 13.73% ಇದ್ದ ಹಿಂದುಗಳ ಸಂಖ್ಯೆ 0.2% ಆಗಿದೆ. ಸಿಖ್ ಸಮುದಾಯ 8.82% ನಿಂದ ಅಕ್ಷರಶಃ 0% ತಲುಪಿದೆ ಅಂದರೆ ಪಾಕಿಸ್ತಾನದ ಮತಾಂಧತೆ ಅರ್ಥ ಆಗುತ್ತದೆ. ಅದೇ ರೀತಿ ಬಲುಚಿಸ್ಥಾನ್, ಸಿಂದ್ ಪ್ರಾಂತ್ಯದಲ್ಲಿ ಹಿಂದುಗಳು 27.12% ಇದ್ದವರು, ಈಗ 8.73% ತಲುಪಿದೆ. ಅದರಲ್ಲೂ ವಿಶೇಷವಾಗಿ ಸಿಖ್ ಸಮುದಾಯವಂತು ಈ ಮೂರು ಪ್ರಾಂತ್ಯದಲ್ಲಿ 0% !! ಈ ಅಂಕಿ ಸಂಖ್ಯೆ ನೋಡಿದಾಗ ಸಂವಿಧಾನ ಶಿಲ್ಪಿ ಅಂಬೇಡ್ಕರ್ ನೆನಪಾಗುತ್ತಾರೆ. ಭಾರತ ವಿಭಜನೆ ಆಗೋದೆ ಆಗಿದ್ದರೆ ಭಾರತದಲ್ಲಿ ಇದ್ದ ಮುಸ್ಲಿಮರು ಪಾಕಿಸ್ತಾನಕ್ಕೂ, ಪಾಕಿಸ್ತಾನದಲ್ಲಿ ಇದ್ದ ಹಿಂದುಗಳು ಭಾರತಕ್ಕೆ ಮರಳಲಿ ಎಂದಿದ್ದ ಅಂಬೇಡ್ಕರ್ ಅವರ ಉದ್ದೇಶ ಆಶಯ ಈಗ ಅರ್ಥವಾಗುತ್ತದೆ. 

Imran Khan: ನವಾಜ್‌ ರೀತಿ ಓಡಿಹೋಗಲ್ಲ, ಐಎಸ್‌ಐ ಜಾತಕ ಬಯಲು ಮಾಡ್ತೀನಿ ಎಂದ ಪಾಕ್‌ ಮಾಜಿ ಪ್ರಧಾನಿ!

ಹಿಂದು ದೇವಾಲಯ ಧ್ವಂಸ: ಇನ್ನು ಪಾಕಿಸ್ತಾನದಲ್ಲಿ ಹಿಂದು ದೇವಾಲಯಗಳ ಕತೆ, ಸಿಖ್ ಗುರುದ್ವಾರದ ಮೇಲೆ ದಾಳಿ ನಿತ್ಯ ನಿರಂತರ ಎನ್ನುವಂತಾಗಿದೆ. 2021 ರಂದು ಕರಾಚಿಯಲ್ಲಿ ಹಿಂದುಗಳ ದೇವಸ್ಥಾನ ದ್ವಂಸ. ಬಾಂಗ್ ಸಿಟಿಯಲ್ಲಿ ಗಣೇಶ ದೇವಸ್ಥಾನ, ಶ್ರೀರಾಮ ದೇವಸ್ಥಾನ ,ಮಾರುತಿ ಮಂದಿರ, ನೂರು ವರ್ಷ ಇತಿಹಾಸ ಇದ್ದ ದೇವಾಲಯದ ಮೇಲೆ ರಾವಲ್ಪಿಂಡಿಯಲ್ಲಿ ದಾಳಿ, ಸಿಂದ್ ಪ್ರಾಂತ್ಯದಲ್ಲಿ ಇದ್ದ ರಾಣಿ ಮಾತಾ ಭಾಟಿಯಾನಿ ದೇವಸ್ಥಾನದ ಮೇಲೆ ದಾಳಿ ಹೀಗೆ ಸಾಲು ಸಾಲು ದಾಳಿಗಳನ್ನು ಪಾಕಿಸ್ತಾನಿಗಳು ಮಾಡುವ ಮೂಲಕ ಭಾರತದಲ್ಲಿ ಮೊಘಲರು ಮಾಡಿದ ದಾಳಿಯನ್ನು ಈಗ ಅಲ್ಲಿ ನೆನಪಿಸುತ್ತಿದ್ದಾರೆ. ಲಂಡನ್ ಮೂಲದ ಪಾಕಿಸ್ತಾನಿ ಮಾನವ ಹಕ್ಕು ಹೋರಾಟದ ಕಾರ್ಯಕತೆ( justice for minorities in Pakistan) ಅನಿಲಾ ಗುಲ್ಜಾರ್ 2020 ರಲ್ಲಿ ಒಮ್ಮೆ ಹೀಗೆ ಪೋಸ್ಟ್ ಮಾಡಿದ್ದರು. " ಸಿಂದ್ ಪ್ರಾಂತ್ಯದ ಸುತ್ತಮುತ್ತಲೂ ಇದ್ದ 428 ದೇವಸ್ಥಾನಗಳ ಪೈಕಿ ಈಗ ಕೇವಲ 28 ದೇವಸ್ಥಾನ ಮಾತ್ರ ಉಳಿದಿವೆ ಎಂದು" ಅಲ್ಲಿಗೆ ಪಾಕಿಸ್ತಾನದಲ್ಲಿ ಹಿಂದುಗಳ ಸ್ಥಿತಿಗತಿ ಹೇಗಿದೆ ಎಂದು ಎಂತದ್ದೆ ಜಾತ್ಯಾತೀತ ವ್ಯಕ್ತಿಗೂ ಅರ್ಥವಾಗದದ್ದೇನಲ್ಲ. ಇಂತಹ ದೊಂಬಿ ದುರ್ಘಟನೆ ದಾಳಿ ತಡೆಯಲು ಕ್ರಿಕೆಟರ್‌ ಇಮ್ರಾನ್ ಖಾನ್ ಒಂದು ಸಣ್ಣ ಪ್ರಯತ್ನವನ್ನೇನಾದರೂ ತನ್ನ ಅಧಿಕಾರ ಅವಧಿಯಲ್ಲಿ ಮಾಡಿದ್ದರೆ ಆತ ಜೀವಂತ ದಂತಕಥೆ ಆಗುತ್ತಿದ್ದ. 

ಭಾರತದ ಮೇಲೆ ದಾಳಿಗೆ ಸೈಬರ್ ಪಡೆ: ಭಾರತದ ಮೇಲೆ ಸದಾ ಕತ್ತಿ ಮಸಿಯುತ್ತಲೇ ಇರುವ ಪಾಕಿಸ್ತಾನ ಭಾರತದ ಎದುರು ಗಟ್ಟಿ ಉಸಿರು ಬಿಡುವ ತಾಕತ್ತು ಇಲ್ಲದ ದೇಶ. ಆದರೂ ಅವರ ಉಪಟಳ ಒಂದೇ ಎರಡೇ ಭಾರತದ ಮೇಲೆ ದಾಳಿ ಮಾಡಲು ಇಮ್ರಾನ್ ಅಧಿಕಾರಕ್ಕೆ ಏರಿದ ಮೊದಲಿಗೆ ಮಾಡಿದ್ದು ಟರ್ಕಿ ಜೊತೆ ಸೇರಿ ಭಾರತದ ವಿರುದ್ಧ ಸೈಬರ್ ಪಡೆ ಕಟ್ಟಿದ್ದು. 2018 ರಲ್ಲಿ ಟರ್ಕಿಯ ಗೃಹ ಸಚಿವ ಸುಲೈಮಾನ್ ಸೋಯ್ಲುವನ್ನು ಭೇಟಿ ಮಾಡಿ ರಹಸ್ಯ ಸೈಬರ್ ಪಡೆ ರಚೆನೆಗೆ ಇಮ್ರಾನ್ ಒಪ್ಪಿಗೆ ನೀಡಿ ಬಂದಿದ್ದ. ಇಂತಹ ಇಮ್ರಾನ್ ಭಾರತದ ಪಾಲಿಗೆ ಎಂದಿಗಾದರೂ ಲೆಜೆಂಡ್ ಆಗೋಕೆ ಸಾಧ್ಯವೇ ಹೇಳಿ. ಒಂದು ವೇಳೆ ಆತ ತನ್ನ ಅಧಿಕಾರ ಅವಧಿಯಲ್ಲಿ ಇಷ್ಟು ವರ್ಷ ಬೇರೆ ಯಾವ ಪ್ರಧಾನಿಗಳು ಮಾಡದ ಕೌಶಲ್ಯ, ರಾಜತಾಂತ್ರಿಕ ನಡೆ, ನೆರೆಯ ದೇಶದ ಜೊತೆ ವ್ಯಾಪಾರ ವ್ಯವಹಾರ ಆರ್ಥಿಕತೆ ಏರ್ಪಡಿಸಿ ಪಾಕಿಸ್ತಾನದವರ ಕೈಗೆ ಬಾಂಬ್ ನೀಡುವ ಬದಲು ಉದ್ಯೋಗ ನೀಡಿದ್ದರೆ ಆತ ನಿಶ್ಚಿತವಾಗಿ ದಂತಕಥೆ ಆಗುತ್ತಿದ್ದ. ಆದರೆ ಕ್ರಿಕೆಟರ್‌ ಇಮ್ರಾನ್ ಖಾನ್ ಗೆ ಕ್ರಿಕೆಟ್ ನಲ್ಲಿ ಯಾರ್ಕರ್ ಎಸೆದು ಅಭ್ಯಾಸ ಅಲ್ಲಿ ಬಾಲ್ ಎಸೆದ. ಪ್ರಧಾನಿ ಆದಮೇಲೆ ಬೇರೆಯವರ ಕೈಗೆ ಬಾಂಬ್ ನೀಡಿ ಭಾರತದ ಮೇಲೆ ಎಸೆದ. ಆದರೂ ನಮ್ಮಲ್ಲಿಯ ಕೆಲ ಆತ್ಮಗಳಿಗೆ ಆತ ಜೀವಂತ ದಂತಕಥೆ.

Follow Us:
Download App:
  • android
  • ios