ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಭಯೋತ್ಪಾದನಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ. 

ಇಸ್ಲಾಮಾಬಾದ್(ಆ.21): ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ಕಳೆದುಕೊಂಡ ಬಳಿಕ ಸಂಕಷ್ಟಗಳು ಹೆಚ್ಚಾಗಿದೆ. ಸೇನಾ ಮುಖ್ಯಸ್ಥರ ಆಯ್ಕೆ ವಿಚಾರದಲ್ಲಿನ ಹೇಳಿಕೆ ಸೇರಿದಂತೆ ಹಲವು ವಿವಾದಗಳು ಇಮ್ರಾನ್ ಸುತ್ತಿಕೊಂಡಿದೆ. ಇದರ ಬೆನ್ನಲ್ಲೇ ಇಮ್ರಾನ್ ಖಾನ್‌ಗೆ ಬಂಧನ ಭೀತಿ ಎದುರಾಗಿದೆ. ಇಂದು(ಆ.21) ಇಮ್ರಾನ್ ಖಾನ್ ವಿರುದ್ಧ ಭಯೋತ್ಪದನಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಶನಿವಾರ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಇಮ್ರಾನ್ ಖಾನ್ ಬಹಿರಂಗವಾಗಿ ನ್ಯಾಯಧೀಶರು ಹಾಗೂ ಇಬ್ಬರು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಇದೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಶೆಹಬಾಜ್ ಷರೀಫ್ ಸರ್ಕಾರ, ಬೆದರಿಕೆ ಕೇಸ್ ಬದಲು ಭಯೋತ್ಪದನಾ ಕಾಯ್ದೆಯಡಿ ಕೇಸ್ ದಾಖಲಿಸಿದೆ. ಈ ಕೇಸ್‌ ಬಿಗಿಯಾಗುವ ಎಲ್ಲಾ ಲಕ್ಷಣಗಳಿವೆ. ಇಷ್ಟೇ ಅಲ್ಲ ಜಾಮೀನು ರಹಿತ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಇಮ್ರಾನ್ ಖಾನ್ ಬಂಧನವಾಗುವ ಸಾಧ್ಯತೆ ಇದೆ ಎಂದು ಪಾಕ್ ಸರ್ಕಾರದ ಮೂಲಗಳು ಹೇಳಿವೆ.

ಶನಿವಾರ ಆಯೋಜಿಸಿದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಇಮ್ರಾನ್ ಖಾನ್ ಮಹಿಳಾ ನ್ಯಾಯಧೀಶರು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಶಹೆಬಾಜ್ ಷರೀಫ್ ಸರ್ಕಾರ ಇದೀಗ ಪ್ರಬಲ ಕಾಯ್ದೆಯಡಿ ಕೇಸ್ ದಾಖಲಿಸಿದೆ. ಕಳೆದ ವಾರದ ಇಮ್ರಾನ್ ಖಾನ್ ಆಪ್ತ ಶೆಹಗಾಬ್ ಗಿಲ್ ಬಂಧಿಸಲಾಗಿದೆ. ಇದೀಗ ಇಮ್ರಾನ್ ಸರದಿ ಎಂದು ಪಾಕಿಸ್ತಾನ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿದೆ.

4 ಲಕ್ಷ ಪಾಕ್​​ ಪ್ರಜೆಗಳ ಮುಂದೆ ಭಾರತದ ತಾಕತ್ತು ಹೇಳಿದ ಇಮ್ರಾನ್​ ಖಾನ್

ಪಾಕಿಸ್ತಾನದ ಟೀವಿ ಚಾನೆಲ್‌ಗಳಲ್ಲಿ, ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸಾರ್ವಜನಿಕ ರಾರ‍ಯಲಿ ಮತ್ತು ಅದರ ಭಾಷಣಗಳ ನೇರ ಪ್ರಸಾರ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ದೇಶದ್ರೋಹದ ಪ್ರಕರಣದಲ್ಲಿ ಕಳೆದ ವಾರ ಬಂಧಿಸಲ್ಪಟ್ಟತಮ್ಮ ಆಪ್ತ ಶೆಹಬಾಜ್‌ ಗಿಲ್‌ ಜೊತೆ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಶನಿವಾರ ಭಾಷಣವೊಂದರಲ್ಲಿ ಕಿಡಿಕಾರಿದ್ದ ಇಮ್ರಾನ್‌, ಪ್ರಕರಣ ದಾಖಲಿಸಿದ ಪೊಲೀಸರು, ಮಹಿಳಾ ಜಡ್ಜ್‌, ಪಾಕ್‌ ಚುನಾವಣಾ ಆಯೋಗದ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದರು. ಇಂಥ ಭಾಷಣ ಸಾರ್ವಜನಿಕ ಶಾಂತಿ, ಸೌಹಾರ್ಧತೆಗೆ ಧಕ್ಕೆ ಮತ್ತು ಪ್ರಚೋದನಾಕಾರಿ ಎಂದು ಸರ್ಕಾರ ಈ ಕ್ರಮ ಕೈಗೊಂಡಿದೆ.

ಕೇವಲ ಇದೊಂದೆ ಪ್ರಕರಣವಲ್ಲ, ಇಮ್ರಾನ್ ಮೇಲಿನ ಕೆಲ ಪ್ರಕರಣಗಲ್ಲೂ ಬಂಧನ ಭೀತಿ ಎದುರಿಸುತ್ತಿದ್ದಾರೆ. ಅಕ್ರಮ ದೇಣಿಗೆ ಪ್ರಕರಣದಲ್ಲಿ ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದರೂ ಅವರು ಹಾಜರಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಶೀಘ್ರವೇ ತನಿಖಾ ಸಂಸ್ಥೆ ಬಂಧಿಸುವ ಸಾಧ್ಯತೆಗಳಿವೆ.ಫೆಡೆರಲ್‌ ತನಿಖಾ ಸಂಸ್ಥೆ (ಎಫ್‌ಐಎ) ಖಾನ್‌ಗೆ ಮುಂದಿನಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ 2ನೇ ನೊಟೀಸ್‌ ನೀಡಿದೆ. ಈ ಹಿಂದೆ ಬುಧವಾರ ಇಮ್ರಾನ್‌ಗೆ ನೋಟಿಸ್‌ ನೀಡಿದರೂ ಅವರು ಎಫ್‌ಐಎ ಎದುರು ವಿಚಾರಣೆಗೆ ಹಾಜರಾಗಲು ತಿರಸ್ಕರಿಸಿದ್ದರು.

ಪಾಕ್ ಪ್ರಧಾನಿ ಶೆಹಬಾಜ್ - ಇಮ್ರಾನ್ ಖಾನ್ ನಡುವೆ ಟ್ವಿಟ್ಟರ್‌ ವಾರ್