ಪಾಕ್‌ನಲ್ಲಿ ಧರುಂದರ್ ಸಿನಿಮಾ ಬ್ಯಾನ್ ಆದ್ರೂ ನಾಯಕ ಬಿಲ್ವಾಲ್ ಭುಟ್ಟೋ ಈವೆಂಟ್‌ನಲ್ಲಿ ವೈರಲ್ ಹಾಡು, ಪಾಕಿಸ್ತಾನ ವಿರೋಧಿ ಸಿನಿಮಾ ಎಂದು ಬ್ಯಾನ್ ಮಾಡಲಾಗಿದೆ. ಆದರೆ ಪಾಕಿಸ್ತಾನದ ಪ್ರಮುಕ ಕಾರ್ಯಕ್ರಮದಲ್ಲಿ ಇದೀಗ ಅಕ್ಷಯ್ ಖನ್ನ ಎಂಟ್ರಿಗೆ ಬಳಸಿರುವ FA9LA ಹಾಡು ಎಲ್ಲೆಡೆ ಬಳಕೆಯಾಗುತ್ತಿದೆ.
ಇಸ್ಲಾಮಾಬಾದ್ (ಡಿ.12) ಬಾಲಿವುಡ್ ಧುರಂದರ್ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಆದರೆ ಪಾಕಿಸ್ತಾನ ಸೇರಿದಂತೆ 6 ಮುಸ್ಲಿಂ ರಾಷ್ಟ್ರಗಳು ಈ ಸಿನಿಮಾ ಬ್ಯಾನ್ ಮಾಡಿದೆ. ಧುರಂದರ್ ಸಿನಿಮಾ ಪಾಕಿಸ್ತಾನ ವಿರೋಧಿ ಅನ್ನೋ ಕಾರಣಕ್ಕೆ ಈ ಸಿನಿಮಾ ಬ್ಯಾನ್ ಮಾಡಲಾಗಿದೆ. ಸಿನಿಮಾ ಬ್ಯಾನ್ ಆಗಿರುವ ಕಾರಣ ಧುರಂದರ್ ಅತೀ ಹೆಚ್ಚು ಡೌನ್ಲೋಡ್ ಪಾಕಿಸ್ತಾನದಲ್ಲಿ ಆಗಿದೆ ಅನ್ನೋ ಮಾಹಿತಿಗಳು ಬಯಲಾಗಿದೆ. ಇದೀಗ ಧುರಂದರ್ ಸಿನಿಮಾ ಬ್ಯಾನ್ ಆದರೂ ಈ ಸಿನಿಮಾಮದಲ್ಲಿ ಅಕ್ಷಯ್ ಖನ್ನಾ ಎಂಟ್ರಿ ವೇಳೆ ಬಳಸಿರುವು FA9LA ಹಾಡನ್ನು ಪಾಕಿಸ್ತಾನದ ಹಲವು ಕಾರ್ಯಕ್ರಮದಲ್ಲಿ ಪ್ಲೇ ಮಾಡುತ್ತಿದ್ದಾರೆ. ವಿಶೇಷ ಅಂದರೆ ಪಾಕಿಸ್ತಾನದ ಪ್ರಮುಖ ನಾಯಕ ಬಿಲ್ವಾಲ್ ಭುಟ್ಟೋ ಕಾರ್ಯಕ್ರಮದಲ್ಲೂ ಇದೇ FA9LA ಹಾಡನ್ನು ಬಳಕೆ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನದಲ್ಲೂ ಧುರಂದರ್ ಸಿನಿಮಾ ಹಾಡು ಸದ್ದು
ರಣವೀರ್ ಸಿಂಗ್ ಅಬಿನಯದ ಈ ಧುರಂದರ್ ಸಿನಿಮಾದಲ್ಲಿ ಅಕ್ಷಯ್ ಖನ್ನ ರೆಹಮಾನ್ ಡಕಾಯಿತ್ ಪಾತ್ರ ಮಾಡಿದ್ದಾರೆ. ಅಕ್ಷಯ್ ಖನ್ನಾ ಎಂಟ್ರಿಗೆ ಬಹ್ರೈನ್ ರ್ಯಾಪ್ ಸಿಂಗರ್ ಫ್ಲಿಪರಾಚಿ ಹಾಡಿರುವ FA9LA ಹಾಡನ್ನು ಬಳಸಲಾಗಿದೆ. ಅಕ್ಷಯ್ ಖನ್ನ ಸೀನ್ ಹಾಗೂ ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಹೀಗಾಗಿ ಎಲ್ಲೆಡೆ ಈ ಕ್ಲಿಪ್ ವೈರಲ್ ಆಗುತ್ತಿದೆ. ಇದೇ ಹಾಡನ್ನು ಪಾಕಿಸ್ತಾನ ಪ್ರಮುಖ ನಾಯಕ ಬಿಲ್ವಾಲ್ ಭುಟ್ಟೋ ಹಾಜರಿದ್ದ ಕಾರ್ಯಕ್ರಮದಲ್ಲೂ ಬಳಸಲಾಗಿದೆ. ಬಿಲ್ವಾಲ್ ಇತರ ಕೆಲ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.ವೇದಿಕೆಯಲ್ಲಿರುವಾಗಲೇ ಧುರಂದರ್ ಸಿನಿಮಾದ ವೈರಲ್ ಹಾಡನ್ನು ಪ್ಲೇ ಮಾಡಲಾಗಿದೆ.
ದುರಂದ್ ಸಿನಿಮಾ ವರೆಗೆ FA9LA ಹಾಡು ಅರಬ್ ಸೇರಿದಂತೆ ಕೆಲ ರಾಷ್ಟ್ರದಲ್ಲಿ ಮೆಲ್ಲನೆ ಸದ್ದು ಮಾಡಿ ಮರೆಯಾಗಿತ್ತು. ಆದರೆ ದುರಂದರ್ ಸಿನಿಮಾ ಬಳಿಕ ಭಾರಿ ವೈರಲ್ ಆಗಿದೆ. ಎಲ್ಲರೂ ಇದೇ ಹಾಡನ್ನು ಗುನುಗುತ್ತಿದ್ದಾರೆ. ಪಾಕಿಸ್ತಾನದಲ್ಲೂ ಇದೇ ಹಾಡು ಬಳಕೆಯಾಗುತ್ತಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಇದೀಗ ಈ ಹಾಡು ಬಳಕೆ ಮಾಡಲಾಗುತ್ತಿದೆ. ಈ ಹಾಡು ಬಳಕೆಗೆ ಮಿಶ್ರ ಪ್ರತಿಕಿಯೆಗಳು ವ್ಯಕ್ತವಾಗಿದೆ.
ಒಂದು ಕಡೆ ಕೇಸು, ಮತ್ತೊಂಡೆ ಹಾಡು
ಪಾಕಿಸ್ತಾನದಲ್ಲಿ ಧುರಂದರ್ ಸಿನಿಮಾ ನಿಷೇಧ ಕುರಿತು ಪ್ರಕರಣ ಕೋರ್ಟ್‌ನಲ್ಲಿದೆ. ಇತ್ತ ಇದೇ ಸಿನಿಮಾದ ಹಾಡು ವೇದಿಕೆಗಳಲ್ಲಿ ಪಾಕಿಸ್ತಾನ ಪ್ರಮುಖ ನಾಯಕರೇ ಬಳಸುತ್ತಿದ್ದಾರೆ ಎಂದು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.ಧುರಂದರ್ ಸಿನಿಮಾ ಲಭ್ಯವಿಲ್ಲದ ಕಾರಣ ವಿವಿಧ ಮೂಲಗಳಲ್ಲಿ ಪಾಕಿಸ್ತಾನದಲ್ಲೇ ಅತೀ ಹೆಚ್ಚು ಡೌನ್ಲೋಡ್ ಕಂಡಿದೆ ಎಂದು ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತ ಧುರಂದರ್ ಸಿನಿಮಾ ಹಾಡು ಯಾಕೆ ಬಳಸಲಾಗಿದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇದೇ ವೇಳೆ ದುರಂದರ್ ಸಿನಿಮಾದಲ್ಲಿ ಬಳಸಿರುವುದು ನಮ್ಮ ಬಹ್ರೇನ್ ರ್ಯಾಪರ್ ಸಾಂಗ್. ಹೀಗಾಗಿ ಈ ಹಾಡನ್ನು ನಾವು ಬಳಸಿದ್ದೇವೆ. ಇದು ಧುರಂದರ್ ಸಿನಿಮಾ ಹಾಡಲ್ಲ ಎಂದು ಹಲವರು ಸ್ಪಷ್ಟನೆ ನೀಡಿದ್ದಾರೆ.


