ಚೀನಾಗೆ ಪಾಕಿಸ್ತಾನ ಶಾಕ್| ಅನೈತಿಕತೆ ಹಾಗೂ ಅಶ್ಲೀಲತೆಯಿಂದ ಕೂಡಿದ ಮಾಹಿತಿಯನ್ನು ಪ್ರಸಾರ | ಪಾಕಿಸ್ತಾನದಲ್ಲಿ ಬಿಗೋ ಲೈವ್ ಆ್ಯಪ್ ಬಂದ್, ಟಿಕ್‌ಟಾಕ್‌ಗೆ ಎಚ್ಚರಿಕೆ
ಇಸ್ಲಾಮಾಬಾದ್(ಜು.22): ಚೀನಾ ಮೂಲಕ ಟಿಕ್‌ಟಾಕ್ ಆ್ಯಪ್ ಅನ್ನು ಭಾರತ ಬ್ಯಾನ್ ಮಾಡಿದ ಬೆನ್ನಲ್ಲೇ, ಪಾಕಿಸ್ತಾನ ಕೂಡ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಇದೇ ವೇಳೆ ಅನೈತಿಕತೆ ಹಾಗೂ ಅಶ್ಲೀಲತೆಯಿಂದ ಕೂಡಿದ ಮಾಹಿತಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಸಿಂಗಾಪುರ ಮೂಲದ ಬಿಗೋ ಲೈವ್ ಆ್ಯಪ್‌ಗೆ ನಿಷೇಧ ಹೇರಿದೆ.
ಟಿಕ್‌ಟಾಕ್ ಗೆ ಪರ್ಯಾಯವಾಗಿ ರೀಲ್ಸ್ ಬಿಟ್ಟ ಇನ್‌ಸ್ಟಾಗ್ರಾಂ!
ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಸೆನ್ಸಾರ್ ನಿಯಮಾವಳಿಗಳು ಕಠಿಣವಾಗಿದ್ದು, ಈ ಆ್ಯಪ್‌ಗಳನ್ನು ಅದನ್ನು ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆ್ಯಪ್‌ಗಳಲ್ಲಿರುವ ಮಾಹಿತಿಗಳು ಸಮಾಜಕ್ಕೆ ಋುಣಾತ್ಮಕ ಸಂದೇಶ ರವಾನಿಸುತ್ತಿದ್ದು, ಈ ಬಗ್ಗೆ ಆ್ಯಪ್‌ಗಳಿಗೆ ಎಚ್ಚರಿಕೆ ನೀಡಲಾಗಿತ್ತು.
ಆದರೆ ಕಂಪನಿಗಳಿಂದ ಬಂದ ಉತ್ತರ ತೃಪ್ತಿದಾಯಕವಾಗಿಲ್ಲವಾದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸೆನ್ಸಾರ್ ನಿಯಮಾವಳಿಗಳ ರಕ್ಷಣೆಗೆ ಸರ್ಕಾರ ಯಾವ ಮಟ್ಟದ ಕ್ರಮ ತೆಗೆದುಕೊಳ್ಳಬಹುದು ಎನ್ನುವುದರ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಪಾಕಿಸ್ತಾನ ದೂರ ಸಂಪರ್ಕ ಸಚಿವಾಲಯ ಹೇಳಿದೆ.
